ಪುಟ:ಅರಮನೆ.pdf/೬೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೫೭೧ ಹನಿಯೂ, ಕೊಡುವುದಿಲ್ಲ ಯಂದು ತಾಯಕ್ಕನೂ.. ಹಿಂಗೇ ಮಾತಿಗೆ ಮಾತು ಬೆಳೆಯಿತು. ಯದರಲ್ಲಿ ಜುಲುಮಿ ಯಂಬುದು ಯಳ್ಳಷ್ಟು ಯಿರಲಿಲ್ಲ. ಹೆಚಿನ್ನಸಾನಿಯನ್ನು ಯಷ್ಟು ಪ್ರೀತಿಸುತ್ತಿರುವನೋ, ಆಕೆಯೂ ತನನ್ನು ಅಷ್ಟೇ ಪ್ರೀತಿಸುತ್ತಿರುವಳೆಂಬುದು ಸರುವ ಯೇದ್ಯವಾಗಿರುವುದು. ಕೊನೀಕೆ ಅಲ್ಲಿದ್ದ ಸಭಾಸದರು “ತಾಯಕ್ಕ, ನಿಮಗ ಯಿದ್ದಂಗ ನಮಗೂ ಹಿಂದೂ ಧರುಮದ ಬಗ್ಗೆ ಗವುರವ ನಿಷೆ«ವುಂಟು. ಯಿದೇ ಭಾವನ ನಿಮ್ಮ ಮಗಳಿಗೂ ಯಿರಬೇಕಾಗಿತ್ತು. ಆಕೆ ಬಂದು ಯಲ್ಲಾರ ಸಮಕ್ಷಮ ಹೆನ್ರಿಸಾಹೇಬರನ್ನು ಪ್ರೀತಿ ಮಾಡ್ತಾಯಿಲ್ಲ.. ಸಾಹೇಬರು ಜುಲುಮಿ ಮಾಡುತಾರ ಅಂತ ವಂದು ಮಾತನ ಹೇಳಿ.. ಯೇನಂತೀರೀ ಸಾಹೇಬರ” ಯಂದು ಕೇಳಿದ್ದಕ್ಕೆ ಹೆನ್ರಿಯು “ಹಂಗ ಹೇಳಿದ ಕೂಡಲೆ ಆಕೇನ ಮರತುಬಿಡುತೀನಿ” ಯಂದು ಸಮ್ಮತಿಸಿದನು. ಶ್ರೀಮಂತ ಬುಗುಡಿಗೂ ಆ ಮಾತು ಸರಿ ಅನ್ನಿಸಿತು. ಅದೂ ಅಲ್ಲಿದ್ದ ಖದ್ಧ ತಾಯಿಯೇ ತನ್ನ ಮಗಳನ್ನು ಅಧಿಕಾರಿಗೆ ಪರಿಚಯ ಮಾಡಿಸಿರುವುದು. ಯಿಂಥ ತಪ್ಪು ಪರಪಾಟನ್ನು ಬಗಲೊಳಗಿಟ್ಟುಕೊಂಡು ಯಿನ್ನೊಬ್ಬರ ಕಡೇಕ ಬೊಟ್ಟುಮಾಡಿ ತೋರಿಸುವುದು ಯಷ್ಟರ ಮಟ್ಟಿಗೆ ಸರಿ? ಬುಗಡಿ ತಾಯಕ್ಕನ ವಜ್ರದೋಲೆ (ತಾನು ಕದ್ದು ಮುಚ್ಚಿ ಮಾಡಿಸಿಕೊಟ್ಟಿರುವುದು) ಯಿದ್ದ ಕಿವಿ ಸನೀಕ ಬಾಯ್ಕ ವಯ್ದು ಚಾವತ್ತು ತತ್ವನ ಭರನೆ ನಡೆಸಿದ. ತದನಂತರ ನಿಮನಿಮ್ಮಲ್ಲಿ ಯಾರಾದ್ರುಬಂದು ಚಿನ್ನವ್ವನ ಅಭಿಪ್ರಾಯ ಪಡಕೊಳ್ಳಬೌದೆಂದು ಹೇಳಿದ... ತಾಯಕ್ಕ ಬಲು ಬ್ಯಾಸರ ಹೊತ್ತುಕೊಂಡೇ ವಾಪಾಸಾದಳು. ಕುಂತರೂ, ನಿಂತರೂ ಅವರ ಹೆಸರಿನ ಜಪಮಾಡುತ್ತಿರುವ ತನ್ನ ಮಗಳು ಪ್ರೀತಿಸೋದಿಲ್ಲಾಂತ ಅದೆಂಗ ಹೇಳ್ಯಾಳು? ಮನೆಗೆ ಹೋಗುತ್ತಲೆ ತಾಯಕ್ಕನೂ, ಸಾಕುತಂದೆಯಾದ ಬುಗಡಿ ನೀಲಕಂಠಪ್ಪನೂ ಚಿನ್ನಾಸಾನೀನ ಯದುರಿಗೆ ಕೂಂಡ್ರಿಸಿಕೊಂಡು ಯಾರಾರ ಬಂದು ಕೇಳಿದರ ವಲ್ಲೆನ್ನು, ಯಿತ್ತೆನ್ನು ಅಂತ ಪರಿಪರಿಯಿಂದ ಹೇಳಿಕೊಂಡರು, ಕೇಳಿಕೊಂಡರು. ಹೈು ಅನ್ನದ, ವುಸುರು ಬಿಡದ ಸುಮ್ಮಕ ಯಿದ್ದ ಚಿನ್ನಾಸಾನಿ ತಮಟೆ ನೇತ್ರುತ್ವದಲ್ಲಿ ಬಂದು ಕೇಳಿದ ನಿಯೋಗದ ಯದುರು ಔದು.. ನಾನು ಮದುವಿ ಆದರ ಹೆನ ಆಗೋದು” ಯಂದು ಹೇಳಿಬಿಡುವುದೇ? ಅತ್ತ ಕುದುರೆಡವು ಪಟ್ಟಣದೊಳಗೆ ಮಡೇರೋಣಿಯೊಳಗೆ ಸೊಕ್ಕೆ ಮಾರನಾಯಕ ಸಂಗಡಿಗರೊಂದಿಗೆ ಮಾರುಯೇಸದಲ್ಲಿ ಭೀಮನನ್ನು ಹುಡುಕಲಕ