ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ. ಅಧುನಾತನ ಕಾಲದಲ್ಲಿ, ಹೃದಯಂಗಮವಾದಶೈಲಿಯಿಂದ ಬರೆದಿರುವ ಅನೇಕ ಕರ್ಣಾಟಕ ಗ್ರಂಥಗಳನ್ನು ಪಠಿಸುತಲಿರುವ ನಾಠಕರಿಗೆ, ಸಾಮಾನ್ಯ ವಾಗಿರುವ ಈ ಗ್ರಂಥವು ವಿಶೇಷವಾಗಿ ಅಭಿರುಚಿಸಲಾರದು. ಆದರೆ ಈ ಗ್ರಂಥದಲ್ಲಿ ಅತ್ಯಂತಶೌರ್ಯ ಧೈರ್ಯಯುತರು, ಅನಾಮಾನ್ಯ ವಿದ್ಯಾವಿಭೂಷಿತರು, ಸಾಧ್ಯ ಮಣಿಯರು, ಜ್ಞಾನವತಿಯರು, ರಾಜಕಾರ್ಯಧುರಂಧರರು, ಸ್ವದೇಶಾಭಿಮಾನಿನಿ ಯರೂ ಆದ ಮಾನಿನಿಯರ ಚರಿತ್ರೆಗಳನ್ನು ಉಲ್ಲೇಖಿಸಿ ಇರುವುದರಿಂದಲೂ, ಭಾವಿಕಾಲದಲ್ಲಿ ದೇಶೋನ್ನತಿಗೆ ಸಹಾಯಕರಾಗಬೇಕಾದ ಈಗಿನ ಬಾಲಕಿಯರ ಮಾನಸೌನ್ನತ್ಯಕ್ಕೆ ಇಂತಹ ಚರಿತ್ರೆಗಳು, ಉತ್ತಮುಸಾಧಕಗಳಾಗುವುದರಿಂದಲೂ, ಪಾಠಕಲೋಕವು ಇದನ್ನು ಸಮಾದರದೊಡನೆ ಪಠಿಸುವರು ಎಂದು ನಂಬಿದ್ದೇನೆ. ಆಂಧ್ರಸ್ತ್ರೀಯರ ಜ್ಞಾನಾಭಿವೃದ್ಧಿಯನ್ನು ಮಾಡುವುದರಲ್ಲಿಯೇ ತನ್ನ ಜೀವಿತ ವನ್ನು ಕಳೆದ ಸಾಧಿಮಣಿಯೆನಿಸಿ ಕೀರ್ತಿಶೇಷರಾದ ಸೌ।! ಭಂಡಾರು ಅಚ್ಚ ಮಾಂಬನವರಿಂದ ರಚಿತವಾದ 'ಅಬಲಾ ಸಚ್ಚರಿತ್ರ ರತ್ನಮಾಲ' ಎಂಬ ಗ್ರಂಥ ನನ್ನೂ 'ವಿದು ಸೀನಣುಲು' ಎಂಬ ಗ್ರಂಥದಿಂದ ಕೆಲವು ಚರಿತ್ರೆಗಳನ್ನೂ ಭಾಷಾ೦ ತರಮಾಡಿ ಈ ಗ್ರಂಥವನ್ನು ಪ್ರಚುರಪಡಿಸಿದ್ದೇನೆ. ಈ ಗ್ರಂಥದಲ್ಲಿ ಇರುವ ದೋಷಗಳು ಪರಿವರ್ತಿಸುವ ಕಾಲದಲ್ಲಿ ಉಂಟಾದ ನೇ ಹೊರತು, ಮೂಲ ಗ್ರಂಥ ಗಳಲ್ಲಿ ಇಲ್ಲ. ಪ್ರಾಜ್ಞರು ಈ ಗ್ರಂಥದಲ್ಲಿ ಇರುವ ಸ್ಟಾಲಿತ್ಯಗಳನ್ನು ದಯಮಾಡಿ ತಿಳಿಸ ಬೇಕೆಂದು ಪ್ರಾರ್ಥಿಸುತಲಿರುವ ಇತಿ ಕಮಲಾ೦ಭಾ.