ಪುಟ:ಅರಮನೆ.pdf/೬೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹುತ್ತ ಕೇಳಿಸಿಕೊಂತು.. ಪಟ್ಟಣದ ಲಕ್ಷಾಂತರ ಕಿವಿಗಳು ಕೇಳಿಸಿಕೊಂಡವು... ಅರಮನೆಯ ನವರಂದ್ರಗಳಿಂದ ಜಿನುಗಲಾರಂಭಿಸಿದ ಸದರಿ ವರಮಾನವು ವಂದು ಗ್ರಾಮ ಅಂಬದೆ, ಎಂದು ಮೂರು ಅಂಬಡೆ ಪ್ರವಾಹದೋಪಾದಿ ಯಲ್ಲಿ ಹರಕೋತ ಹರಕೋತ.... ಅಗೋಚರವಾದದ್ದೊಂದು ಅಂಗಳದಾಗ ಬಂದಂಗಾತಲ್ಲ .. ಮನೆಯೊಳಗೆ ಬಂದಂಗಾತಲ್ಲಾ... ತಮ್ಮ ಕಿವಿಯೊಳಗ ಬಂದಂಗಾತಲ್ಲ.. ಮಯ್ಯ ಸಂದುಗಳಲ್ಲಿ ಕಚಗುಳ್ಳಿ ಯಿಟ್ಟಂಗಾತಲ್ಲಾ.. ಯಿದೇನಿದ್ದೀತು? ಅದೇ ಕಣಪ್ಪಾ. ಸಾಂಬಯ್ಯಗೆ, ಸಾಂಬವಿಯ ವರಪುತ್ರಂಗೆ, ಅದೇ ಕುದುರೆಡವಿನ ಅನಭಿಷಕ್ತ ಸಾಮಾಂಟಂಗೆ.. ಹೊದವಾರ ಹರೇವು ಕಾಣಿಸಿಕೊಂಡಿತಂತೆ.. ನಿನ್ನೆ ಅವಯ್ಯ ಪಿಳ್ಳೆ ಬಗಸವನಂತೆ...

  • ಹೆಣ್ಣು ಮಕ್ಕಳನ್ನು ಹಡಕೊಂಡಿದ್ದೋರು ಕುಂತಳ ಸೀಮೆಯೊಳಗ ಮಸ್ತುಮಂದಿ ಯಿದ್ದರಲ್ಲಾ.. ಅಂಥವರು ತಮ್ಮ ತಮ್ಮ ಸಾಲಂಕ್ರುತ ಪಳ್ಳೆಗಳನು ಬೆನ್ನ ಹಿಂದ ಯಿಟುಕೊಂಡು ಕುದುರೆಡವ ಹಾದಿ ಹಿಡಿದರು. ಅರಮನೆಯ ದಸ್ತಾವೇಜುಗಳೊಳಗ ತಮ್ಮ ಪಿಳ್ಳೆಗಳ ನಾಮಾಂಕಿತಗಳನು ನೋಂದಣಿ ಮಾಡಿಸ ತೊಡಗಿದರು. ತಾವೇ ವರದಕ್ಷಿಣೆ, ವರೋಪಚಾರ ಕೊಟ್ಟು ಸೊಂತ ಖರಚೀಲೆ ತಮ್ಮ ಪಿಳ್ಳೆಗಳನು ಧಾರೆ ಯರದು ಕೊಡತೇವಿ ಯಂದು ಪಟ್ಟಣ ಸೋಮಿಗಳನ್ನಂಗಲಾಚ ತೊಡಗಿದರು. ಪಟ್ಟಣ ಸೋಮಿಗಳು ಊ ಪಿಳೇನ ಮಾಡಿಕೋತಿಯಾ, ಆ ಪಿಳ್ಳೇನ ಮಾಡಿಕೋತಿಯಾ ಯಂದು ಕೇಳುತ್ತಿದ್ದ ಕಾವಯ್ಯನು ದಿಕ್ಕೇ ತೋಚದವನಂತಾಗುತ್ತಿದ್ದನು....

ಹಾ... ಹಾ... ನನ್ನ ರೂರಲ್ಲಿಂಡಿಯಾವೇ.. ಹೋ ಹೋ ನನ್ನ ರೂರಲ್ಲಿಂಡಿಯಾವೇ... ಸಯ್.. ಸಯ್.. ನನ್ನ ರೂರಲ್ಲಿಂಡಿಯಾವೇ ಯಂದು ದಿವಸಕೊಂದು ಹತ್ತು ಸಲವಾದರೂ ವುದ್ದಾರ ತೆಗೆಯೂತ ವಂದು ಮೂರು ಅಂಬದೆ ಎಂದು ಗ್ರಾಮ ಅಂಬದೆ ಎಂದು ಪಟ್ಟಣ ಅಂಬಡೆ ತಿರುಗುತಲಿದ್ದ ಮನೋಸಾಹೇಬನು ತನ್ನ ಸರೀರದ ವಂದರ ಭಾಗವನ್ನು ಜಮೀಂದಾರರಿಗೆ ಮೀಸಲಿಟ್ಟಿದ್ದರೆ ವುಳಿದರ ಭಾಗವನ್ನು ಮೋಣಿ ಮೋಣಿಗಳಿಗೆ, ಸಂಧುಸಂದಿಗಳಿಗೆ, ಬೆಮರು ವಾಸಣೆಗೆ ಬೆನ್ನಿಂಗಟ್ಟಿದ್ದ ಹೊಟ್ಟೆಗಳಿಗೆ ಆಳಕ್ಕಿಳಿದ ಕಣ್ಣುಗಳಿಗೆ, ತರಾವರಿ ಯಿಸುಮಯಗಳಿಗಾಗಿ ಮೀಸಲಿಟ್ಟಿದ್ದನು. ಕಲಿಯೂತ, ಕಲಿಸೂತ