ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯು ಶಟ್ಸ್ ಕಥೆಗಳು, ಯೋಚಿಸಿ ತಿಳಿದುಕೊಳ್ಳಬಹುದಾದುದರಿಂದ ನಾನು ವಿವರಿಸಿ ಹೇಳಬೇಕಾ ದುದೇನೂ ಇಲ್ಲ, ಒಂದಾನೊಂದು ದಿನ ನಾನು ಸಂಚಾರಮಾಡುತ್ತಿರು ವಾಗ, ಕಲಭಾಷೆಂಬ ಗಿಡದ, ಒಣಗಿದ ಕಾಯಿಗಳು (ಬುರುಡೆಯಂತಿರು ವುವು) ಬಿದ್ದು ಇದ್ದವು. ಅದರಲ್ಲೊಂದು ದೊಡ್ಡ ಕಾಯನ್ನು ತೆಗೆದು ಕೊಂಡು, ರಂಧವಂ ಮಾಡಿ, ನಾನು ಆ ದ್ವೀಪದಲ್ಲಿರುವ ದ್ರಾಕ್ಷೆಗಳ ರಸ ವನ್ನು ಆ ಬುರುಡೆಗೆ ತುಂಬಿ ಅನುಕೂಲವಾದ ಒಂದು ಸ್ಥಳದಲ್ಲಿ ಬಚ್ಚಿ, ಟೈನು, ಕೆಲವು ದಿನಗಳು ಕಳೆದಿವೆ. ನಾನು ಆ ಸ್ಥಳಕ್ಕೆ ಆ ಬುರುಡ ಯನ್ನು ತೆಗೆದುಕೊಂಡು ಹೋಗಿ ರುಚಿನೋಡಿದೆನು. ಆದರೆ ದ್ರಾಕ್ಷಾರ ಸವು ಮಾಗಿದ್ದುದರಿಂದ, ಬಹು ಸಂತೋಷವಾಗಿ, ನಾನು ಅದನ್ನು ಕುಡಿ ಯಲಾರ:ಭಿಸಿದನು. ಇದರಿಂದುಂಟಾದ ಗುಣವನ್ನು ಇಂದು ಹೇಳ ಲಾರೆನು, ಈ ದಾನದಿಂದುಂಟಾದ ಆನಂದವನ್ನು ಅಂದು ಹೇಳು ವುದಕ್ಕೆ ತೀರದು, ಆ ಮುದುಕನು ಆ ದಾಕ್ಷಾರಸವನ್ನು ತನಗೆ ಕೋ ಡುವಂತ ಸನ್ನೆ ಮಾಡಿದನು. ನಾನು ಅದನ್ನು ಅವನ ಕೈಗೆ ಕೊಟ್ಟ ಡಲೆ, ಅದನ್ನು ಬಾಯಿಯಲ್ಲಿಟ್ಟುಕೊಂಡು ಚೀಪುತ್ತಾ ರಸವನ್ನು ಕುಡಿ ದುಕೊಂಡನು. ಅದರಲ್ಲಿದ್ದ ರಸವು ಅವನಿಗೆ ಮೈಕ (ಮುನ್ನು) ನ ನ್ನುಂಟುಮಾಡುವುದಕ್ಕೆ ಸಾಕಾದಷ್ಟು ಇದ್ದುದರಿಂದ, ಅದನ್ನು ಕುಡಿದ ಸ್ವಲ್ಪ ಹೊತ್ತಿಗೆ ಮದವೇರಿ, ಮನಸ್ಸು ಬಂದಂತೆ ನನ್ನ ಬೆನ್ನಿನಮೇಲೆ ಓಡಾಡಲಾರಂಭಿಸಿದನು. ಇನ್ನೂ ಸ್ವಲ್ಪ ಹೊತ್ತು ತಲೆಗೇರಿದ ಪಿತ್ತದಿಂದ ಕೈಕಾಲುಗಳಲ್ಲಿ ನಡುಕಹುಟ್ಟಿ, ಆತನು ಕೊನೆಗೆ ಪ್ರಜ್ಞೆ ತಪ್ಪಿ ಕಳಗೆ ಬಿದ್ದನು. ಅದೇ ಸಮಯವನ್ನು ನೋಡಿಕೊಂಡಿದ್ದು, ನಾನು ದೊಡ್ಡ ದಾದ ಹಿಂದು ಇಲ್ಲನ್ನು ತೆಗೆದುಕೊಂಡು, ಅವನ ತಲೆಯಮೇಲೆ ಹಾಕಿ ಕೊಂದುಹಾಕಿದೆನು. ಈ ದುರಾತನಾದ ಮುದುಕನ ಕಾಟ ತಪ್ಪಿಸಿ ಕಂಡು, ಸಂತೋಷದಿಂದ ಸಮುದ್ರತೀರವನ್ನು ಸೇರಿ, ಸೌದೆಯನ್ನು ಒಡವುದು, ಮೊದಲಾದ ಕೆಲಸಗಳನ್ನು ಮಾಡಿಕೊಂಡು ಇರುತ, ನನ್ನ ಸ್ನೇಹಿತರಾದ ಜನಗಳಿಗೆಲ್ಲರಿಗೂ, ನನ್ನ ದುಸ್ಥಿತಿಯನ್ನು ಕುರಿತು ಈ ಳಲು, ಅವರುಗಳು ಆಯಾ ! ನೀನೆ ಪುಣ್ಯಶಾಲಿ ! ಇದುವರಿಗೆ ಆ ಮು ದುಕನು ನಾನಾ ಜನರನ್ನು ಹಿಡಿದುಕೊಂಡು ಕೊಂದುಹಾಕಿರುವನು,