ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕ *. ೩೯ ಲಾದ ದುರ್ಗುಣಗಳು ಈಕೆಯನ್ನು ಕನಸಿನಲ್ಲಿ ಯೂ ಸೇರುತ್ತಿರಲಿಲ್ಲ. ನೋಡಿ ದೊಡನೆಯೇ ಈಕೆಯು ಶಾಂತೆಯೆಂತಲೂ, ಸೌಮೈಯೆಂತಲೂ, ಬೋಧೆಯಾಗುತ ಲಿತ್ತು. ಸರ್ವಸದ್ಗುಣಸಂಪನ್ನೆಯಾದ ಅಹಲ್ಯಾಬಾಯಿಯಲ್ಲಿದ್ದ ಯಾವ ಗುಣದ ಆಧಿಕ್ಯತೆಯನ್ನು ವರ್ಣಿಸಬೇಕೋ ಯಾವುದನ್ನು ಬಿಡಬೇಕೋ ನಾನರಿಯೆನು. ಈ ವರ್ಣನೆಯೆಲ್ಲವೂ ಅತಿಶಯೋಕ್ತಿಯೆಂದು ಕೆಲವರು ತಿಳಿಯಬಹುದು. ನಮ್ಮ ದೇಶದ ಕವಿಗಳು ತಮ್ಮ ಕಾವ್ಯವನ್ನು ಅತಿಶಯೋಕ್ತಿಗಳಿಂದ ತುಂಬುವುದು ಸ್ವಭಾವವಾದುದರಿಂದ ಅವರು ಹಾಗೆಣಿಸುವುದು ಆಶ್ಚರ್ಯವಲ್ಲ, ಆದರೆ ನಾನು ಬರೆದಿರುವುದೆಲ್ಲವೂ ಸತ್ಯವಾದುದು ಎಂಬುದಕ್ಕೆ ಮಾಲ್ಕಂ ದೊರೆಯವರ ಗ್ರಂಥ ದಲ್ಲಿ, “ ಅಹಲ್ಯಾಬಾಯಿಯೊಡನೆ ವೈರವನ್ನು ಬೆಳಿಸುವುದೂ, ಸಮಯ ದೊರೆತಾಗ ಆಕೆಗೆ ಸಹಾಯವನ್ನು ಮಾಡದಿರುವುದೂ ಗೋಹತ್ಯೆಗೆ ಸಮಾನವಾದ ಪಾಪ ಗಳೆಂದು ಮಹಾರಾಷ್ಟ್ರ ರಾಜರೆಲ್ಲರೂ ಎಣಿಸುತಲಿದ್ದರು. ಸಕಲ ಜನರೂ ಆಕೆ ಯನ್ನು ಸಮಾನವಾದ ಪೂಜ್ಯಭಾವದಿಂದ ನೋಡುತಲಿದ್ದರು. ಪೇಷ್ಟೆಯವರು ಆಕೆಯನ್ನು ಹೇಗೆ ಸನ್ಮಾನಿಸುತಲಿದ್ದರೋ, ಹಾಗೇ ಹೈದರಾಬಾದು ನಿಜಾಮನೂ, ಮೈಸೂರು ಟೀಪ್ಪು ಸುಲ್ತಾನನೂ ಸನ್ಮಾನಿಸುತಲಿದ್ದರು. ಭಾರತೀಯರಂತೆ, ಯವ ನರೂ ಆಕೆಯು ಚಿರಜೀವಿನಿಯಾಗಿರ ಬೇಕೆಂತಲೂ, ಆಕೆಯ ರಾಜ್ಯವು ಅಭಿವೃದ್ದಿ ಯನ್ನು ಹೊಂದಬೇಕೆಂತಲೂ ಈಶ್ವರನನ್ನು ಪ್ರಾರ್ಥಿಸುತಲಿದ್ದರು. ಸ್ತ್ರೀಯಾ ದರೂ ಈಕೆಯಲ್ಲಿ ದುರಭಿಮಾನವಿರಲಿಲ್ಲ. ಸ್ವಧರ್ಮದಲ್ಲಿ ವಿಶೇಷ ಭಕ್ತಿಯಿ ದ್ದರೂ, ಪರಧರ್ಮಾವಲಂಬಿಗಳನ್ನು ಈಕೆಯು ಹಿಂಸಿಸುತ್ತಿರಲಿಲ್ಲ. ಧರ್ಮದ ಲ್ಲಿಯೂ ಪರಮಾರ್ಥವಿಚಾರದಲ್ಲಿಯೂ ಈಕೆಯು ಸದಾಮಗ್ಗೆಯಾಗಿದ್ದರೂ ಪ್ರಜಾ ಕಲ್ಯಾಣವಿಷಯವನ್ನು ಎಂದೂ ಅಲಕ್ಷ್ಯಮಾಡಿದವಳಲ್ಲ. ಅತ್ಯಂತ ದಕ್ಷತೆಯಿಂದಲೂ, ಕರ್ತೃತ್ವಶಕ್ತಿಯಿಂದಲೂ ಅಹಲ್ಯಾಬಾಯಿಯು ರಾಜ್ಯವನ್ನು ಪಾಲಿಸಿದಳು. ನಿಷ್ಕಾಪಟ್ಯವೂ, ಸದಸದ್ವಿಚಾರವೂ, ಮನುಷ್ಯನಿಗೆ ಇರಬೇಕಾದ ನೀತಿಯೂ ಈಕೆಯಲ್ಲಿ ನೆಲಸಿದ್ದುವು. ತನ್ನಲ್ಲಿ ದೋಷವಿಲ್ಲದಿದ್ದರೂ, ಇತರರಲ್ಲಿರುವ ಸ್ವಾಭಾ ವಿಕ ದೋಷವನ್ನು ಈಕೆಯು ಕ್ಷಮಿಸುತಲಿದ್ದಳು, ಈಕೆಯ ವಿಷಯದಲ್ಲಿ ಜನರು ಹೇಳುವುದು ಅತಿಶಯೋಕ್ತಿಯಾಗಿರಬಹುದೆಂದು ಎಣಿಸಿ, ದೋಷ್ಟೆ ಕದೃಷ್ಟಿಯಿಂದ ನಾನು ವಿಚಾರಿಸಲು, ಆಕೆಯಲ್ಲಿ ಪ್ರಜೆಗಳಿಗಿರುವ ಪೂಜ್ಯಭಾವವು ಸುಳ್ಳೆಂಬುದಕ್ಕೆ ನನಗೆ ಆಧಾರವೇ ಸಿಕ್ಕಲಿಲ್ಲ. ಜನರು ಈಕೆಯನ್ನು ದೇವತೆಯೆಂದು ಭಾವಿಸಿ, ಈಕೆಯ ನಾಮಕ್ಕೆ ಸಾಧುಗಳಿಗೆ ಮಾಡುವ ಸನ್ಮಾನವನ್ನು ಮಾಡುತ್ತಾರೆ. ಪರಮ ಪವಿತ್ರರಾದ, ವಿಚಾರಪರರಾದ ಪ್ರಭುಶ್ರೇಷ್ಟರಲ್ಲಿ ಅಹಲ್ಯಾಬಾಯಿಯು ಒಬ್ಬಳು, ” ಎಂದು ಬರೆದಿರುವುದನ್ನು ಉದಾಹರಿಸಿರುವೆನು.