ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬) ಅರೇಬಿರ್ಯ ನೈಟ್ಸ್ ಕಥೆಗಳು, 98೧ ಉಂಟಾಗಿರುವ ಮೋಹನನ್ನು ಆಕಗೆ ತಿಳಿಯಪಡಿಸಿ, ಮದುವೆಮಾಡಿಕೊ ಳ್ಳುವುದಕ್ಕೆ ಅಪ್ಪಣೆಯನ್ನು ಬೇಡಲು, ಆಗಬಹುದೆಂದು ಒಪ್ಪಿ, ಮೊದಲು ನಿನ್ನನ್ನು ನೋಡಬೇಕೆಂದು ಹೇಳಿರುವಳು. ನೀನು ಅವಳಿಗೆತಕ್ಕ ವರನಾಗಿ ಜೋಬದಿಗೆ ಕಾಣಬಂದರೆ, ಮದುವೆಯ ಖರ್ಚನ್ನು ಸಹ, ಕೊಡುವೆನೆಂದು ಹೇಳಿರುವುದರಿಂದ, ನಿನ್ನ ಅಭ್ಯುದಯಕ್ಕೆ ಮುಖ್ಯವಾಗಿ ಜೋಬದಿಯನ್ನು ಒಪ್ಪಿಸಬೇಕಾಗಿರುವುದು. ಜಿಬದಿಯು ಒಪ್ಪುವದಾದರೆ, ನಿನಗೆ ಮದುವೆ ಯಾದಂತೆಯೆ ಭಾವಿಸು. ಹಾಗಿಲ್ಲದಿದ್ದರೆ ಅನುಮಾನ ? ನೀನು ನಗರಕ್ಕೆ ಬರುವುದೊಂದೆ ಬಾಕಿ, ಯಾವಾಗ ಬರುವೆಯೋ, ಆಗಲೆ ನಿನ್ನನ್ನು ಕರೆದು ಕಂಡುಬರುವುದಕ್ಕಾಗಿ, ನನ್ನನ್ನು ಇಲ್ಲಿಗೆ ಕಳುಹಿಸಿರುವುದು ಎನಲು, ನಾನು ಅಯಾ ! ನೀನು ಕರೆದುಕೊಂಡುಹೋಗುವ ಸ್ಥಳಕ್ಕೆ ನಾನು ಬರಲು ಸಿದ್ಧವಾಗಿರುವೆನೆಂದು ಹೇಳಲು, ಆತನು ಒಳ್ಳೇದು ಅರಮನೆಯಲ್ಲಿ ಇರುವ ರಾಜಸ್ತ್ರೀಯರ ಅಂತಃಪುರಕ್ಕೆ ಹೋಗುವುದು ತುಂಬ ಅವಾಯಕರ ವಾಗಿಯೂ, ಅಗಾಧವಾಗಿಯೂ ಇರುವುದೆಂಬುದು, ನಿನಗೆ ತಿಳಿದೇ ಇರುವುದರಿಂದ, ಆ ಸುಂದರೀಮಣಿಯು ಮಾಡಿದ ಉಪಾಯದಂತೆ, ನೀನು ಎಚ್ಚರಿಕೆಯಾಗಿರಬೇಕು. ಇಲ್ಲವಾದರೆ ನಿನಗೆ ನಾ ಣಹಾನಿ ಸಂಭವಿಸು ವುದು ಎನಲು, ನಾನು ಅಯಾ! ನೀನುಹೇಳಿದಂತೆ ನಡೆದುಕೊಳ್ಳುವುದಕ್ಕೆ ಸಿದನಾಗಿರುವೆನೆಂದು ಹೇಳಿದನು. ಬಳಿಕ ಆತನು ಅಯಾ ! ನೀನು ಈದಿನ ಸಾಯಂಕಾಲ ಟೈಗಿ ಸ್ ನದಿಯಬಳ ರಾಣಿಯು ಕಟ್ಟಿಸಿರುವ, ಮಸೀದಿಯರಿದು ಕೊಂಡು ಯಾರಾದರೂ ಬಂದು ಕೂಗಿದರೆ, ಹೊರಗಬಯೆಂದು ಹೇಳಲು, ನಾನು ಅದಕ್ಕೆ ಸಮ್ಮತಿಸಿ, ಹಗಲನ್ನು ಬಹುಪ್ರಯಾಸದಿಂದ ಕಳೆದು, ಸಾಯಂಕಾಲಕ್ಕೆ ಸರಿಯಾಗಿ ಆ ಮನೀತಿಗೆ ಹೋಗಿ, ಬಾ ರ್ಥನೆಯನ್ನು ಮಾಡುತ್ತಿದ್ದನು. ಧ್ಯಾನವನ್ನು ತೀರಿಸಿಕೊಂಡು ಎಲ್ಲರೂ ಹೊರಟು ಹೋದರು. ನಾನಾದರೋ ಅಲ್ಲಿಯೇ ಇದ್ದನು. ಸ್ವಲ್ಪ ಹೊತ್ತಿಗೆ ಕೆಲವುಜನ ಖಜಾಸವಾರರು, ವಿಹರೆಯನ್ನು ಕೊಡುತ್ತಿರುವ ಒಂದು ಗಾಡಿಯು ಬಂದಿತು. ಆಗ ಅವರೆಲ್ಲರೂ, ಮಸೀದಿಗೆಬಂದು ತನ್ನ ಸಾಮಾನುಗಳನ್ನು ಇಳಿಸಿದಬಳಕ, ಎಲ್ಲರೂ ಹೊರಟುಹೋಗಿ, ನನ್ನ ಸಂಗಡ ಬೆಳಿಗ್ಗೆ ಬಂದು