ಪುಟ:ಅರಮನೆ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xxv

ಮಾಡಿ ಈಸ್ಟ್ ಇಂಡಿಯಾ ಕಂಪನಿಯ ಸುಪರ್ಧಿಗೆ ಒಪ್ಪಿಸಿದ. ಕಂಪನಿ
ಮಂಗಳೂರಿನಲ್ಲಿ ಕಲೆಕ್ಟರನಾಗಿದ್ದ ಥಾಮಸ್ ಮನ್ರೋನನ್ನು ಬರಮಾಡಿಕೊಂಡು
ಸದರಿ ಜಿಲ್ಲೆಯನ್ನು ಒಪ್ಪಿಸಿತು.
ಸರ್ ಥಾಮಸ್ ಮನ್ರೋ ಆಡಳಿತ ವಹಿಸಿಕೊಂಡ ಅನತಿಕಾಲದಲ್ಲಿ
ಪಾಳೇಗಾರರ ಸದ್ದಡಗಿಸಿದ.. ಜನ ಸಾಮಾನ್ಯರು ಆತನನ್ನು ಮಂಥೋಳಯ್ಯ
ಎಂದು ಪ್ರೀತಿಯಿಂದ ಕರೆಯತೊಡಗಿದರು.. ಕಾರ್ಲ್‌ಮಾರ್ಕ್ಸ್ ಆತನನ್ನು 'ಜಗತ್ತಿನ
ರೈತರ ಕಲೆಕ್ಟರ್‌' ಎಂದು ಶ್ಲಾಘಿಸಿದ್ದಾನೆ. ಆ ಜನಾನುರಾಗಿ ಬ್ರಿಟಿಷ್ ಅಧಿಕಾರಿಯ
ನೆನಪು ಆಂಧ್ರದ ರಾಯಲಸೀಮಾ ಪ್ರಾಂತದಾದ್ಯಂತ ಇಂದಿಗೂ ಹಚ್ಚಹಸಿರಾಗಿ
ಉಳಿದಿರುವುದು. ಆತಗೆ ಸಂಬಂಧಿಸಿದ ಅನೇಕ ವಿವರಗಳು ಸದರಿ ಕಥಾನಕದ
ಉದ್ದಕ್ಕೂ ಇರುವವು.
ಸರ್ ಥಾಮಸ್ ಮನ್ರೋನ ನೆನಪು ನನ್ನನ್ನು ಕಾಡಲಾರಂಭಿಸಿ ಕಾಲು
ಶತಮಾನವೇ ಆಗಿದೆ. ರಾಯಲಸೀಮಾದ ಪತ್ತಿಕೊಂಡ, ಗುತ್ತಿ ಪ್ರಾಂತದ ಹಲವೆಡೆ
ಮನ್ರಪ್ಪ, ಮನ್ರಮ್ಮ ಎಂಬ ಹೆಸರಿನವರು ಈಗಲೂ ಇದ್ದಾರೆ. ಪತ್ತಿಕೊಂಡದ
ಕಂದಾಯ ಕಛೇರಿ ಎದುರು ಆತನ ಪುಟ್ಟ ಶಿಲ್ಪವಿರುವುದು.. ಅದು ಈಗಲೂ
ರೈತಾಪಿ ಮಂದಿಯಿಂದ ಪೂಜಿಸಿಕೊಳ್ಳುತ್ತಿರುವುದು.. ಈ ಪ್ರಾಂತದ ನಾಲಕೈದು
ಗೆಜೆಟಿಯರ್‌ಗಳಲ್ಲಿ ಆತನ ಕುರಿತು ಸಾಕಷ್ಟು ವಿವರವಿರುವುದು...
ಸರ್ ಥಾಮಸ್ ಮನ್ರೋನ ಬಗ್ಗೆ ಒಂದು ಕೃತಿ ರಚಿಸುವ ಸಲುವಾಗಿ
ಹತ್ತಾರು ಕಡೆ ಸುತ್ತಾಡಿ ಹಲವು ಕೃತಿಗಳನ್ನು ಅಧ್ಯಯನ ಮಾಡಿದೆನು. ಜೊತೆಗೆ
ಬ್ರಿಟೀಷ್ ವಸಾಹತುಶಾಹಿಯ ವಿಸ್ತರಣೆಯನ್ನೂ ಸಹ ಸೈನಿಕ ಸಹಾಯ ಪದ್ದತಿ
ಕಂಪನಿಯ ಪ್ರಧಾನ ಅಮಿಷಗಳಲ್ಲೊಂದು. ಈ ಎಲ್ಲ ಅಧ್ಯಯನ ಮತ್ತು
ಕ್ಷೇತ್ರಕಾರ್ಯ ಅನುಭವದ ತಳಹದಿಯ ಮೇಲೆ ಕಾದ೦ಬರಿ
ಬರೆಯಬೇಕೆಂದುಕೊಂಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ.
ಬರೆಯುವುದು, ಹರಿಯುವುದು ಮಾಡೇ ಮಾಡಿದೆನು. ಈ ಎರಡು ಕ್ರಿಯೆಗಳ
ನಡುವೆ ಒಂದೊದು ವರ್ಷ ಬಿಡುವು ದೊರಕಿರುವುದು. ಆ ಬಿಡುವಿನ ವೇಳೆಯಲ್ಲಿ
ಯಾಪಿಲ್ಲು, ಶಾಮಣ್ಣ, ಚಾಪ್ಲಿನ್, ಭಳಾರೆ ವಿಚಿತ್ರಂ ಕೃತಿಗಳನ್ನು ಪ್ರಕಟಿಸಿದೆನು.
ಆದರೂ ಅರಮನೆ ಕಾದಂಬರಿ ಸೃಷಿ « ಕಾರ್ಯದಿಂದ ವಿರಮಿಸಿರಲಿಲ್ಲ.
ಕಾದಂಬರಿಯ ಕೆಲ ಭಾಗಗಳನ್ನು ಹಿರಿ ಕಿರಿಯ ಲೇಖಕರೆದುರು, ಹೆಂಡತಿ ಎದುರು,
ಶಾಲಾ ಮಕ್ಕಳೆದುರು ವಾಚಿಸುವುದರ ಮೂಲಕ ರಚನೆಯ ಹೊಸ ಆಯಾಮ
ಕಂಡುಕೊಂಡೆ. ಕೇಳುಗರ ಮುಖ ಚಹರೆಯಲ್ಲಾಗುವ ಬದಲಾವಣೆಗಳನ್ನೇ ವಿಮರ್ಶೆ