ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಅರೇಬಿರ್ಯ ನೈಟ್ಸ್ ಕಥೆಗಳು, ೧ನೇ ರಾತ್ರಿ ಕಥೆ. ವ ರ ಕ ನೂ ಭೂ ವು , ಒಡೆಯ ! ಪೂರ್ವ ಕಾಲದಲ್ಲಿ ಒಬ್ಬ ವರ್ತಕಸಿದನು ; ಆತ ನಿಗೆ ಸಮಸ್ತನಾದ ಆಸ್ತಿಪಾಸ್ತಿಗಳೂ, ಭೂಮಿ ಕೌಣಿಗಳ, ಉಂಟು. ಅಲ್ಲದೆ ಆತನ ಬಳಿಯಲ್ಲಿ ಕೆಲಸ ಮಾಡುವ ಚಾಕರ, ಗುಮಾಸ್ತರು ಗಳೂ, ಇನ್ನು ಇತರ ವಿಧವಾದ ವರಿವಾರ ಜನರೂ ಇದ್ದರು. ಆತನು ತನ್ನ ಲೇವಾದೇವಿಯ ನಿಮಿ_ನಾಗಿ ಆಗಾಗ್ಗೆ ಪ್ರಯಾಣ ಮಾಡುತ್ತಾ ಇದ್ದನು, ಒಂದಾನೊಂದು ಕಾಲದಲ್ಲಿ ಮಹತ್ತಾದ ಒಂದು ಕಾರಣದಿಂದ ಬಹಳ ದೂರ ಪ ]ಯಾಣ ಮಾಡ ಬೇಕಾಗಿ ಬಂದುದರಿಂದ, ಆತನು ತನ್ನ ಕುದುರೆಯನ್ನು ಹತ್ತಿ ಕೆಲವು ರೋಗಳನ್ನು ಖರ್ಜಾರವನ್ನು ಆಹಾ ರನಿಮಿತ್ತವಾಗಿ ತೆಗೆದುಕೊಂಡು, ಗಹನವಾದ ಕಾಡಿನಲ್ಲಿ ಹೊರಟು ಪ್ರಯಾ ಣಮಾಡಿ, ತನ್ನ ಸಂಕೇತ ಸ್ಥಾನವನ್ನು ಸೇರಿ, ಕೆಲಸ ಕಾರಗಳನ್ನು ಆಗ ಮಾಡಿ ಕೊಂಡು, ಹಿಂದಿರುಗಿ ಊರಿಗೆ ಬರುವುದಕ್ಕಾಗಿ, ತನ್ನ ಕುದು ರೆಯನ್ನೇರಿ ಹೊರ ಹೊರಟನು. ತೊಗಟ ನಾಲ್ಕನೆಯದಿನ ಬಹಳ ವಾದ ಬಿಸಿಲು ಕಾಯುತ್ತಿದ್ದುದರಿಂದ, ಆ ಸೆಕೆಯನ್ನು ತಾಳ ಲಾರದ ಮಾರ್ಗವನ್ನು ಬಿಟ್ಟು, ಜೈಲಿ ದೂರದಲ್ಲಿ ಕಾಣುವ ಮರಗಳ ಬಳಿಗೆ ಹೋಗಿ, ತನ್ನ ಬಳಲಿಕೆಯನ್ನು ಹೋಗಲಾಡಿಸಿ ಕೊಳ್ಳ ಬೇಕೆಂದು, ಆ ಬಳಿಯಲ್ಲಿ ದೊಡ್ಡ ದಾದ ಒಂದು ತಾಳೆಯಗಿಡದ ಬಂಡದಲ್ಲಿ ಹರಿಯುತ್ತಿ ರುವ ತಿಳಿನೀರನ್ನು ನೋಡಿ, ತನ್ನ ಕುದುರೆಯನ್ನು ಒಂದು ಮರಕ್ಕೆ ಕಟ್ಟಿಹಾಕಿ, ತನ್ನ ಬಳಿಯಲ್ಲಿದ್ದ ಖರ್ಜೂರವನ್ನು ಕೆಲವುರೊಟ್ಟಿಯನ್ನು ತಗೆದು ಕೊಂಡು ಹೋಗಿ ಕಾಲುವೆಯ ದಡದಲ್ಲಿ ಕುಳಿತು ಕೊಂಡನು. ಆತನು ಒಳ್ಳೆ ಮುಸಲ್ಮಾನನಾದುದರಿಂದ ಕಾಲು ಕೈಗಳನ್ನು ಚೆನ್ನಾಗಿ ತೊಳೆದು ಕೊಂಡು, ಖರ್ಜೂರವನ್ನು ತಿಂದು ಭಕಿತನಾಗಿ ಕಾಲು ಮಡಿಸಿ ಕುಳಿತು ಕೊಂಡು ದೇವರನ್ನು ಧ್ಯಾನ ಮಾಡುತ್ತಾ ಸಂತೋಷ ದಿಂದ ಕಣ್ಮನ್ನು ಮುಚ್ಚಿ ಕೊಂಡು ಕುಳಿತಿದ್ದನು. ಆಗ ಮೈಯೆಲ್ಲಾ ಕೂದಲುಳ್ಳ ಮಹದಾಕಾರವನ್ನು ಹೊಂದಿದ ಒಂದಾನೊಂದು, ಭೂತವು