ಪುಟ:ಅರಮನೆ.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೭. ಪ್ಲಾ...ಕ್ಲಾ ಅಗೋ ಅಲ್ಲಿ ಮೋಬಯ್ಯಾ... ಪ್ಲಾ...ಹ್ಲಾ ಯಿಗೋ ಯಲ್ಲಿ ಮೋಬಯ್ಯಾ..... ಬೆಲ್ಲದ ಕಣ್ಣಿಗೆ ಕೋಟಿ ಯಿರುವೆ ಮುತ್ತುವಂತೆ.. ಮಾವಿನ ಹಣ್ಣಿಗೆ ನೊಣ ಕೋಟಿ ಮುತ್ತುವಂತೆ.. ನವಜಾತ ಸಿಸುವಿಗೆ ತಂದೆ ತಾಯಿ, ಬಂಧು ಭಗಿನಿ ನೆಂಟರಿಷ್ಟರು ಮುತ್ತುವಂತೆ.. ಮುಟು ಮುಟ್ಟಿದ ಜನರು ತಮ್ಮ ತಮ್ಮ ಸರೀರಗಳಿಂದ ಪಂಚೇಂದ್ರಿಯಂಗಳನು ಕಿತ್ತುಕಿತ್ತಿಡುತ ಅವಯ್ಯಗೆ ಸಿಂಗಾರ ಮಾಡಿದರು. ತಮ್ಮ ತಮ್ಮ ರುದಯಂಗಳನು ಹಾರ ಮಾಡಿ ಅವಯ್ಯನಿಗೆ ಹಾಕಿದರು. ತಮ್ಮ ತಮ್ಮ ಯದೆಯೊಳಗಿಂದ ದಯವ ಸಂಬಂಧೀ ನೆನಪುಗಳನ್ನು ತೆಗೆದು ಪತ್ರೆ, ಪುಷ್ಪ ಮಾಡಿ ಯೇರಿಸಿ ಅವಯ್ಯನನ್ನು ಅಗ್ನಿಸಿದರು. ತಮ್ಮ ತಮ್ಮ ಕಣ್ಣೂಳಗಿದ್ದ ಬೆಳಗನು ಬಗೆದು ಆರತಿ ಮಾಡಿ ಬೆಳಗಿದರು.. ತಮ ತಮ್ಮ ಬಾಯೊಳಗಿನ ನಾಲಿಗೆಗಳಿಂದ ಗಂಟೆ ಜಾಗಟೆಗಳನ ಬಡಿದರು.... ತಮ ತಮ್ಮ ಮೂಗುಗಳೊಳಗಿನ ವುಚ್ಚುವಾಸ, ನಿಚ್ಚುವಾಸಗಳನೆ ಹಾಡುಗಳನ್ನು ಮಾಡಿ ಹಾಡಿದರು.. ಸೂತಕದೊಟ್ಟಿಗೆ ಹುಟ್ಟಿರುವ ತಾವು ಪಯಿತ್ರಮೋಬಯ್ಯನ ಸರೀರವನ್ನು ಮುಟ್ಟಿದರೆಲ್ಲಿ ಸುಟ್ಟು ಭಸುಮ ಆಯಿತೀಮೋ ಯಂಬ ಭಯಭೀತಿ, ತಟ್ಟಿದರೆಲ್ಲಿ ಸಿಲಾಯಿಗ್ರಹಗಳಾಗತೀಮೋ ಯಂಬ ಆತಂಕದಿಂದ ಯಾರೊಬ್ಬರು ಮುಂದಕ ಜರಗದಾದರು.. ಹಿಂದಕ ಸರಕಳ್ಳದಾದರು. ಮೊದಲೇ ಯಿದು ನರಜಲುಮ.. ನಷ್ಟ ಆಯಿಯಿತಂತ ಹೆದರಿದಲ್ಲಿ ಮುಂದಿನ ಮಂಗಳ ಕಾರೈವುಗಳು ಸುಸೂಸ್ತರವಾಗಿ ನಡೆಯುವ ಪರಿಯೆಂತು ಸಿವನೇ? ನೋಡಿದೊಡೆಲ್ಲಿ ಕಣ್ಣ ಕಳಕೊಂಡೇವು?... ಕೇಳಿದೊಡೆಲ್ಲಿ ಕಿವಿಗಳನ ಕಳಕೊಂಡವು? ನುಡಿದಾಡಿದಲ್ಲಿ ಬಾಂಗನ ಕಳಕೊಂಡವು? ಮುಂದಕ್ಕಡಿಯಿಟ್ಯೂಡಲ್ಲಿ ಕಾಲು ಕಳಕೊಂಡೇವು? ಯಂದು ಮುಂತಾಗಿ ಯಾರಿಗವರು ಸಮುಸಯ ಪಟ್ಟರಾಗುವುದಾ?... ಹಂಗೆ ಬಂದಿರೋ ಸರೀರ ಹಿಂಗs ಹೊಂಟು ತಾಯಿಯ ಪಾದ ಸೇರಿಕೊಂಡರದು ದೂರುವ ಜಲುಮದ ಪುಣ್ಯ ಯಂದು ತಿಳಕೊಂಡರ ಲೇಸಾಯಿತದ ಯಂದು ಹಿರೀಕರು ಬುದ್ದಿ ಹೇಳುತ ಮಳ್ಳ ಮಂದಿಯನ್ನು ಹುರಿದುಂಬಿಸುತಾರೆ ಸಿವನೇ... ಮೋಬಯ್ಯನನ್ನು ಹೊಂಡು ಹೊಂಡೂಂತ ಪರಿಪರಿಯಿಂದ ಕೇಳಿಕೋತಾರ.. ಆದರವನು ತುಟಿ ಪಿಟಕ್ಕನುವಲ್ಲ... ಮುನುಸುಕೊಂಡವನಂತೆ ಮಗ್ಗುಲು ಬದಲಾಯಿಸುತವನೆ.. ಅವನೊಳಗ ರವುಸ ತುಂಬಲಕಂತ ಜೀವಮೂತ, ಸಂಜೀವ, ಕೆಂಧೂಳಿಗರೇ