ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕರ*, ೩೫ ರ್ಸ ೧೭೬೫ ನೆಯ ಇಸವಿಯಲ್ಲಿ ಅಹಲ್ಯಾಬಾಯಿಗೆ ರಾಜ್ಯದ ಸಂಪೂರ್ಣಾ ಧಿಕಾರವು ಪ್ರಾಪ್ತವಾಯಿತು. ಆಕೆಯು ತನಗೆ ದೂರದ ನೆಂಟನಾದ ತುಕೋಜಿ ರಾಯನನ್ನು ಮಂತ್ರಿಯಾಗಿ ನಿಯಮಿಸಿಕೊಂಡಳು. ದಂಡೆತ್ತಿ ಹೋಗುವುದು, ಸೈನ್ಯವನ್ನು ಸೇರಿಸುವುದು, ರಾಜ್ಯವನ್ನು ಚೋರಭಯದಿಂದ ಕಾಪಾಡುವುದು, ಇವೇ ಮೊದಲಾದ ಯುದ್ದ ಸಂಬಂದವಾದ ಕಾರ್ಯಗಳನ್ನು ಈತನು ನೋಡುತ ಲಿದ್ದನು. ರಾಜ್ಯದ ಇತರ ವಿಷಯಗಳನ್ನು ಅಹಲ್ಯಾಬಾಯಿಯು ನೋಡುತ ಲಿದ್ದಳು. ತುಕೋಜಿಯು ಅಹಲ್ಯಾಬಾಯಿಯನ್ನು ಮಾತೆಯಂತೆ ಭಾವಿಸು ತಲಿದ್ದನು. ಅಹಲ್ಯಾಬಾಯಿಯ ದಿನಚರ್ಯೆ- ಈಕೆಯು ಪ್ರತಿನಿತ್ಯವೂ ಉಷಃ ಕಾಲಕ್ಕೆ ನಿದ್ರೆಯಿಂದೆದ್ದು ಪ್ರಾತಃಕೃತ್ಯಗಳನ್ನು ನೆರವೇರಿಸಿ, ಸ್ವಂತವಾಗಿದೇವತಾರ್ಚನೆ ಯನ್ನು ಮಾಡುತಲಿದ್ದಳು, ಅನಂತರ ಪುರಾಣಶ್ರವಣ ; ಬಳಿಕ ಬಡವರಿಗೆ ದಾನ ಧರ್ಮ; ಆಮೇಲೆ ಭೋಜನ: ಭೋಜನಾನಂತರ ಸ್ವಲ್ಪ ವಿಶ್ರಾಂತಿ ; ತರುವಾಯ ರಾಜಸಭೆಗೆ ಹೋಗಿ, ಅಲ್ಲಿ ವಸೂಲು ಮೊದಲಾದ ಲೆಕ್ಕಗಳನ್ನು ನೋಡಿ, ಪ್ರಜೆ ಗಳ ಕಲಹಗಳನ್ನು ವಿಚಾರಿಸಿ ಸೂಕ್ಯಾಸ್ತಮಯ ಸಮಯಕ್ಕೆ ಸರಿಯಾಗಿ ಗೃಹಕ್ಕೆ ಬರುವಳು. ಸಾಯಂಕಾಲದ ದೇವತಾರ್ಚನೆಯನ್ನು ಮಾಡಿದಮೇಲೆ ರಾಜ್ಯ ಸಂಬಂಧವಾದ ಮಿಕ್ಕ ಕಾರ್ಯಗಳನ್ನು ಕ್ರಮಪಡಿಸಿ, ರಾತ್ರಿ ಹನ್ನೊಂದು ಘಂಟೆಗೆ ನಿದ್ರಿಸುತಲಿದ್ದಳು, ಈ ಕ್ರಮವು ಆಕೆಯ ಮರಣ ಪರಂತವೂ ನಡೆಯಿತು. ಹಬ್ಬ, ಉಪವಾಸ ವ್ರತಗಳು ಮೊದಲಾದ ವಿಶೇಷದಿವಸಗಳಲ್ಲಿ ಮಾತ್ರ ಅಹಲ್ಯಾ. ಬಾಯಿಯು ದಿನವೆಲ್ಲವನ್ನೂ ವ್ರತದಲ್ಲಿಯೇ ಕಳೆಯುತಲಿದ್ದಳು. ಇವರ ಜಾತಿ ಯಲ್ಲಿ ಮಾಂಸವನ್ನು ಭುಜಿಸಲು ನಿಷೇಧವಿಲ್ಲದಿದ್ದರೂ ಈಕೆಯು ಅದನ್ನು ಮುಟ ದವಳಲ್ಲ. ಸಕಲ ನಿಯಮಗಳನ್ನೂ ಬ್ರಾಹ್ಮಣ ಸ್ತ್ರೀಯಂತೆ ನಡೆಸುತಲಿದ್ದಳು. ಈಕೆಯು ತನ್ನ ವೈಧವ್ಯದಲ್ಲಿ ಆಭರಣಾದಿಗಳನ್ನು ಧರಿಸದೆ ಶ್ವೇತವಸ್ತ್ರವನ್ನು ಮಾತ್ರ ಉಡುತಲಿದ್ದಳು, ತನ್ನ ಕಾರ್ಯಗಳನ್ನು ಕಾಲಕ್ರಮವಾಗಿ ಮಾಡುತಲಿದ್ದುದ ರಿಂದ ಈಕೆಯು ನೆನೆದ ಕೆಲಸಗಳೆಲ್ಲವು ಕೈಗೂಡುತಲಿದ್ದು ವು. ದಾನಧರ್ಮಗಳು, - ಭರತಖಂಡವು ಕ್ಷೇತ್ರತೀರ್ಥಗಳ ತೌರುಮನೆ. ಮುವ್ವತ್ತು ಮೂರು ಕೋಟಿ ದೇವತೆಗಳನ್ನು ಪೂಜಿಸುವ ನಮಗೆ (ಹಿಂದುಗಳಿಗೆ) ಅಸಂಖ್ಯ ಕ್ಷೇತ್ರಗಳಿರುವುದು ವಿಚಿತ್ರವಲ್ಲ, ಈ ಕ್ಷೇತ್ರಗಳಲ್ಲಿ ಅಹಲ್ಯಾಬಾಯಿಯು ಶಾಶ್ವತದಾನವನ್ನು ಮಾಡಿದಾಳೆ. ನೂತನ ದೇವಾಲಯಗಳನ್ನು ಕಟ್ಟಿಸುವುದು, ಜೀರ್ಣವಾದ ದೇವಾಲಯಗಳನ್ನು ಉದ್ಧಾರಮಾಡುವುದು, ದೇವತೆಗಳಿಗೆ ಶಾಶ್ವತ ಗಂಗಾಭಿಷೇಕವು ನಡೆಯುವಂತೆ ಏರ್ಪಾಟುಮಾಡುವುದು, ಇವೇ ಮೊದಲಾದ ತಾನು ನಂಬಿದ ಧರ್ಮಗಳನ್ನು ಹೇರಳವಾಗಿ ಮಾಡಿರುವಳು, ಕ್ಷೇತ್ರಗಳಲ್ಲಿ