ಪುಟ:ಅರಮನೆ.pdf/೫೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೧೪ ಅರಮನೆ ಬೇಡಿಕೊಂಡಿದ್ದನ್ನು ಚಾಣಾಕ್ಷ ಮನ್ನೇ ಗಮನಿಸಿರಲಿಕ್ಕೇ ಬೇಕು. ಯಿಡೀ ಮದರಾಸು ಪ್ರಾಂತವನ್ನೇ ಬುಗುರಿ ಮಾಡಿಕೊಂಡು ಆಟ ಆಡಿಸುತ್ತಿರುವಂಥ, ಯತ್ತರ ಅಯ್ದು ಅಡಿ ಹನ್ನೊಂದಂಗಲ ಯಿರುವಂಥಾ, ಬರುವು ಆರೂವರೆ ಮಣ ಯಿರುವಂಥಾ ಥಾಮಸು ಮನೋ ಸಾಹೇಬನೆದುರು ಸುಳ್ಳು ತಾರಾತಿಗಡಿ ನಡೆಯೋದಿಲ್ಲ ಯಂಬ ಕಾರಣಕ್ಕೆ ತಾನು ಅಯ್ಯಾ ಮಾ ಪಭು.. ನನ್ನ ಪತ್ನಿ ಜೆನ್ನಿಫರಳಿಗೆ ಕುದುರೆಡವು ಯಂಬುವ ತಿಕ್ಕಡಿ ಬಡಕೊಂಡಯ್ಕೆ, ಕುದುರೆಡವೆ ಬೆಣ್ಣೆಮ್ಮು ಯಂಬ ತಿಕ್ಕಡಿ ಬಡಕೊಂಡಯ್ತಿ.. ಅಲ್ಲಿ ವುದಿಸಿರೋ ಅರವತ್ತರ ವಯೋಮಾನದ ಮೋಬಯ್ಯಾ ಯಾ ಸಾಂಬಯ್ಯನೇ ಬಾಲಯೇಸುವೆಂಬ ತಿಕ್ಕಡಿ ಬಡಕೊಂಡಯ್ಕೆ.. ನನ್ನ ಹೆಂಡತಿ ಆ ತಿಕ್ಕಡಿಯಿಂದ ಮ್ಯಾಲೇಳುವ ಲಕ್ಷಣ ಕಾಣಿಸುತಾಯಿಲ್ಲ... ಸಯ್ಯಕೊಟ್ಟಲ್ಲಿ ಆಕೆ ಕುದುರೆಡವಿಗೆ ಹೋಗಿ ನೆಲೆಗೊಳ್ಳುವಾಕಿ ಅಯ್ದಾಳೆ...' ಯಂದು ಮುಂತಾಗಿ ನಾನಾ ಸಮಾಚ್ಯಾರವನ್ನು ಯಾದ್ರುಚ್ಛಿಕವಾಗಿ ಅರಕೆ ಮಾಡಿಕೊಂಡನು. ಅದಕಿದ್ದು ಮನೋಸಾಹೇಬನು ತನಗೀಗಾಗಲೇ ಮನವರಿಕೆಯಾಗಿರುವಂಥಾ ಸುದ್ದಿ ಸಾಮಾಗ್ರಿಗಳೊಡನೆ ತಾಳೆ ಹಾಕಿ ನೋಡಿದನು, ಹಂಗ ನೋಡಿದರೆ ಆಕೆ ಸದ್ಯ ತನ್ನ ಗೆಳೆಯನ ಮಗಳೇ, ಆಕೆಯ ಅಜ್ಜ ಯಿಂಗಲಂಡು ಸಮೀಪದ ಯಾವುದೋ ವಂದೂರಲ್ಲಿ ಧರುವ ಪ್ರಚಾರಕರಾಗಿದ್ದರೆಂಬ ಸಂಗತಿ ಬಹುಶಃ ಯಡ್ಡವರಗೆ ತಿಳಿದಿರಲಾರದು.. ಅದೇ ಅಂಸ ಆಕೆಯ ಮನೋವಿಕ್ರುತಿಗೆ ಕಾರಣಯಿದ್ದಿರಬೌದು.. ಅಲ್ಲದೆ ಅದೂ ಮನೋಯಿಕ್ರುತಿ ಯಿದ್ದಿರಲಾರದು. ಅಗೋಚರವೂ, ಅತಿಮಾನುಷವೂ ಆದ ಶಕ್ತಿಯೊಂದು ಮೋಬಯ್ಯನ ಸರೀರದಲ್ಲಿ ಜಾಗ್ರುತವಾಗಿದ್ದಿರಬೌದು.. ತಾನು ಮುಂದೊಂದು ದಿವಸ ಅಗದಿ ಕೆಲಸ ಕಾವ್ಯದ ನಿಮಿತ್ತ ಕರನಾಟ ದೇಸದ ಕೆನರಾ ಪ್ರಾಂತಕ್ಕೆ ಹೋಗಬೇಕಿರುವುದು. ಕುದುರೆಡವು ತನಗೆ ತನ್ನ ಹೆತ್ತ ತಾಯಿಯಂತೆ ಭಾಸವಾಗತೊಡಗಿತು. ಮಂಗಳೂರಿಗೆ ಹೋಗುವಾಗಲಾದರೂ.. ಅಲ್ಲಿಂದ ಬರುವಾಗಲಾದರೂ.. ಕುದುರೆಡವು ಪಟ್ಟಣಕ್ಕೆ ಹೋಗೇತಿರಬೇಕೆಂದು ನಿರರಿಸಿದ ಮನೋ ಸಾಹೇಬನು ಯಡ್ಡವರನನ್ನು ಕುರಿತು ಹೇಳಿದ್ದೇನೆಂದರೆ... “ಮುಂದೆ ಯಲ್ಲದೂ ತಂತಾನೆ ಸರಿ ಹೋಗುವುದೆಂದರೂ ನೀನು ಕೇಳುತ್ತಿಲ್ಲ. ದಾಂಪತ್ಯ ಜೀವನವನ್ನು ನಡೆಸಿಕೊಂಡು ಹೋಗೋದನು ನಾವೆಲ್ಲರೂ ಯಿಂಡಿಯಾ ನೋಡಿ ಕಲಿಯಬೇಕು. ನಿನ್ನ ಕೋರಿಕೆಯಂತೆ ನಿನ್ನನ್ನು ಕೊಂಗನಾಡಿನ ವೆಲ್ಲೂರಿಗೆ ವರ ಮಾಡುತ್ತಿರುವೆ. ಅಲ್ಲಾದರೂ ನೀನು