ಪುಟ:ಅರಮನೆ.pdf/೬೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೬೯ ಯಜಮಾನಿಕೆಯ ಸ್ಥಾನದಲ್ಲಿದ್ದ ಸೀಲಿಂಗನ ಗವುಡ, ಮರಿಲಿಂಗನ ಗವುಡರ ಖಾಸಾ ಕುದುರೆಯನ್ನು ಪಡಕೊಂಡಿದ್ದರು. ಅದು ವಾಯುಯೇಗದಲ್ಲಿ ಮೋಡಬಲ್ಲಂಥ ಪಂಚಕಲ್ಯಾಣಿಯಾಗಿತ್ತು. ಕಳುವುಕಲೆ ಕುರಿತು ಬೋಧ ಮಾಡೀ ಮಾಡಿ ತನ್ನ ಸಿಷ್ಟ ವಗ್ಗದ ಅನೇಕರನ್ನು ನಿಷ್ಣಾತಕಳ್ಳರನ್ನಾಗಿ ಮಾಡಿಬಿಟ್ಟಿದ್ದರು. ಸೂಾಸ್ತವಾದೊಡನೆ ಅವಧೂತತನವನ್ನು ಸಂದೂಕದೊಳಗ ಭದ್ರಪಡಿಸಿ ಕಣ್ಣಷ್ಟೆ ಹೊರತುಪಡಿಸಿದಂತೆ ಕಪ್ಪನೆಯ ನಿಲುವಂಗಿಯನ್ನು ನಖಸಿಖಾಂತ ಧಾರಣ ಮಾಡಿ ಕುದುರೆಯೇರಿ ಕೆಂಚನಗುಡ್ಡ, ಕಲಕಂಭ, ಸುಳುವಾಯಿ ಯವೇ ಮೊದಲಾದ ದೂರದೂರುಗಳಿಗೆ ಹೋಗಿ ದರೋಡೆ ಕಾವ್ಯವನ್ನು ಲೀಲಾಜಾಲವಾಗಿ ಮುಗಿಸಿ ಅದರ ಹೇರಳ ಫಲವನ್ನು ಕುದುರೆ ಮ್ಯಾಲ ಹೇರಿಕೊಂಡು ರಾತಿರೋರಾತಿರಿ ಸೊಸ್ಥಳ ಸೇರಿಕೊಂತಿದ್ದರು... ಹೇರಳ ಸಂಪತ್ತನ್ನು ಗಳಿಸಿ ಸದರೀ ಸಮುಸ್ಥಾನದ ವಡೆಯ ತಾವಾಗಬೇಕೆಂಬ ಕಣಸು ಕಾಂಬುತಲಿದ್ದರು. ಹೀಗಿರುತ್ತಿರಲಾಗಿ ವಂದಿವಸ ಯೇನಾಯಿತೆಂದರೆ.. ಕಂತಳ ಪ್ರಾಂತವಂದಲ್ಲದೆ ದೂರ ದೂರದ ಪ್ರಾಂತಗಳಲ್ಲೂ ಸಹ ಜನ ಜೀವನದ ಸಯ್ತಿಯು ನಿಧ ನಿಧಾನವಾಗಿ ಬದಲಾಗುತಲಿದ್ದಿತು. ಮೂರರಂಕೆಯು ಆರರಂಕೆಯ ಯಾಸವನ್ನು ಆರರಂಕೆಯು ಮೂರರಂಕೆಯ ಯಾಸವನ್ನು .. ಸಿವ ಸಿವಾ... ವಡಲೊಳಗಿನ ವುದಕವು ತುಳುಕಾಡಧಾಂಗ ವರಮಾನವನ್ನು ಭೋಗ್ಯ ಮಾಡಿಕೊಂಡಿದ್ದ ಕುದುರಡವು ಪಟ್ಟಣದೊಳಗ ಹಿಂದು ಮುಂದಿನ ನಡುವೆ ಲಜ್ಜೆಯ ರಂಗವಲ್ಲಿಯ ಲಕ್ಷಣಗೆರೆ ಯಲ್ಲಂದರಲ್ಲಿ ಮೂಡಿತ್ತು ಸಿವನೇ, ಯಿಂಥ ಹೆದರಿಕೆಯ ಹೊತ್ತಿನಲ್ಲೇ ಸಾಬಯ್ಯಗ ಹರೇವು ಬಂದಿರುವುದೆಂಬ, ಹರೇವು ಸಾಂಬಯ್ಯಗ ಮತ್ತವಲಿದಿರುವುದೆಂಬ ಸಂಗತಿ ಲೋಬಾನದ ಹೊಂಗೆ ಹಾಂಗ ಪಟ್ಟಣದ ತುಂಬೆಲ್ಲ ಹರಡಲಕ ತಡಾ ಮಾಡಲಿಲ್ಲ. ಸಾಂಬಯ್ಯ ಹೆಂಗೆಂಗೋ ಆಗವನೆ ಯಂದು ತಮ್ಮ ತಮ್ಮ ಹೆಂಡಂದಿರು ಕುವಾಡಕ ಹೇಳುತಿರುವರೆಂದೇ ಭೂಪಾಲು ಗಂಡಂದಿರು ಯೋ ತನಕ ತಿಳಕೊಂಡಿದ್ದರು. ವದಗಿರುವ ಹರೇವನ್ನು ಹೆಂಗ ಅನುಭವಿಸುತಲಿರುವನು? ತನ್ನ ಸರೀರದ ಮ್ಯಾಲ ಹೆಂಗ ಹದ ಪಡಕೊಂಡ? ತನ್ನ ಸರೀರದ ಅಯಿಭಾಜ್ಯವಾಗಿದ್ದ ಸುಕ್ಕುಗಳನ, ರುದ್ದಾಪ್ಯವನ ಅದೆಂಗ ಮಾಯ ಮಾಡಿಕೊಂಡಿರುವನಾ ಮಯಾವಿ ಯಂಬ ಅನುಮಾನಗಳ ಪರಿಹಾರ ಮಾಡಿಕೊಳ್ಳುವ ಸಲುವಾಗಿ ಅರಮನೆಯ ಮುಂದ