ಪುಟ:ಅರಮನೆ.pdf/೫೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೫೦ ಅರಮನೆ ಯೇರಿಕೊಂಡು ಬಂದು ಕಂಡಕಂಡೋರ ಕಿವಿಯೊಳಗ ಕೆಡವುತಲಿದ್ದರು. ಕಣ್ಣಿಂದ ಕಿವಿಯು ಹಲವು ಗಾವುದ ದೂರ ಅಯಿತೇ.. ಕಿವಿಯಿಂದ ಕಣ್ಣು ಹಲವು ಗಾವುದ ದೂರ ಅಯಿತೇ.. ಕೇಳಿದ್ದನ್ನು ಕಣ್ಣಿಂದ ನೋಡಿ ಖಾತರಿ ಮಾಡಿಕೊಳ್ಳಲಕೆಂದು.. ಹಾದಿಗೊಂದು ಹಾದಿ ತಳಕು ಹಾಕಲಕೆಂದು.. ಲವುಕಿಕದಿಂದ ಅಲವುಕಿಕವನ್ನು ಬೇರುಪಡಿಸಲಕೆಂದು.. ಕಷ್ಟದಿಂದ ಸುಖ ಪಡೆಯಲಕೆಂದು... ಸುಖದಿಂದ ಕಷ್ಟವ ಪಡೆಯಲಕೆಂದು ಯಾವತ್ತು ಮಂದಿಯು ಅವಧೂತರೋಪಾದಿಯಲ್ಲಿ ತಕ್ಕರಲಾಡುತಿರುವಾಗ್ಗೆ.... ಯಿತ್ತ ಅದೇ ಸುಡುಗಾಡ ವಕ್ತರಂಜಿತ ದ್ರುಸ್ಯಾವಳಿಯೊಳಗೆ ಮಾಕವಿ ಅಯ್ಯಾಳೇಶ್ವರನು ಸಿಲುಕಿ ಹಾಕಿಕೊಂಡಿದ್ದನು. ಕಾವ್ಯದ ತಿಕ್ಕಡಿಯಿಂದಾಗಿಯೋ.. ನಾಯಿ ರೂಪಧಾರಣ ಮಾಡಿ ತನ್ನ ಕಾವ್ಯವನ್ನು ನಮಲಿ ಹಾಕಿದ ರಾಜಮಾತೆಯನ್ನು ಬಯ್ದು ಕೋಪತಾಪ ತಮಣಿ ಮಾಡಿಕೊಳ್ಳಲಕೆಂದೋ, ಹೊಲಬುಗೆಟ್ರೋ... ಮಾಕವಿಯು ತನಗೆ ಗೊತ್ತಿದ್ದೋ... ಗೊತ್ತಿಲ್ಲದೆಯೋ.. ಸುಡುಗಾಡನ್ನು ಸೇರಿಕೊಂಡು ಬಿಟ್ಟಿದ್ದನು. ಆಗಿನ್ನು ಆಕಾಸದೊಳಗ ಚುಕ್ಕಿಗಳು ಮೂಡೋದು ಮುಳುಗೋದು ಮಾಡುತಲಿದ್ದವು. ಬೆಳ್ಳಿ ಮೂಡಿ ಕತ್ತಲೆ ಯಂಬುವ ಕಳ್ಳು ಕುಡಿದು ಮತ್ತೇರಿ ಕೆಳಗಣ್ಣು ಮ್ಯಾಲಗಣ್ಣು ಮಾಡುತಲಿದ್ದ ಚುಕ್ಕಿಗಳನ್ನು ಬಲವಂತದಿಂದ ಜಾಗ ಖಾಲಿ ಮಾಡಿಸಲಾರಂಭಿಸಿತ್ತು. ಚುಕ್ಕಿಗಳು ವಲ್ಲದ ಮನಸಿನಿಂದ ಬೆಳಕಿನ ತೆರೆ ಹಿಂದೆ ಬಚ್ಚಿಟ್ಟುಕೊಳ್ಳಲಾರಂಭಿಸಿದ್ದವು. ಮೂಡಲ ದಿಡ್ಡಿ ಬಾಗಿಲಿಂದ ಕೆಂಗಿರಣಗಳು ಮೋಡುತೋಡುತ ಬಂದು ತಮ್ಮ ಸೂರ ಪರಮಾತುಮನ ಆಗಮನಕ್ಕೆ ಹಾದಿ ಸುಗಮಗೊಂಡಿರುವುದೋ.. ಯಿಲ್ಲಮೋ ಯಂದು ಪರಿಸೀಲನಾ ಕಾರಕ್ಕೆ ತೊಡಗಿದ್ದವು. ಸಾಯೋರಿಲ್ಲದ ಕಾರಣಕ್ಕಾಗಿ ಬಿಕೋಯನ್ನುತಲಿದ್ದ ಸುಡುಗಾಡ ಮಮ್ಮಿ ಮ್ಯಾಲ ಯಿಡೀ ರಾತ್ರಿಅಲೆದಲೆದು ನರಿ ತೋಳ ಕಿರುಬಗಳು ತಮ್ಮ ತಮ್ಮ ಮಾರಿಗಳನು ಸಪ್ಪಗ ಮಾಡಿಕೊಂಡು ವಾಪಾಸು ಹೋಗಲಕ ಹತ್ತಿದ್ದವು.. ಅದೇ ತುಸು ಸಮಯದ ಹಿಂದೆಯಷ್ಟೆ ಕಳ್ಳರು ಸಾಸ್ತರೋಕ್ತವಾಗಿ ಕಳೇಬರವನ್ನು ಗುದ್ದೊಳಗಿಟ್ಟು ತಾವು ವಾಪಾಸು ಹೋಗುವಾಗ್ಗೆ ಕಾವಲುಗಾರ ಕಳ್ಳಳ್ಳಿ ಬುದ್ಧನ ಕಯ್ಕೆ ಹಿಡಿದು ಹೆಗಲ ಮ್ಯಾಲ ಕಯ್ಕ ಹಾಕಿ ಯೇದಾಂತವನ್ನಾಡಿ “ನೋಡೆಜಮಾನ ನಾವು ಯಲ್ಲಾಪ್ರಕೊರಚರಟ್ಟಿ ಚೋರರು.. ಯೀಗ ಮಣ್ಣು ಮಾಡಿದ್ದು ಕುದುರೆಡವು ರಾಣೆವ್ವನ್ನ.. ನಾಯಿ ನರಿ ಮುಟ್ಟಧಾಂಗ ಸತ್ಯಾಗಿ ನೋಡಿಕ್ಯಾ. ಬಡವ ಅದೀ..