ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, 48 ಈತನತಂದೆಯು, ನನ್ನಂತೆ ಕೈರೋರಾದಲ್ಲಿ ಮಂತ್ರಿ ಪದವಿ ಯಲ್ಲಿರುವನು. ಆತನಿಗೆ ಇವನೇ ಪ್ರೀತಿಪಾತ್ರನಾದ ಮಗನು. ನನ್ನ ಅಣ್ಯನಿಗೂ, ನನಗೂ, ಉಂಟಾಗಿರುವ ಬಂಧುತ್ವವಿಶೇಷವು ನಮ್ಮಗಳ ತಲೆಗೆ ಮುಗಿದುಹೋಗದಂತೆ, ಅದನ್ನು ಅಲ್ಲಿಂದಮುಂದೆ ಅಭಿವೃದ್ಧಿಪಡಿಸು ವುದಕ್ಕಾಗಿ, ನನ್ನ ಮಗಳನ್ನು ಮದುವಮೂಡಿಕೊಳ್ಳುವಂತೆ, ಒಪ್ಪಿ ನನ್ನಬ ೪ಗ ಕಳುಹಿಸಿರುವನು. ನಾನಾದರೂ, ನನ್ನ ಮಗಳನ್ನು ಈತನಿಗಳೂ ಟ್ಟು, ಮದುವೆಗೂಡಬೇಕೆಂಬ ಉದ್ದೇಶದಲ್ಲಿರುವ ವಾದುದರಿಂದ, ಘನವಂ ತರಾದ ನಿಮ್ಮಗಳ ಇಷ್ಟಾನುಸಾರವಾಗಿ, ಮುಂದೆ ನಡೆಸಬೇಕೆಂದು, ಮೊ ದಲು ಅಂತಸ್ಥವಾಗಿ ನೆನೆದುಕೊಂಡಿದ್ದ ನನ್ನ ಸಂಕಲ್ಪವನ್ನು ಈಗ ನಿಮ್ಮ ಗಳದುರಿಗೆ ವಿಶದಪಡಿಸಿರುವೆನೆಂದು ಹೇಳಿದನು. ಅದನ್ನು ಕೇಳಿ ಅಲ್ಲಿ ನೆರೆದಿ ದ ಜನರೂ, ಮಾದಲು ಆ ಹುಡುಗಿಯನ್ನು ಕೇಳಿದ ಇತರ ಘನವಂತರೂ ಸಹ, ಆಯಾ ! ನೀವು ಈಗ ಮೂಡಿರುವ ಯಾಚನೆಯು, ಅತ್ಯುತ ಮವಾಗಿರುವುದರಿಂದ ಅಗತ್ಯವಾಗಿ ನಿಮ್ಮಿಷ್ಟಾನುಸಾರವಾಗಿ ನೆರವೇರಿಸಬ ಹುದು. ಇದರಿಂದ ದಂಪತಿಗಳು, ಬಹುಕಾಲ ಭಗವಂತನದಯದಿಂದ ದಾಂ ಪತ್ಯಸುಖವನ್ನನುಭವಿಸುತ್ತಿದ್ದು, ದೀರ್ಘಾಯುರಾರೋಗ್ಯಯುಕ್ತರಾ ಗಿ ಬಾಳಲೆಂದು ನೀವು ಹರಸುವೆವೆಂದು ನುಡಿದರು. ಎಂದುಹೇಳಿ ಸಹ ರಜಾದಿ, ಕಥೆಯನ್ನು ನಿಲ್ಲಿಸಿ, ಬೆಳಗಾದಕೂಡಲೇ ಮತ್ತೆ ಹೇಳಲಾರಂಭಿ ಸಿದಳು, ೯೪ ನೆಯ ರಾತ್ರಿ ಕಥೆ. - ಸಹರಜಾದಿ, ಸುಲ್ತಾನರನ್ನು ನೋಡಿ, ಸವಿತಾ ! ಪ್ರಧಾನ ಮಂತಿ ಯಾದ ಗಯವರನ್ನು, ಕಲೀಫರನ್ನು ಕುರಿತು, ಮುಂದೆ ಹೇಳಕಾಗಿ ದನು. ಬಾಲಸೂರಿನ ಮಂತ್ರಿಯಮನೆಯಲ್ಲಿ ನೆರೆದಿದ್ದ ದೊಡ್ಡ ಮನುಷ್ಯ ರೆಲ್ಲರೂ, ನೌರದೀನಸ್ಲಿಗೂ, ಮಂತ್ರಿ ಫುತಿಗೂ, ವಿವಾಹವನ್ನು ಬೆಳೆ ಸಲನುಮೋದಿಸಿ, ಅದರಂತ ವಿವಾಹವನ್ನು ನೆರವೇರಿಸಿದನಂತರ, ಸರ್ವರೂ ಭೋಜನಕ್ಕೆ ಕುಳಿತು, ವಿನೋದವಾಗಿ ಊಟಮೂಡುತ್ತಿರುವಾಗ, ರುಚಿಕರ ವಾದ ಉತ್ತಮ ಭಕ್ಷಗಳನ್ನು ತಂದೊಪ್ಪಿಸುತ್ತಿರಲು, ಕುಲಾಚಾರದಪದ್ದ ತಿಯಂತೆ ಅವರವರಿಗಿಷ್ಯನಾದ ಪದಾರ್ಥಗಳನ್ನು ಅವರವರೇತೆಗೆದುಕೊ೦