ಪುಟ:ಅರಮನೆ.pdf/೬೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೯೪ ಅರಮನೆ ಸಾಂಬವಿಯ ದಯದಿಂದ ಅಂತೂ... ಯಿಂತೂ ತಮಗ ಸ್ವಾಸಂತ್ರದೊರಕಿತು ಸರೇಸರೆ. ಆ ತಾಯಿಯ ಸರೀರದೊಳಗ ಅತಿಥ್ಯ ಅನುಭವಿಸುತ್ತಿರು ವಾಗ ಅವಧೂತ ಸಂಬಂಧೀ ಭಾವನೆಗಳು ತಮ್ಮನ್ನು ಪರಿಚಯ ಮಾಡಿಕೊಂಡವು. “ಹೋ ಹೋ ನೀವು ಚೋರಕಲೆಗೆ ಸಂಬಂಧಿಸಿದ ಭಾವನೆಗಳೇನು? ನೋಡಲಕ ಯಷ್ಟೊಂದು ಸಜ್ಜನಿಕೆಯಿಂದ ಯಿದ್ದೀರಲ್ಲ.” ಯಂದು ಆಶ್ಚಯ್ಯ ಯಕ್ತಪಡಿಸದೆ ಯಿರಲಿಲ್ಲ... ನೀವು ಯಾರಪಾ ಯಂದು ತಾವು ಕೇಳಿದಾಗ ಅವು ಫಲಾನ ಯಂಥೋವುಯಂದು ಮಾನತೆಯಿಂದ ಹೇಳದೆ ಯಿರಲಿಲ್ಲ... ಅವಧೂತ ಕುಟುಂಬಕ್ಕೆ ಸೇರಿದವರೆಂದು ಹೇಳೀರಿ.. ಆದರ ಯಷ್ಟೊಂದು ಗಲೀಜಾಗದೀರಲ್ಲ' ಯಂದು ಕೇಳಿದ್ದಕ್ಕವು "ಯೇನು ಮಾಡೋದರಪ್ಪಾ.. ನಮ ಕರುಮ ಫಲ” ಯಂದು ನಿಟ್ಟುಸಿರಿಟ್ಟು ವಂದು ರಾಮಾಯಣವನ್ನೇ ವಾಚನ ಮಾಡಿ ಬಿಟ್ಟವಂತೆ.. ಸುಖದುಕ್ಕ ಹಂಚಿಕೊಂಡವು, ಪರಸ್ತೂರ ಮರುಗಿದವು, ತಮ್ಮ ತಮ್ಮ ಮೂಲ ಆಶ್ರಯದಾಣಗಳನ್ನು ಅದಲು ಬದಲು ಮಾಡಿಕೊಂಡು ಸೋಜಿಗ ಮೆರೆಯೋಣ ಯಂದುದಕ್ಕೆ ಅವು ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿರಪ್ಪಾ” ಯಂದು ಸಮ್ಮತಿಸಿದವಂತೆ.. ಬಿಡುಗಡೆಯ ಕಾಲಕ್ಕೆ ಆಕಾಸ ರಾಮಣ್ಣಯಂಬಾತನ ಖನ ಗುರುತಾ ಕೇಳಿ ತಿಳಿದುಕೊಂಡವು. ಯಾಸ ಮರೆ ಮಾಚಿಕೊಂಡೋ, ಯಿತರೇ ಕಳುವು ಸದಸ್ಯ ಭಾವನೆಗಳೊಂದಿಗೆ ಪಯಣ ಹೊಂಟು ಮರೆಯಾಗಿ ಬಿಟ್ಟವಂತ ಸಿವನೇ... ಪಾಪ.. ಅವು ಮೊದಲೇ ಅವಧೂತ ಪರಂಪರೆಯ ಸಾದು ಸೊಭಾವದವು, ಸುಖಕರವಾಗಿ ಗಮ್ಯ ಸೇರಿಕೊಂಡಮೋ ಅಥವಾ ಹಾದಿ ಮದ್ಯದಲ್ಲೇನಾದರೂ? ಕಳುವು ಭಾವನೆಗಳು ಯಷ್ಟೋ ತಾಸುಗಳ ಪರಂತರ ನಡಕೋತ ನಡಕೊತ.. ಅವು ತಾವು ಸೇರಬೇಕಿದ್ದ ಗಮ್ಯ ಯಾವುದಿತ್ತಪ್ಪಾ ಅಂದರ.. ಬಡಗಣ ದಿಕ್ಕಿನ ಶಾನೇ ದೂರದಲ್ಲಿ ವನಪರಿ, ಕುಂದರಿ, ವೆಲುದುರಿ, ಚಿಲಕಮರಿ ಯಂಬ ನಾಕು ಮರುಗಳ ವಂದು ಸಮುಸ್ಥಾನ ಯಿರುವುದು. ಪರಸ್ತೂರ ಕೂಗಳತೆ, ಕಣ್ಣಳತೆ ದೂರದಲ್ಲಿರುವ ಆ ನಾಕೂ ಮರುಗಳಿಗೊಂದೇ ವಂದು ಸುಡುಗಾಡು ಯಿರುವುದು. ಅದರೊಳಗೆ ಸುಡುಗಾಡೆಪ್ಪಾ ವಧೂತನೆಂಬಾತನು ಆರುಮೂಲೆಗಳ ವಂದು ಮನೆ ಥರದ ಮನೆಯನ್ನು