ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭ ರಾಳೇಗಾರೀ ಲಕ್ಷ್ಮೀಬಾಯಿ. ಸೂಚಿಸಿದ ವಿಷಯವು ಸ್ಮೃತಿಗೆ ಬಂದು, ಅದನ್ನು ಸ್ವಾರ್ಥ ಪರಾರ್ಥಗಳಿಗೆ ಉಪಯೋಗಿಸಬೇಕೆಂದು ನಿಶ್ಚಯಿಸಿಕೊಂಡಳು. ಹೇಗೆಂದರೆ ದೇವಸ್ಥಾನಗಳ ದ್ರವ್ಯದಿಂದ ಸಾಲವನ್ನು ತೆಗೆದುಕೊಂಡು ಸಂಸ್ಥಾನವನ್ನು ಋಣ ವಿಮುಕ್ತವಾಗಿ ಮಾಡುವುದು ಸ್ವಾರ್ಥವು, ಸುಮ್ಮನೆ ಪೆಟ್ಟಿಗೆಯಲ್ಲಿದ್ದ ದೇವಸ್ಥಾನಗಳ ದ್ರವ್ಯಕ್ಕೆ ಖಡ್ಡಿಯು ದೊರೆಯುವಂತೆ ಮಾಡುವುದು ಪರಾರ್ಥವು, ತನ್ನ ಅಭೀಷ್ಟವನ್ನು ರೆಸಿಡೆಂಟನಿಗೆ ತಿಳಿಯಪಡಿಸಲು ಆತನು ಸಮ್ಮತಿಸಿ ರಾಣಿಯ ಆಲೋಚನಾಶಕ್ತಿ ಯನ್ನು ಕೊಂಡಾಡಿದನು. ಕ್ಷಿಪ್ರದಲ್ಲಿಯೇ ರಾಣಿಯು ದೇವಸ್ಥಾನಾಧಿಕಾರಿಗಳೆಲ್ಲ ರನ್ನೂ ಕರೆಯಿಸಿ ಒಂದು ಸಭೆಯನ್ನು ಮಾಡಿ, ಅವರಿಗೆ ತನ್ನ ಉದ್ದೇಶವನ್ನು ತಿಳಿಸಿ, ಇದರಿಂದ ತನಗೂ .ದೇವಸ್ಥಾನಗಳಿಗೂ ಉಂಟಾಗುವ ಲಾಭವನ್ನು ವಿಶದಪಡಿಸಿ ದಳು. ವಿಷಯವೆಲ್ಲವನ್ನೂ ಕೇಳಿ ಆ ಯಧಿಕಾರಿಗಳು ರಾಣಿಯು ಹೇಳಿದಂತೆ ನಡೆದುಕೊಳ್ಳಲು ಒಪ್ಪಿಕೊಂಡರು. ಅನಂತರ ರಾಣಿಯು ದೇವಸ್ಥಾನಗಳನ್ನು ನೋಡಿಕೊಳ್ಳುವುದಕ್ಕೆ ರೇಡೀರಾನ್ ಅಥವಾ ವೆಂಕಟರಾವ್ ಎಂಬಾತನನ್ನು ನಿಯಮಿಸಿದಳು. ಆತನು ಆ ಕೆಲಸವನ್ನು ಶ್ರದ್ದೆಯಿಂದ ನೆರವೇರಿಸಿದುದರಿಂದ ಸಂಸ್ಥಾನವು ಅಲ್ಪ ಕಾಲದಲ್ಲಿಯೇ ಋಣ ಮುಕ್ತವಾಯಿತು. ಸಾಲವು ತೀರಿದನಂತರ ರಾಣಿಯು ನ್ಯಾಯಸಭೆಗಳನ್ನು ಸಂಸ್ಕರಿಸಲು ಪ್ರಯತ್ನ ಮಾಡಿದಳು. ಆಕೆಯು ಸಂಸ್ಕೃತದಲ್ಲಿ ಪಾಂಡಿತ್ಯವುಳ್ಳವಳೂ, ಪೂರ್ವಾ ಚಾರಪರಾಯಣಳೂ ಆಗಿದ್ದುದರಿಂದ ಮನುಸ್ಮೃತಿ, ಪರಾಶರಸ್ಕೃತಿ, ವಿಜ್ಞಾನೇ ಶ್ವರ ಮೊದಲಾದ ಪೂರ್ವಧರ ಗ್ರಂಥಗಳ, ಮತ್ತು ಇಂಡಿಯಾ ಗವರ್ನಮೆಂಟಿನವರ ಶಾಸನಗಳ ಆಧಾರದಿಂದ ಪ್ರಜೆಗಳಿಗೆ ಹಿತಕರವೆಂದು ತನಗೆ ತೋರಿದ ಕೆಲವು ಶಾಸನಗಳನ್ನು ಬರೆದು ಒಂದು ಶಾಸನಗ್ರಂಥವನ್ನು ರಚಿಸಬೇಕೆಂದು ನಿಶ್ಚಯಿಸಿ ದಳು. ಆದರೆ ಇಂತಹ ಗ್ರಂಥವನ್ನು ರಚಿಸುವುದಕ್ಕೆ ನ್ಯಾಯಶಾಸ್ತ್ರದಲ್ಲಿ ಪ್ರವೀಣ ನಾದ ವಿದ್ವಾಂಸನ ಸಹಾಯವು ಅತ್ಯವಶ್ಯಕವೆಂದು ತೋರಿತು. ಇಷ್ಟರಲ್ಲಿ ರಾಣಿ ಲಕ್ಷ್ಮಿಬಾಯಿಗೆ ವಿವಾಹ ಕಾಲವು ಪ್ರಾಪ್ತವಾಯಿತು. ಪೂರ್ವದ ರಾಣಿಯ ಸತಿಗೆ ನೆಂಟನೂ, ಕುಲೀನನೂ, ಬ್ರಾಹ್ಮಣನೂ ಆದ ರಾಜರಾಜವರ್ಮನೆಂಬ ವಿದ್ವಾಂಸನನ್ನು ಈಕೆಯು ವರಿಸಿದಳು, ಈತನು ಚೆಂಗನಾಸೆರಿಯೆಂಬ ಗ್ರಾಮದ ನಿವಾಸಿಯು ಸಿದ್ದಾಂತಮುಕ್ತಾವಲಿಯೇ ಮೊದಲಾದ ಗ್ರಂಥಗಳನ್ನು ಓದಿ ನ್ಯಾಯ ಶಾಸ್ತ್ರವಿಶಾರದನೆನಿಸಿದ್ದನು. ಈತನಿಗೂ ರಾಣಿಗೂ ವಿವಾಹವು ನಡೆದು ಆ ಬ್ರಾಹ್ಮಣನಿಗೆ 'ಕೋಯಿಲತಂಬೂರ್ರಾ' ಎಂಬ ಪದವಿಯು ಉಂಟಾಯಿತು. ಪಾಠಕರೇ! ಯುವತೀ ವಿವಾಹವು ಮಲಬಾರುದೇಶದಲ್ಲಿ ಪ್ರಚಾರದಲ್ಲಿರುವುದ ರಿಂದ ಲಕ್ಷ್ಮೀಬಾಯಿಗೆ ಗುಣವಯೋರೂಪವಿದ್ಯೆಗಳಲ್ಲಿ ಸಮಾನನಾದ ಪತಿಯು ದೊರೆತನಲ್ಲವೆ! "ನಮ್ಮ ದೇಶದಲ್ಲಿಯೂ ಪ್ರೌಢಾವಿವಾಹಗಳು ನಡೆದರೆ, ಈಗ