ಪುಟ:ಅರಮನೆ.pdf/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦೪ ಅರಮನೆ ನೋಡುವ ಸವುಭಾಗ್ಯ ಯಾರಿಗುಂಟು ಯಾರಿಗಿಲ್ಲ? ಆ ಮೂರು ಲೂ ಮರುಗಳಿಂದ ಬಂದಿದ್ದಂಥ ಭಕುತಾದಿ ಮಂದಿ ಸುತ್ತಮುತ್ತ ನಿಂತುಕೊಂಡು ಸಿವನ್ನಾಮ ಪಾರೊತೀ ಪತಿ ಹರ ಹರ ಮಾದೇವಾssಂತ ಘೋಷಣೆ ಹಾಕುತಲಿತ್ತು ಆಗ.. ಬರೋಬ್ಬರಿ ಮೂರುಗಳಿಗೆ ಕಳೆವಷ್ಟರೊಳಗೆ ಮೊಸಯೊಂದನ್ನು ಬಿಟ್ಟು (ಹೆಣ್ಣು ದೇವತೆಯಾದ್ದರಿಂದ ಮೀಸೆ ಯಷ್ಟು ಗಡುತರ ಯಿರುತದೋ ಅಷ್ಟು ಚಂದ) ವುಳಿಕೇದನ್ನು ಚಕ ಚಕಾಂತ ಚವುರ ಮಾಡಿ ಮುಗಿಸಿ ಬಿಟ್ಟನು ನುರಿತ ಕ್ಷವುರಿಕನಾದ ಗೋಯಿಂದನು. ಆತನ ಕಯ್ಯಚಳಕವನ್ನು ಮನಸಾರೆ ಕೊಂಡಾಡಿದ ಮಂದಿ ತಾವು ಕ್ಷವುರ ಮಾಡಿಸಿಕೊಂಡರೆ ಆತನ ಕಯ್ಯಂದಲೇ ಮಾಡಿಸಿಕೊಳ್ಳಬೇಕೆಂದು ನಿರರಿಸಿತು. ಆ ಮ್ಯಾಲ... ಯಷ್ಟೋ ನಾದಿರಣ್ಣ ನಂಗೊಂದೆಲ್ಲು, ಅರಣೇ ನಾದಿರಣ್ಣ ನಂಗೊಂದೆಲ್ಲು...ಯಂದು ತನ್ನತ್ತ ಚಾಚಿದ ಕಯ್ಯಗಳಿಗೆ ರೋಮಗಳನ್ನು ಯಿತರಿಸಿದನು. ಲೇ ನಾದಿರss... ಲೇ ಹಜಾಮಯಂದು ಹೀನಾಯವಾಗಿ ಕರೆಯುತ್ತಿದ್ದ ಅದೇ ಮಂದಿ ತನಗೀಗ ಯಷ್ಟೋss ಯಣೇ.... ಯಂದು ಕರೆಯುತ್ತಿರುವರಲ್ಲಾ.. ಅದೇ ತನ್ನ ಪುಣ್ಯ ಯಂದುಕೊಂಡು ಅಲ್ಲಿಂದ.. ಅತ್ತ ಕೂಡ್ಲಿಗಿ ಪ್ರಾಂತವನ್ನಾಳುತ್ತಿದ್ದ ಕುಂಪಣಿ ಅಧಿಕಾರಿ ಯಡ್ಡವರನು ತನ್ನನ್ನು ಸಕುಟುಂಬ ಬೇರೆಲ್ಲಿಗಾದರೂ ವರ ಮಾಡುವಂತೆ ಮಾಡಿಕೊಂಡಿದ್ದ ಮನವಿಯು ಪತ್ತಿಕೊಂಡ ಸಮೀಪ ತುಗ್ಗಲಿ ಗ್ರಾಮದ ಹೊರವಲಯದಲ್ಲಿ ಬಿಡಾರ ಹಾಕಿಕೊಂಡು ಜಮೀನ್ದಾರರುಪಟಳದ ನೀಲಿ ನಕ್ಷೆ ತಯಾರಿಸುವುದರಲ್ಲಿ ಮಗ್ನನಾಗಿದ್ದ ಕಲೆಬ್ರುಥಾಮಸು ಮನೋ ಸಾಹೇಬನಿಗೆ ತಲುಪಿತ್ತಷ್ಟೆ, ಆತ ಅದನ್ನು ಕೂಲಕಂಷ ಮೋದಿಕೊಂಡನಷ್ಟೆ ಯಡ್ಡವರನಂಥ ಸವುರ ಪರಾಕ್ರಮಕ್ಕೆ ಹೆಸರಾಗಿರುವ ಅಧಿಕಾರಿಯು ಯದೆ ಗುಂದಲಕ ಕಾರಣವು ಯೇನಿರಬೌದು? ಅಂಥ ನಿಷ«ವಂತ ಅಧಿಕಾರಿಯ ಜೀವನದೊಳಗ ನಿಗೂಢವಾದದ್ದೇನೋ ಜರುಗಿದಂತಿರುವುದು. ಯಿದರ ಬಗ್ಗೆ ಖುದ್ಧ ಕರೆಯಿಸಿಕೊಂಡು ಯಿಚಾರಿಸಬೇಕೆಂದು ನಿರರಿಸಿ ಕೂಡಲೆ ಬಂದು ಹಾಜರಾಗುವಂತೆ ಹಿಂದಲೇ ಬುಲಾವ್ ಕಳಿಸಿಕೊಟ್ಟನು. ಆ ಬುಲಾವು ಬಂದಂಥ ಸಮಯದಲ್ಲಿ ಯಡ್ಡವರನೂ, ಆತನ ಹೆಂಡತಿ ಜೆನ್ನಿಫರೂ ಕುದುರೆಡವು ಬೆಣ್ಣೆ, ಬೆಣ್ಣೆಮೋ