ಪುಟ:ಅರಮನೆ.pdf/೬೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೫೩ ನಡೆಸಿತೆಂಬಲ್ಲಿಗೆ ಸಿವನೇ.. - ಅತ್ತ ತಿರುಪತಿಯೊಳಗೆ ತಿಲ್ಲಾನ ತಾಯಕ್ಕೆ ತನ್ನ ಮಗಳು ಬಸುರಾದಳೋ ಯಿಲ್ಲಮೋ, ಆಗಿದ್ದರೆ ಆಕೆ ಹಡೆದಿರುವಳೋ ಯಿಲ್ಲವೋ? ಹಡೆದಿದ್ದರೆ ಕೂಸು ಗಂಡೋ ಹೆಣ್ಣೂ ಯಂದು ಯಸನ ಮಾಡುತ್ತಲೇ ಸ್ತ್ರೀಯಂಟೇಶ್ವರ ಸ್ವಾಮಿಯ ಪಾದ ಸೇರಿಕೊಂಡು ಬಿಟ್ಟಿದ್ದಳಷ್ಟೆ.... ಅತ್ತ ಅದೇ ಡಣಾಪುರದೊಳಗ ಅದss ನಿರಾತಂಕವಾಗಿ ಜರುಗಿದ್ದಿತು. ವಂದು ರಾತ್ರಿರಸಬಾಳೆಹಣ್ಣು ಸುಲಿದು ಬಾಯೊಳಗಿಟ್ಟಂತೆ ಚಿನ್ನಾಸಾನಿ ತನ್ನ ಗಂಡನನ್ನು ಕೂಡಿದಳು.. ಪಾಡಾತು, ತಿಂಗಳೊಳಗೆ ಮುಟ್ಟು ನಿಂತಿತು ಪಾಡಾತು, ಆಕೆಯ ಕಿಬ್ಬೊಟ್ಟೆ ಬಿದಿಗೆ ಚಂದ್ರಾಮನಂಗ ಬೆಳಿತಾ ಬೆಳಿತಾ ದುಂಡಗಾಗಿ ಪಾಡಾತು. ಮುಂದೊಂದಿವಸ ಕೂಡ್ಲಿಗಿ ಪಟ್ಟಣದಿಂದ ಬುಗುಡಿ ನೀಲಕಂಠಪ್ಪ ಧರುಮಪತ್ನಿಯ ಸಂಗಡ ಕರಜಿಕಾಯಿ ಬುತ್ತಿ ಮಾಡಿಕೊಂಡು ಬಂದ, ಹುಟ್ಟು ಮುಡಿಸುವಾಗ ಕಣ್ಣೂಳಗೆ ನೀರು ತಂದುಕೊಂಡ ಚಿನ್ನಾಸಾನಿಗೆ ನೀಲಕಂಠಪ್ಪನ ಪತ್ನಿಯು ನಿನ್ನ ತಾಯಿನ ನೆಪ್ಪು ಮಾಡಿಕೊಂಡಿಯೇನು? ಹುಚ್ಚವ್ವಾ ನನ್ನೇ ನಿನ್ನವ್ವ ಅಂತ ತಿಳಕಾ ಯಂದು ಕಣ್ಮರೆಸಿದಳು.. ಸೀಮಂತಿನಿ ಕಾರ್ ಮುಗುದಾದ ಮ್ಯಾಲ ಮಗಳನ ಹಡುವಣಿಗೆಗೆ ಕೂಡ್ಲಿಗಿಗೆ ಕರಕೊಂಡೋತೀ ವಂದರು ಬುಗುಡಿ ದಂಪತಿಗಳು, ಅದಕಿದ್ದು ನಾಯಕನು ತಮಗೆ ಸೂಸಿ ಅಂದರು ಹೊಕೇನ, ಮಗಳಂದರ ಹೊಕೇನ.. ಅದಕ ಬಾಣಂತನನ ಯಿಲ್ಲೇ ಮಾಡುತೇವಿ ಅಂದರು... ಹಿಂಗಾಗಿ ಆಕೆ ಅಲ್ಲೇ ವುಳಕೊಂಡಿದ್ದಳು. ಕಲಿಯಿರ ನಾಯಕನ ಮಲತಾಯಿ ರಂಗಮ್ಮ ಅಂಬುವಾಕಿ ಯೇನಿದ್ದಳು ಆಕೆಯ ಹೊಟ್ಟೆಯಲ್ಲಿ ವಂದೂ ಹುಟ್ಟಿರಲಿಲ್ಲ, ಆಕೆ ತನ್ನ ಸೊಸೆ ಮುದ್ದೆಯನ್ನು ಕಣ್ಣೂಳಗಿನ ಗೊಂಬಿಯಂತೆ ನೋಡಿಕೋತಿದ್ದಳು. ಆಕೆ ಬಗಸಿದ್ದನ್ನೆಲ್ಲ ಮಾಡಿಕೊಡುತಲಿದ್ದಳು, ಚಂದ ಚಂದನೆಯ ಬಟ್ಟೆ ಬರೆ ನುಡಿಸಿ.. ವಡವೆ ವಸ್ತತೊಡಿಸಿ ಕಣ್‌ಪ್ರೀತಿಯನ್ನು ಮೆರೆಯುತಲಿದ್ದಳು. ಯೇನು ಸುಖ ಯಿದ್ದರೆ ತಗೊಂಡು ಯೇನು ಮಾಡುವುದು, ಹಡದ ತಾಯಿ ಯಿಲ್ಲದನ್ನಕ್ಕ.. ತಾಯಕ್ಕ ಹೋಗಿರುವುದು ಮಾಮೂಲು ಜಾಗಕ್ಕಲ್ಲ... ತಿಮ್ಮಪ್ಪ ನೆಲಸಿರುವ ತಿರುಪತಿಗೆ.. ಅಲ್ಲಿ ಬದುಕಿದರೊಂದು ಪುಣ್ಯ ಅಲ್ಲೇ ಸತ್ತರಂತೂ ದುಪ್ಪಟ್ಟು ಪುಣ್ಯ. ಆದ್ದರಿಂದ ಯಸನ ಮಾಡುವುದಾಗಲೀ, ಕಣ್ಣೂಳಗ ನೀರು ತಂದುಕೊಳ್ಳುವುದಾಗಲಿ ಥರವಲ್ಲ... ಹಿರೀಕರ ಯಿಂಥ ಬುದ್ದಿವಾದವನ್ನು ಕೇಳಿಸಿಕೊಳ್ಳುತ್ತಲೇ ಚಿನ್ನಾಸಾನಿಯು