ಪುಟ:ಅರಮನೆ.pdf/೭೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೯೩ ಕಟ್ಟಿಕೊಂಡು ಹತ್ತಿಕೊಂಡ ಪ್ರಾಂತವಿದ್ದ ಶಾನ್ಯ ದಿಕ್ಕಿನ ಹಾದಿ ತುಳಿದನು... ದಾರಿ ವುದಕ್ಕಿದ್ದ ಸಿಡಿಗಿನಮೊಳ, ಕಾರೆಕಲ್ಲು, ಚಿಂತಕುಂಟಿ, ಹಾಲಹರವಿ, ಆಲೂರು ಯಿವೇ ಮೊದಲಾದ ಗ್ರಾಮೋಪಾಮಗಳು ತಲೆಗೆ ಕಯ್ಯ ಹೊತ್ತು ಕೂಕಂಡಿದ್ದವು. ಮೂಲೆ ಮುರುಕಟ್ಟಿನಲ್ಲಿದ್ದ ಹೆಣ್ಣು ದೇವತೆಗಳನ್ನು ಹೊರ ತೆಗೆದು ತಿಕ್ಕಿ ತೀಡುತಲಿದ್ದವು.. ಮಾರೆಮ್ಮನನ್ನು ತಮಣಿ ಮಾಡುವ ಸಲುವಾಗಿ ಬೇಯಿನ ಮರಗಳಿಗೆ ಸುಣ್ಣ ಕೆಮ್ಮಣ್ಣು ಬಳಿದು ಸಿಂಗಾರ ಮಾಡುವ ರಣ ಸಡಗರದಲ್ಲಿದ್ದವು. ಅದನ್ನೆಲ್ಲ ನೋಡುತ್ತ ಅದನೆಲ್ಲ ಕೇಳುತ್ತ ಮುಂದ ಮುಂದಕ ಸಾಗಿದ ಸಾಹೇಬನು ಆಸ್ಪರಿ ದಾಟಿ ಪತ್ತಿಕೊಂಡ ತಲುಪಿದ್ದು ಫಲಾನ ದಿವಸದಂದು ವಂದೊಂದು ಮನೆ ಮುಂದ ವಂದೊಂದು ಹೆಣ ಯಿಟ್ಟುಕೊಂಡು ಕೂತಿದ್ದವರು.. ಹೆಣ ವುಗಿಯಲಕ ಸುಡುಗಾಡು ಸಾಲದು ಬಿದ್ದಯಲ್ಲ ಯಂದು ಅಳುತಲಿದ್ದೋರು, ರಣಮಾರಿ ಹೆಣಗಳನು ತಿಂದು ತೇಗುತವಳೆ.. ಮಾರಿಗೊಂದೊಂದು ಮಸಣ ಮಾಡವಳೆ.. ವಾಂತಮ್ಮ ಬೇದಮ್ಮ ತಾನೆ ಆಗವಳೆ, ಮೋಣಿ ಮೋಣಿಯೊಳಗೊಡಮೂಡಿ ಕುಂಪಣಿ ಸರಕಾರ ಬಂದಲಾಗಾಯ್ತು ದೇವರು ದಿಂಡಿರುಗಳಿಗೆ ದಮ್ಮಡಿ ಕಿಮ್ಮತ್ತು ಯಿಲ್ಲದಂಗಾಗೋಯ್ತಲ್ಲಾ.. ಎಂದು ಕುರಿ ಕಡೀಲಿಲ್ಲ... ಎಂದು ಕೋಳಿ ಸಿವುಟಲಿಲ್ಲ.. ವಂದಾರ ಕೋಣ ಬಲಿಕೊಡಲಿಲ್ಲ. ಯಿಂಥ ಸರಕಾರ ಯಿದ್ದರೆಷ್ಟು? ಹೋದರೆಷ್ಟು? ಅಂಥ ಕಿಲುಬು ಸರಕಾರಕ್ಕೆ ಡೊಗ್ಗು ಸಲಾಮು ಹಾಕುವ ಮಂದಿ ಯಿದ್ದರೆಷ್ಟು? ಹೋದರೆಷ್ಟು? ಯಂದನಕಂತ ಯಿದ್ದೋರು ಮನೋನು ಕಣ್ಣಿಗೆ ಬೀಳುತ್ತಲೇ ಕಾಲುಕಾಲಿಗೆ ತೊಡರಿಕೊಳ್ಳಲಕ ಹತ್ತಿದರು.. ದೊರೆಯೇ ನೀನು ನಮೂರೊಳೀಕ್ಕೆ ಕಾಲಿಟ್ಟೆ ಅಂದರ ತಾಯಿ ಮುನುಸ್ಕೋತಾಳಯ್ಯಾ. ಹೆಂಗ ಬಂದ್ಯೋ ಹಂಗs ಹೊಳ್ಳಿ ಹೋಗಿ ಬಿಡಯ್ಯಾ.. ನಿನಗೆ ಪುಣ್ಯ ಬರತಮ್ಮೆ ಯಂದು ಗದುಮಲಕ ಪ್ರಯತ್ನ ನಡೆಸಿದವರೆಷ್ಟೋ, ಬಾರಪ್ಪಾ.. ಬಾರಯ್ಯಾ... ನಮ್ಮ ಕಣ್ಣೀರೊಳಗ, ನಮ್ಮ ಸಾವಿನೊಳಗ, ನಮ್ಮ ದುಕ್ಕದುಮ್ಮಾನದೊಳಗ ನೀನೂ ಪಾಲುಗಾರನಾಗಯ್ಯಾ.. ಯಂದು ಸ್ವಾಗತ ಕೋರುತ್ತಿದ್ದವ ರೆಷ್ಟೋ? ಅದನ್ನೆಲ್ಲ ನೋಡಿ ಮನೋಗೆ ತಲೆ ಗಿರದಂಗಾತು.. ಕಣ್ಣುಗಳು ನೀರಿನ ತತ್ರಾಣಿ ಆದುವು. ಹಿಂದಕ ನಡೆಂರುಲಕಂದರ ಹಿಂಗಾಲೊಳಗ