ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&9 ಅಬಲಾ ಸಚ್ಚರಿತ್ರ ರತ್ನ ಮಾಲೆ. ನಿಯಮಿಸಿದರು. ಅನಂತರ ಆ ಗೃಹಕ್ಕೆ ಬೆಂಕಿಯನ್ನು ಹಚ್ಚಬೇಕೆಂದು ಆಲೋ ಚಿಸಿದರು. ರಾಜ್ಯಲೋಭದಿಂದ ಮನುಷ್ಯನು ಎಂತಹ ದುಷ್ಕೃತ್ಯವನ್ನಾದರೂ ಹಿಂತೆಗೆಯದೆ ಮಾಡುವನಲ್ಲವೆ ? ಈ ವಿಷಯವನ್ನು ಮೈನಾಬಾಯಿಯ ಸೇವಕರು ತಿಳಿದು, ಅಳುತ್ತ ತಮ್ಮ ಒಡತಿಯ ಬಳಿಗೆ ಹೋಗಿ, ಆಕೆಗೆ ಮುರಾರಿರಾಯನ ಮೋಸವನ್ನು ತಿಳಿಸಿದರು. ಅನಂತರ ಆ ಭಟರು “ ನೀವು ಪುರುಷವೇಷವನ್ನು ಧರಿಸಿ ಬೇರೇಸ್ಥಳಕ್ಕೆ ಹೋಗಿ ಪ್ರಾಣವನ್ನು ರಕ್ಷಿಸಿಕೊಳ್ಳಿರಿ,” ಎಂದು ಮೈನಾಬಾಯಿಯನ್ನು ಬೇಡಿಕೊಂಡರು. ಆದರೆ ಆ ಶೂರನಾರಿಯು ಅವರೊಡನೆ “ ನೀವು ನನ್ನ ಹಿತವನ್ನು ಅಪೇಕ್ಷಿಸಿ ಹೀಗೆ ತಿಳಿಸಿದಿರಿ, ಹಾಗೆ ಮಾಡುವದು ಅಯುಕ್ತವಾದುದು ಎಂದು ನನಗೆ ತೋರು ವುದು, ಹಗೆಗೆ ಬೆನ್ನು ತೋರಿಸದಂತಹ ಶೂರವಂಶದಲ್ಲಿ ಜನ್ನಿಸಿ, ಅಂತಹ ವಂಶ ವನ್ನೇ ಸೇರಿದ ನಾನು ಈ ವಿಧವಾದ ಕೃತ್ಯವನ್ನು ಹೇಗೆ ಮಾಡಲಿ ? ನಾನು ಹೋಗಲು ಅನರ್ಹವಾದ ಸ್ಥಳಕ್ಕೆ ಹೋಗಲಾರೆನು. ಧರ್ಮವನ್ನು ತಪ್ಪದೆ ನಾನು ಇರಬೇಕಾದ ಸ್ಥಳದಲ್ಲಿಯೇ ಇದ್ದು ಮೃತಳಾದರೆ ಸಹಗಮನವನ್ನು ಮಾಡಿ ದವರ ಪದವಿಗೆ ಹೋಗುವೆನು, ” ಎಂದು ನುಡಿದಳು. ಮೈನಾಬಾಯಿಯು ಧೈರ್ಯವಾಗಿ ಅಲ್ಲಿಯೇ ಇರಲು ನಿಶ್ಚಯಿಸಿಕೊಂಡಳು. ಅನಂತರ ಆಕೆಯ ದಾಸಿಯರಲ್ಲಿ ಒಬ್ಬಳು ತನ್ನ ಪುತ್ರನನ್ನು ಮೈನಾಬಾಯಿಗೆ ಕೊಟ್ಟು ರಾಜ್ಯಾಧಿಪತಿಯಾದ ಆ ಬಾಲಕನನ್ನು ತಾನು ಎತ್ತಿಕೊಂಡು, ರಕ್ಷಕ ಭಟರಿಗೆ ತಿಳಿಯದಂತೆ ಗುಪ್ತವಾಗಿ ಹೊರಟು, ಮೈನಾಬಾಯಿಯ ಪಕ್ಷದವರು ರಕ್ಷಿಸುತಲಿದ್ದ ಕೋಟಿಯನ್ನು ಸೇರಿದಳು. ಪ್ರಭುವಿನ ಪ್ರಾಣವನ್ನು ಕಾಪಾಡು ವುದಕ್ಕಾಗಿ ತನ್ನ ಪುತ್ರನನ್ನು ಸಮರ್ಪಿಸಿದ ಆ ದಾಸಿಯ ಸ್ವಾಮಿಭಕ್ತಿಯನ್ನು ಎಷ್ಟು ಕೊಂಡಾಡಿದರೂ ಸ್ವಲ್ಪವೇ ! ಮೈನಾಬಾಯಿಯು ತನ್ನ ಪುತ್ರನು ಸುರಕ್ಷಿತಸ್ಥಳವನ್ನು ಸೇರಿದುದರಿಂದ ಸಂತುಷ್ಟಳಾಗಿ, ತನಗೆ ಸಂಭವಿಸುವ ಕಷ್ಟಗಳನ್ನೆಲ್ಲ ಅನುಭವಿಸಲು ಸ್ಥಿರಚಿತ್ರ ದೊಡನೆ ಸಿದ್ಧಳಾದಳು. ತನ್ನ ಸವಿಾಪದಲ್ಲಿರುವ ಅಲ್ಪ ಸೈನಿಕರನ್ನು ಕರೆದು ಅವರಿಗೆ ಶತ್ರುಗಳು ನಮ್ಮಮೇಲೆ ದಂಡೆತ್ತಿ ಬಂದರೆ ಧೈರ್ಯವಾಗಿ ಅವರೊಡನೆ ಯುದ್ಧ ಮಾಡಬೇಕೆಂತಲೂ, ನಾವು ಸ್ವಲ್ಪ ಜನರೇ ಆದರೂ, ಸತ್ಯವೂ, ಧರ್ಮವೂ, ನಮ್ಮ ಕಡೆಯಲ್ಲಿರುವುದರಿಂದ ನಮಗೇ ಜಯವು ದೊರೆಯುವುದೆಂತಲೂ ತಿಳಿಸಿ ದಳು. ಆ ಸೈನಿಕರು ಸಹ ತಮ್ಮ ಸ್ವಾಮಿನಿಗೆ ಯಾವ ಅಪಾಯವೂ ಉಂಟಾಗ ದಂತೆ ಕಾಪಾಡುತಲಿದ್ದರು. ಮೈನಾಬಾಯಿಯು ತನಗೆ ಸಂಭವಿಸಿದ ವಿಪತ್ತನ್ನು ಸಿಂಧೆ ಸರ್ಕಾರದವ ರಿಗೂ ಇಂಗ್ಲೀಷರಿಗೂ ರಹಸ್ಯವಾಗಿ ತಿಳಿಯಪಡಿಸಿ, ಅವರ ಸಹಾಯವನ್ನು