ಪುಟ:ಅರಮನೆ.pdf/೬೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮a ಅರಮನೆ ತಮ್ಮ ಕಥಿಯೊಳಗ ಸಮಸ್ತ ಕುಂತಳಸೀಮೆಯನ್ನು ತರುಬವರೆ.. ಅತಿಮಾನುಷ ಸಗುತಿಗಳ ಆಡುಂಬೊಲ ಮಾಡಿಕೊಟ್ಟವರೆ.. ಅವರ ಲೆಕ್ಕದ ಪ್ರಕಾರ ಮುಂದಕ ಯೇನಾಯಿತೆಂದರೆ.... ಕುದುರೆಡ ವ ಸಾಂಬವಿ ಭಾಷರು ತಂಟೆಗೆ ಹೋದುದರ ಪರಿಣಾಮವಾಗಿ.. ವುಪದ್ರವಿ, ನಿರುಪದ್ರವಿ ಅಕ್ಕಸರ ಯಂಬ ಹೆಜ್ಜೆನ ಗೂಡಿಗೆ ಕಲ್ಕಟ್ಟ ಪರಿಣಾಮವಾಗಿ ಯೊ ಸೀಮೆಯಿಂದ ಆ ಸೀಮೆಮಟ ಗಬ್ಬೆದ್ದು ನಾರಲಕ ಹತ್ತಿತಂತೆ.. ಅಕ್ಕಸರ ಯಿಹೀನ, ಭಾವನಾ ಯಿಹೀನ ಘನಘೋರ ಬದುಕನ ಯಿಡೀ ಕುಂತಳ ಸೀಮೆ ನೀಸಿತಂತೆ.. ಆ ಯಂಟು ಹತ್ತು ದಿನ ಮಾನ ಯಾರೊಬ್ಬರ ಪಂಚೇಂದ್ರಿಯ ಗಳಾಗಲೀ, ನವರಂದ್ರಗಳಾಗಲೀ ಸ್ವಾಧೀನಯಿರಲಿಲ್ಲವಂತೆ.. ಸಾಂಬವಿಯ ಸರೀರದಿಂದ ಪಯಣ ಹೊಂಟ ಅಕ್ಕಸರಗಳು, ಭಾವನೆಗಳು ತಮ್ಮ ತಮ್ಮ ನಿದ್ದಿಷ್ಟ ಠಿಕಾಣಿ ಗಳನ್ನು ತುಂಬಿಕೊಳ್ಳಲಾರಂಭಿಸಿದ ಛಣದಿಂದ ಪಂಚೇಂದ್ರಿಯಗಳು ನವರಂದ್ರಗಳು ಮಿಸುಕ ತೊಡಗಿದವಂತೆ... ಅವರನ ಅವರು ಯಂತಲೂ, ಯವರನ ಲವರು ಯಂತಲೂ ಗುರುತಿಸಲಾರಂಭಿಸಿದರಂತೆ... ಯಾಕಿಂಗಾತು? ಯದಕಿಂಗಾತು ಯಂದು ಯಲ್ಲಾರನು ಯಲ್ಲರು ಕೇಳುತ್ತಿದ್ದರಂತೆ. ಕುಂಪಣಿ ಸರಕಾರದ ಬಂಗಲೆಯ ಯಿದ್ಯಾಮಾನಗಳನ್ನೇ ವುದಾಹರಣೆಯಾಗಿ ಕೊಡುತ್ತಾರೆ ಜಾನಪದ ಕಥೆಗಾರರು. ಮತ್ತೆತ್ತಲಿಂದಲೋ ಕಾರಖನರು, ಮಳಿಗ ಮಾನ್ಯರು, ಚಾಕರಿ ವಂದಿಗರು, ಹೊದರೊಳಗೇನೋ ಯಿದಿಯ ಕಯ್ಯಾಡ ಯಿದ್ದಂಗದೆ.. ದಯವ ಮುನುದು ಕ್ಷಮಿಸಿದಂಗದೆ.. ಯಂದನಕಂತ ಬಂದ ಆಹೋಬಲ ಸಾಸ್ತ್ರಿಗಳು ನೋಡು ನೋಡುತ್ತಿದ್ದಂತೆ ಅವಸರದಿಂದ ಬವಸರದಿಂದ ಸಬುಧವಾಗುತ್ತಿದ್ದು ದೇನಂತೆ? ಸುಧಗಳು ವಾಕ್ಯಗಳಾಗಿ ರೂಪುಗೊಳ್ಳುತ್ತಿದ್ದುದೇನಂತೆ? ಕತ್ತುಜಾಗದಲ್ಲಿ ಕರುಮ ಬಂದು ನಿಂತಿತು... ಕರುಮದ ಜಾಗದಲ್ಲಿ ಕ್ರಿಯಾಪದವು ಕಯ್ಯ ಕಟ್ಟಿಕೊಂಡು ನಿಂತಿತಂತೆ.. ಕೆಲವು ವಾಕ್ಯಗಳು ಹಿಂದಕ ಮುಂದಕ ಜರಗಾಡಿದವಂತೆ.. ಯಾವೊಂದು ವಾಕ್ಯವು ನಿಖರವಾದ ಅಲ್ಲ ಕೊಡಲಿಲ್ಲವಂತೆ. ಅಂಥ ಹಾಳೆಗಳೊಳಗೊಂಡಿದ್ದ ಕಡತಗಳೂ ತಮ್ಮ ಮೂಲ ಧ್ವನಿ ಕಳಕೊಂಡಿದ್ದವಂತೆ... ಹನಿಯು ಪಡುತಲಿದ್ದ ಸಂಕಟವನ್ನು ಕಥೆಗಾರರು ಕರುಳು ಹಿಚುಕುವಂತೆ ವರಣನ ಮಾಡಿರುವರು ಸಿವನೇ... ಕಾರಣ ಹೆಚಿನ್ನಾಸಾನಿಯ ಮ್ಯಾಲ ಜೀವವನ