ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ಖಂಡೇರಾಯನಿಗೆ ಹರಕುಬಾಯಿ, ಉದಾಬಾಯಿಗಳೆಂಬ ಇಬ್ಬರು ಜೋಷ ಸೋದರಿಯರಿದ್ದರು. ಅಹಲ್ಯಾಬಾಯಿಯ ವಿವಾಹಕ್ಕೆ ಪೂರ್ವವೇ ಇವರಿಬ್ಬರೂ ವಿವಾಹಿತೆಯರಾಗಿ ಅತ್ತೆಯ ಮನೆಯಲ್ಲಿ ಇದ್ದ ರು. ಅಹಲ್ಯಾಬಾಯಿಯು ಇವ ರನ್ನು ಆಗಾಗ ಕರೆಯಿಸಿಕೊಂಡು ತನಗೆ ಬರುವ ವಿದ್ಯೆಯನ್ನೂ , ತನಗೆ ತಿಳಿದಿರುವ ಸಾಧಿಮಣಿಯರ ಚರಿತ್ರೆಗಳನ್ನೂ ಅವರಿಗೆ ತಿಳಿಸುತ್ತಿದ್ದಳು, ಇವರು ಮೂವರೂ ನಿಷ್ಕಪಟವಾದ ಪ್ರೇಮದಿಂದ ಸೋದರಿಯರಂತೆ ನಡೆದುಕೊಳ್ಳುತಲಿದ್ದರು. ಅಹಲ್ಯಾಬಾಯಿಯು ತನ್ನ ಸೇವೆಗಾಗಿ ನಿಯಮಿಸಲ್ಪಟ್ಟಿರುವ ದಾಸದಾಸಿ ಯರನ್ನು ಐಶ್ವರ್ಯ ಗರ್ವದಿಂದ ಬಾಧಿಸದೆ, ತನಗೆ ಅತ್ತೆ ಮಾವಂದಿರು ಕೊಟ್ಟ ಹಣದಿಂದ ಅವರ ಕಷ್ಟವನ್ನು ನಿವಾರಿಸುತಿದ್ದಳು. ಬಾಲೆಯಾದರೂ ಭಗವದ್ಭಕ್ಕೆಯಾದ ಅಹಲ್ಯಾಬಾಯಿಯು ಅತ್ತೆ ಮಾವಂದಿರಿ ಗಿಂತ ಅಧಿಕವಾಗಿ ದೇವತಾಪೂಜೆಯನ್ನೂ, ಜಪವನ್ನೂ ಮಾಡುತಿದ್ದಳು, ಈಕೆ ಯಲ್ಲಿ ರುವ ಆ ಭಕ್ತಿ ವಿಶೇಷವನ್ನು ನೋಡಿ ಮನೆಯಲ್ಲಿರುವವರೆಲ್ಲರೂ ಈಕೆಯನ್ನು ಪರಿಹಾಸ ಮಾಡುತ್ತಿದ್ದರಂತೆ. ಅಹಲ್ಯಾಬಾಯಿಯು ಪ್ರಾಪ್ತ ವಯಸ್ಕಳಾದ ಮೇಲೆ, ಬಾಲ್ಯದಲ್ಲಿ ಗುರುಮುಖ ದಿಂದ ಕೇಳಿದ ಸೀತೆ, ದೌಪದಿ, ದಮಯಂತಿ ಮೊದಲಾದ ಸಾದ್ವಿಮಣಿಗಳ ಚರಿತ್ರೆಗಳನ್ನು ಮನಸ್ಸಿನಲ್ಲಿಟ್ಟು ಕೊಂಡು, ಅವರಂತೆ ಪತಿಶಿಕ್ರೂಷೆಯಲ್ಲಿ ತತ್ಸರೆ ಯಾಗಿದ್ದಳು. ಆಕೆಯು ಪತಿಯು ನಿದ್ರಿಸಿದನಂತರ ಮಲಗಿ, ಪತಿಯು ಎಚ್ಚರ ಗೊಳ್ಳುವುದಕ್ಕೆ ಪೂರ್ವದಲ್ಲೇ ಎದ್ದು ಪ್ರಾತಃಕೃತ್ಯಗಳನ್ನು ನಿರ್ವಹಿಸುತಲಿದ್ದಳು. ಖಂಡೇರಾಯನು ಪ್ರತಿದಿನವೂ ಪ್ರಾತಃಕಾಲದಲ್ಲಿ ಬೇಟೆಗೆ ಹೋಗಿ ಮಧ್ಯಾಹ್ನ ಕಾಲಕ್ಕೆ ಗೃಹಕ್ಕೆ ಬರುತಲಿದ್ದನು. ಅಷ್ಟರವರೆಗೂ ಅಹಲ್ಯಾಬಾಯಿಯು ಯಾರು ಹೇಳಿದರೂ ಭೋಜನವನ್ನು ಮಾಡುತಲಿರಲಿಲ್ಲ. ಪತಿಯು ಪ್ರವಾಸದಲ್ಲಿರುವಾಗ ಪತ್ನಿಯು ಆಚರಿಸಬೇಕಾದ ನಿಯಮಗಳನ್ನು ಅಹಿಯು ಖಂಡೇರಾಯನು ಗ್ರಾಮಾಂತರಕ್ಕೆ ಹೋದಾಗ ಅನುಸರಿಸುತಿದ್ದಳು. ಇಂತಹ ಅಕೃತ್ರಿಮ ಪ್ರಿಯ ಭಾರ್ಯೆಯನ್ನು ಖಂಡೇರಾಯನು ಹಾಗೆಯೇ ಅತ್ಯಂತ ಪ್ರೇಮದಿಂದ ಆದರಿಸುತ ಲಿದ್ದನು. - ಸುಶೀಲರಾದ ಈ ದಂಪತಿಗಳಿಗೆ ಮಾಲೀರಾವೆಂಬ ಪುತ್ರನೂ, ಮಂಚಾ ಬಾಯಿಯೆಂಬ ಪುತ್ರಿಯೂ ಜನಿಸಿದರು. ಮಂಚಾಬಾಯಿಯು ತಾಯಿಯಂತೆಯೇ ಸಾಧಾರಣ ರೂಪವತಿಯೂ, ವಿಶೇಷ ಗುಣವತಿಯೂ ಆದಳು. ಅತ್ತೆ ಮಾವಂದಿರ ಸಂಪೂರ್ಣ ಕಟಾಕ್ಷ, ಪತಿಯ ಅಮಿತಾನುರಾಗ, ಅತ್ತಿಗೆ ಯರ ಪ್ರೇಮ, ಸೇವಕರ ಭಕ್ತಿ, ಕನ್ಯಾ ಪುತ್ರರ ಬಾಲಲೀಲೆಗಳು, ಅಪರಿಮಿತೈಶ್ವರ್ಯ