ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೨೦೩ ಕನು. ಆತನು ವ್ಯಾಪಾರದಲ್ಲಿ ತುಂಬ ಚತುರನಾದುದರಿಂದ ಅತ್ಯಂತನಾ ದ ಐಕರ್ಯವನ್ನು ಸಂಪಾದಿಸಿ, ಕೂಲಿಕಾರರನ್ನು ಗುಮಾನ್ಯರನ್ನು, ಇಟ್ಟುಕೊಂಡು, ಅವರನ್ನು ಇತರದೃವಗಳಿಂದ ಸಾಮಾನುಗಳನ್ನು, ತರುವುದಕ್ಕೂ, ತನ್ನ ಲೇವಾದೇವಿಯರನ್ನು ಸಮಾಧಾನ ಗೊಳಿಸುವುದ ಕೂ, ಸಹ ಅವರನ್ನು ಹಡಗುಗಳಮೇಲೆ ಅನ್ಯದೇಶಗಳಿಗೆ ಕಳುಹುತ್ತಾ ಇದ್ದನು. ಆತನು ಮದುವೆ ಮಾಡಿಕೊಂಡು, ಬಹುದಿನಗಳವರೆಗೂ, ಮುಕ್ಕ ಇಲ್ಲದಿರಲು, ಒಂದಾನೊಂದುದಿನ ಮಲಗಿ ನಿದ್ರೆ ಮಾಡುತ್ತಿರುವಾಗ ತನಗೆ ಬೃ ಮಗನಾಗುವನೆಂದೂ, ಆದರೆ ಆತನು ಅಲ್ಪಾಯುವಾಗುವನೆಂದೂ, ಸಪ್ರವನ್ನು ಕಂಡು, ಮಹಾ ವ್ಯಸನವನ್ನು ಹೊಂದುತ್ತಿದ್ದನು. ಆದ ರೆ ಕೂಡಲೆ ನನ್ನ ತಾಯಿಯು, ಆತನಬಳಿಗೆಬಂದು, ನಾನು ಗರ್ಭಿಣಿಯಾ ಗಿರುವೆನೆಂದು ಹೇಳಿದಳು. ಆತನು ಕನಸುಕಂಡಕಾಲವೂ, ನನ್ನ ತಾಯಿ ಯು, ಗರ್ಭಿಣಿಯಾದ ಕಾಲವೂ ಒಂದೇ ಆಗಿತ್ತು. ಬಳಿಕ ನವಮಾಸ ತುಂಬಿದಮೇಲೆ ನನ್ನನ್ನು ಹೆತ್ತಕೂಡಲೇ ಸರ್ವರೂ ಆನಂದವನ್ನು ಹೊಂ ದಿದರು, ನಾನು ಹುಟ್ಟಿದಮೇಲೆ ನನ್ನ ತಂದೆಯ ಜೊತೆಸರನ್ನು ಬರಮೂಡಿ, ನನ್ನ ಜೆತಕ ವಿಚಾರವನ್ನು ಕೇಳಲು, ಅವರು ನಿನ್ನ ಮಗ ನು ಹದಿನೇಳು ಸಂವತ್ಸರಗಳವರೆಗೂ, ಸುಖನಾಗಿರುವನೆಂದೂ, ನಂತರ ತಪ್ಪಿಸಿಕೊಳ್ಳುವುದಕ್ಕಾಗದ ಅಸಾಧ್ಯವಾದ ಒಂದು ಗಂಡ ಕಾಲವು ಬರು ವುದೆಂದು, ಆ ಗಂಡಕಾಲದಲ್ಲಿ ದೈವಯಾಗದಿಂದುಳಿದುಕೊಂಡುದೇ ಆದರೆ, ಆತನು ವೃದನಾಗುವವರೆಗೂ ಜೀವಿಸುವನೆಂದು ಹೇಳಲು, ಅಯಾ ! ಆ ಗಂಡಕಾಲವು ಆತನಿಗೆ ಯಾವಾಗಬರುವುದನ್ನು ವಿಯೇ ? ಅಯಃಕಾಂ ತ ಪರ್ವತದಮೇಲಿರುವ ಹಿತ್ತಾಳೆಯ ವಿಗ ಹನನ್ನು, ಕಾಸೀಬನಮಗನಾ ದ ವಿಜೇಬನೆಂಬ ರಾಜಪುತ ನು, ಯಾವ ಕಾಲದಲ್ಲಿ ಸಮುದ ದಲ್ಲಿ ನೂಕಿ ಬಿಡುವನೋ ಆಗ ಉಂಟಾಗುವುದು. ಬಳಿಕ ಎಂಟುದಿನಗಳ ತರುವಾಯ ಆ ರಾಜಪುತ ತಿಂದ ನಿನ್ನ ಮಗನು ಕೊಲ್ಲಲ್ಪಡುವನೆಂದು, ಶಾಸ್ತ್ರೀತಾ ಹೇಳಿದರು. ಆ ವಿಗ್ರಹವನ್ನು ಕುರಿತು, ಜ್ಯೋತಿಷ್ಯರು ಹೇಳಿದ ನಾ ಕನೂ ಆತನು ಕಂಡ ಕನಸೂ, ಸಮನಾಗಿದುದರಿಂದ ನನ್ನ ತಂದೆಯು ವ್ಯಸನಾಕಾಂತನಾಗಿ ನಾನಾತೊಂದರೆಯನ್ನನುಭವಿಸುತ್ತಿದ್ದನು.