ಪುಟ:ಅರಮನೆ.pdf/೬೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೪೫ ಮರೆತದ್ದಾಗಲೀ... ಬಂದೇ ಬಿಡಲಾರಂಭಿಸಿದರು ಮಂದಿ.. ಅಗೋ ಅಲ್ಲೊಬ್ಬರು, ಯಗೋ ಯಿಲ್ಲೊಬ್ಬರು.. ಯಗೋ ಯಿಲ್ಲೊಂದು ಗುಂಪು... ಅಗೋ ಅಲ್ಲೊಂದು ಗುಂಪು.. ಆ ವಾದ್ಯರುಂದವು ಅಲ್ಲಿಂದ ಬರುತ್ತಿರುವುದು, ಯೀ ವಾದ್ಯ ರುಂದವು ಯಿಲ್ಲಿಂದ ಬರುತ್ತಿರುವುದು. ಗೋರಖ್‌ನಾಥ್ ಮಹಾ ಪ್ರಭೂ ಜಮ್.... ಅತ್ತ ಡಣಾಪುರದೊಳಗ ಚಿನ್ನಾ ಸಾನಿಯು ಹೊಟ್ಟೆಯೊಳಗಿನ ನೀರು ತುಳುಕಾಡದಂಗೆ ಜೋಪಾನದಿಂದಿದ್ದಳು. ಹೆಂಡತಿಯ ಗಂಟ ಲೊಳಗಿಳಿಯುವ ತೊಂಬಲದ ರಸವನ್ನು ನೋಡುತ ಮಯ್ಕೆಮರೆತಿರುವ ತಮ್ಮ ಮಗ ಕಲಿಯಿರ ನಾಯಕನು ಯವತ್ತು ರಾಜ್ಯಭಾರ ದೋಳಿಕ್ಕೆ ತಲೆಹಾಕ್ಯಾನು, ನಾಳೆ ಹಾಕ್ಯಾನು ಯಂದು ಕಾಯುತಲಿದ್ದ ಡಣ್ಣಾಯಕರು ಕೂಗಿ ಕರೆದರೆಲ್ಲಿ ಅವರ ದಾಂಪತ್ಯದೇಕಾಂತ ಭಂಗ ಗೊಳಿಸಿದ ಪಾಪ ಬರುವುದೋ ಯಂಬ ಗೊಂದಲದಲ್ಲಿ ಯಿರುವಾಗ್ಗೆ.... ಫಲಾನ ದಿವಸದಂದು ಹೊಂಟಿರುವ ಸಾಹೇಬನು ಫಲಾನ ದಿವಸಕ್ಕೆ ಫಲಾನ ಮೂರನ್ನು ತಲುಪಲಿರುವನೆಂಬ ಸಂಗತಿಯನ್ನು ಅಂಚೆ ಯಿಲಾಖೆಯ ಕುರುಕುಂದಪ್ಪ ಬಿತ್ತರ ಮಾಡಿದೊಡನೆ ಸಾಸ್ತಿದ್ವಯರು ದೂರದ ಚಿನ್ನೋಬಳವನ್ನು ಭಕುತಿ ಪೂರೈಕವಾಗಿ ನೆನಪಿಸಿಕೊಂಡರು. ಲಗು ಬಗೆಯಿಂದ ಜಳಕ ಸಂದ್ಯಾವಂದನೆಗಳನ್ನು ಪೂರಯಿಸಿ ಸನೀಹದಲ್ಲಿದ್ದ ಅಳಲೆಕಟ್ಟೆಯ ಮ್ಯಾಲ ಮುಚ್ಚಿದ ಕಣ್ಣುಗಳೊಳಗೆ ಚಿನ್ನೋಬಳವನ್ನು ದೇವುಳ ಸಪ್ತ ಮೂಡಿಸಿಕೊಂಡರು... ಮನೋ ಬಲದಿಂದ ಗರ ಗುಡಿ ಪ್ರವೇಸ ಮಾಡಿದರು.. ತುಪ್ಪದ ದೀವಿಗೆಗಳ ಬೆಳಕಲ್ಲಿ ಸ್ವಾಮಿ ಮಾನವದನರಾಗಿದ್ದಾರೆ.. ಅಲ್ಟಕರ ಅಗ್ಟನೆಯಿಂದ ಸ್ವಾಮಿಯ ಮುಖಾರವಿಂದ ಅರಳುತಾಯಿಲ್ಲ... ಯಿದಕ್ಕೆಲ್ಲ ಮೇಚ್ಚತನವೇ ಕಾರಣ.. ಅಗೋಚರ ಸೂತಕ ಮಯ್ಲಿಗೆ.. ಪ್ರಹ್ಲಾದ ಯಿರಚಿತ ನರಸಿಮ್ರಾಷ್ಟಕ, ವೇದೋಕ್ತ ಪುರುಷಸೂಕ್ತ, ಚಮಕ ನಮಕಗಳಿತ್ಯಾದಿಗಳನ್ನು ಪಟಪಟನೆ ಅಂದರು, ಕಣ್ಣುಬಿಟ್ಟರು. ಜಾಜ್ವಲ್ಯ ಮಾನತೆಯ ಜೀವಧರಿಸಿದ್ದ ಸ್ವಾಮಿಯು “ಯಿನ್ನೂ ಮೇಶ್ವರ ಯಂಜಲಿಗೆ ಜೋತು ಬಿದ್ದಿರುವಿರಲ್ಲವೇ... ಛೀ ಧ ದ್ರೋಹಿಗಳಿರಾ...” ಯಂದು ಗದರಿಸಿದಂತೆ ಭಾಸವಾಯಿತು. ತಾವ್ರತಮ್ಮ ತಮ್ಮ ಯತ್ನ ಪ್ರಯತ್ನಗಳನ್ನು ನಿವೇದಿಸಿಕೊಂಡಂತಾಯಿತು. ತಮ್ಮ ರುದಯದ ವಾಯು