ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ವಂಶದವಳು ಎಂತಲೂ ತಿಳಿಯಬಂದಿದೆ. ವಾಫೇಲಿರಾಣಿಗೆ ರಣಧವಲ ಎಂಬ ಒಬ್ಬ ಪುತ್ರನೂ, ಸೋಳಂಕಿರಾಣಿಗೆ ಜಗದೇವ ಎಂಬ ಒಬ್ಬ ಪುತ್ರನೂ ಜನಿಸಿದರು. ವಾಫೇಲಿ, ಸೋಳಂಕಿ ರಾಣಿಯರು ಸಪತ್ನಿ ಗಳಾದುದರಿಂದ ಒಬ್ಬರಲ್ಲಿ ಇನ್ನೊಬ್ಬರು ಅತ್ಯಂತ ಮತ್ಸರದಿಂದ ಪ್ರವರ್ತಿಸುತಲಿದ್ದರು. ಬಹು ಪತ್ನಿತ್ವ ದೋಷವು ನಮ್ಮ ಹಿಂದೂದೇಶದಲ್ಲಿ ಬಹುಕಾಲದಿಂದಲೂ, ಶಿಷ್ಟಾಚಾರವಾಗಿ ನಡೆಯುತಲಿರುವುದರಿಂದ, ಅನೇಕ ಕುಟುಂಬಗಳ ಸೌಖ್ಯವು ನಾಶವಾಗುತ ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪುರುಷನು ಒಬ್ಬ ಸ್ತ್ರೀಯನ್ನು ವಿವಾಹ ಮಾಡಿಕೊಂಡು ಆಕೆಯು ತನ್ನ ಸಹಧರ್ಮಚಾರಿಣಿ ಎಂಬುವುದನ್ನೂ, ಅರ್ಧಾಂಗಿ ಎಂಬುವುದನ್ನೂ 'ನಾತಿ ಚರಾಮಿ' ಎಂದು ವಿವಾಹ ಸಮಯದಲ್ಲಿ ಆಕೆಗೆ ವಚನ ವನ್ನು ಕೊಟ್ಟಿದೇನೆ ಎಂಬುವುದನ್ನೂ ಮರೆತು, ಎರಡನೆಯ ವಿವಾಹವನ್ನು ಮಾಡಿಕೊಂಡು, ಮೊದಲನೆಯ ಹೆಂಡತಿಯಲ್ಲಿದ್ದ ಪ್ರೇಮವನ್ನು ವಿಭಜಿಸುವುದು ದೊಡ್ಡ ಅನ್ಯಾಯವು ಎಂದು ಹೇಳಬೇಕೆ ? ಏಕ ಪತಿವ್ರತವೂ, ಏಕಪತ್ನಿವ್ರತವೂ ಉತ್ತಮ ನಾಗರಿಕ ಲಕ್ಷಣವು ಎಂದು ಅರಿತವರು ಹೇಳುತ್ತಾರೆ, ನಮ್ಮ ಸಮಾಜ ದಲ್ಲಿ ಸ್ತ್ರೀಯರಿಗೆ ನಡೆಯುವ ಅನ್ಯಾಯಗಳಲ್ಲಿ ಬಹು ಪಕತ್ವವು ಒಂದು. ಉದಯಾದಿತ್ಯನು ವಾಫೇಲಿರಾಣಿಯಲ್ಲಿ ಬದ್ಧಾನುರಾಗವುಳ್ಳವನಾಗಿ ಸೋಳಂಕಿ ರಾಣಿಯನ್ನು ದಾಸಿಯಂತೆ ನೋಡುತಲಿದ್ದನು. ಹೀಗಿರಲು ಕೆಲವು ಕಾಲಕ್ಕೆ, ಸವತಿ ಮತ್ಸರವು ಅಧಿಕವಾಗಿ ವಾಫೇಲಿರಾಣಿಯು ಸೋಳಂಕಿರಾಣಿ ಯನ್ನು ಮನೆಯಿಂದ ಹೊರಡಿಸಿದಳು. ಆದರೆ ಮಂತ್ರಿಯು ಚಕ್ರವರ್ತಿ ಯೊಡನೆ ಹೇಳಿ ಸೋಳಂಕಿ ರಾಣಿಗೂ, ಆಕೆಯ ಪುತ್ರನಿಗೂ ಉದರ ಪೋಷ ಣಾರ್ಥವಾಗಿ ಎರಡು ಗ್ರಾಮಗಳನ್ನೂ, ವಾಸಮಾಡುವುದಕ್ಕೆ ನಗರದ ಹೊರಗೆ ಇದ್ದ ಒಂದು ಮನೆಯನ್ನೂ ಕೊಡಿಸಿದನು. ಸೋಳಂಕಿ ರಾಣಿಯು ವಿಚಾರ ಶೀಲಳಾದುದರಿಂದ, ಸಂಪ್ರಾಪ್ತವಾದ ದುಸ್ಥಿತಿಯಲ್ಲಿಯೂ ತನ್ನ ಮಗನ ವಿದ್ಯಾ ಬುದ್ದಿಳಗನ್ನು ಮರೆಯದೆ, ಇತರ ವ್ಯಯಗಳನ್ನು ಕಡಮೆ ಮಾಡಿ ಮಿಕ್ಕ ದ್ರವ್ಯ ದಿಂದ ಪುತ್ರನಿಗೆ ರಾಜಯೋಗ್ಯವಾದ ವಿದ್ಯೆಗಳನ್ನು ಹೇಳಿಸಿದಳು. ಜಗದೇವನು ಅಲ್ಪ ಕಾಲದಲ್ಲಿಯೇ ' ರಣಧವಲನಿಗಿಂತ ಶೂರನು ಎಂತಲೂ, ವಿದ್ಯಾವಂತನು ಎಂತಲೂ ಪ್ರಸಿದ್ದಿಯನ್ನು ಪಡೆದನು, ಪ್ರಜೆಗಳೆಲ್ಲರೂ ಜಗದೇವನನ್ನೇ ಪ್ರೀತಿ ಸುತಲಿದ್ದರು. ಚಕ್ರವರ್ತಿಯು ಸಹ ಪುತ್ರನ ಶೌರ್ಯಸಾಹಸಗಳನ್ನು ಕೇಳಿ ಸಂತೋಷಿಸುತಲಿದ್ದನು, ಆದರೆ ವಾಫೇಲಿರಾಣಿಗೆ ಕೋಪ ಉಂಟಾಗುವುದು ಎಂಬ ಭಯದಿಂದ ಆತನು ಜಗದೇವನಲ್ಲಿ ಇರುವ ಪ್ರೇಮವನ್ನು ಸ್ಪಷ್ಟ ಪಡಿಸಲು ಹೆದರುತಲಿದ್ದನು, ಈ ವಿಧವಾಗಿ ಕೆಲವು ಕಾಲ ಕಳೆದ ಅನಂತರ ಮೇಲೆ