ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕಂದರ್‌ ಬೇಗಮ್. “ ಸುಚಿಂತ್ಯ ಚೋಕ್ತಂ ಸುವಿಚಾರ್ಯಯತೃತಂ ಸುದೀರ್ಘಕಾಲೇಪಿ ನಯಾತಿ ವಿಗ್ರಿಯಾಂ.” ಮಧ್ಯ ಹಿಂದೂಸ್ಥಾನದಲ್ಲಿ ಭೂಪಾಲ್ ಎಂಬ ಸಂಸ್ಥಾನವು ಇದೆ. ಈ ಸಂಸ್ಥಾನವು ಸುಮಾರು ಏಳು ಸಾವಿರ ಚದರ ಮೈಲಿಗಳ ವಿಸ್ತೀರ್ಣವುಳ್ಳ ದ್ರಾ ಗಿಯೂ, ೪೦ ಲಕ್ಷ ರೂಪಾಯಿಗಳ ವರ್ಷಾದಾಯವುಳ್ಳದ್ದಾಗಿಯೂ ಇದೆ. ಈ ರಾಜ್ಯಕ್ಕೆ ರಾಣಿಯಾಗಿದ್ದ ಶಿಕಂದರ್ ಬೇಗಮಿನ ಚರಿತ್ರೆಯನ್ನು ಇಲ್ಲಿ ಬರೆದಿದೆ. ಹದಿನೇಳನೆಯ ಶತಾಬ್ಬದ ಅಂತ್ಯಭಾಗದಲ್ಲಿ, ದೆಹಲೀ ಸಾಮ್ರಾಜ್ಯವನ್ನು ಔರಂಗಜೇಬ್ ಬಾದಷಹನು ಪಾಲಿಸುತಲಿದ್ದನು. ಆ ಕಾಲದಲ್ಲಿ ದೋಸ್ತಮಹ ಮ್ಮದ್ ಎಂಬ ಒಬ್ಬ ಆಫ್ ರ್ಘಾ ಸರದಾರನು ತನ್ನ ಶೌರ ಸಾಹಸಗಳಿಂದ ಬಾದಷಹನ ಅನುಗ್ರಹವನ್ನು ಪಡೆದು, ಸೈನ್ಯದಲ್ಲಿ ಒಂದು ಅಧಿಕಾರವನ್ನು ಹೊಂದಿದನು. ಒಂದುಸಲ ಈತನನ್ನು ಬಾದಷಹನು ಮಾಳವಪ್ರಾಂತಕ್ಕೆ ಯಾವುದೋ ಒಂದು ರಾಜಕಾರ್ಯದ ನಿಮಿತ್ತವಾಗಿ ಕಳುಹಿಸಿದನು. ಮಾಳ ವದ ಸುಬೇದಾರನು ದೋಸ್ತ ಮಹಮ್ಮದನ ಧೈರ್ಯಾದಿಗುಣಗಳಿಂದ ಸಂತುಷ್ಟ ನಾಗಿ, ಬಾದಷಹನೊಡನೆ ಹೇಳಿ, ಇವನಿಗೆ ಭೈರಸೀಪ್ರಾಂತದ ಸುಬೇದಾರಿಯನ್ನು .ಕೊಡಿಸಿದನು. ಇವನು ಚಾತುರ್ಯದಿಂದ ಸುಬೇದಾರಿಯನ್ನೆಲ್ಲ ವಶಪಡಿಸಿ ಕೊಂಡು, ಔರಂಗಜೇಬನ ಮರಣಾನಂತರ ಸ್ವತಂತ್ರ ರಾಜನಾಗಿ, ಭೂಪಾಲ್ ಎಂಬ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಇವನೇ ಬೇಗಮಳ ವಂಶಕ್ಕೆ ಮೂಲಪುರುಷನು ಎಂದು ಹೇಳಬಹುದು. ೧೭೨೩ ನೆಯ ಇಸವಿಯಲ್ಲಿ ದೋಸ್ತ ಮಹಮ್ಮದನು ಕಾಲವಾದನು. ಅನಂ ತರ ಈ ರಾಜ್ಯದಲ್ಲಿ ಅನೇಕ ಕಲಹಗಳು ನಡೆದು, ಕೊನೆಗೆ ಸುರ್ಲ್ತಾಮಹಮ್ಮದ್, ಯಾರಮಹಮ್ಮದ್, ಯಾಸೀನಮಹಮ್ಮದ್‌, ಹಯಾತ್ ಮಹಮ್ಮದ್ ಎಂಬ ವರು ಕ್ರಮವಾಗಿ ರಾಜ್ಯಾರೂಢರಾದರು. ಕಡೆಯವನಾದ ಹಯಾತ್ ಮಹಮ ದನ ಕಾಲದಲ್ಲಿ ಮರಾಟೆಯವರೊಡನೆ ಅನೇಕ ಕಲಹಗಳು ನಡೆದವು. ಈತನು ೨೯ ವರುಷಗಳು ರಾಜ್ಯವನ್ನು ಆಳಿ ಮೃತನಾದನು. ಅನಂತರ ಈತನ ಮಗ ನಾದ ಗೋಸುಮುಹಮ್ಮದನು ನವಾಬನಾದನು, ಈತನು ರಾಜ್ಯ ವ್ಯವಹಾರ