ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ಕರೀಫರಿಂದ ಆಯ್ಕೆಯನ್ನು ಪಡೆದು, ಸಹಾಯ ಮಾಡುವೆನು. ನೀನು ಅದುವರಿಗೂ ಇಲೆ ಇರು, ನಿನ್ನನ್ನು ಚೆನ್ನಾಗಿ ಆದರಿಸುವರೆಂದು, ನುಡಿ ದಳು, ಆಸ್ಟ್ರಿ ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೪೭ ನೆಯ ರತ್ರಿ ಕಥೆ. ಸಹರಜೆದಿಬು ಸುಲ್ತಾನರನ್ನು ಕುರಿತು, ಇಂತಂದಳು :ನಾನು ಅವಳ ಆಜ್ಞಾನುಸಾರವಾಗಿ ಅಂತಃಪುರದಲ್ಲಿ ಇದ್ದರೂ, ಬಾಲಿಕಾ ಮಣಿಯನ್ನು ಮಾತ್ರ ) ನೋಡಲೇ ಇಲ್ಲ. ಆದರೂ ನನಗೆ ನಡೆಯತಕ ಉವಚಾರಗಳೆಲ್ಲವೂ ಚೆನ್ನಾಗಿಯೇ ನಡೆದವು. ಬಳಿಕ ಕಲೀಫರನ್ನು ಕುರಿತು ಜೋಬದಿಯು ನನ್ನ ತಂಗಿಯಾದ ನಾಯಿಕಾಮಣಿಗೆ ವಿವಾಹ ಮಾಡಬೇ ಕಂದು, ಪ್ರಯತ್ನ ಪಟ್ಟರುವೆನೆಂದು ಹೇಳಿದಳು. ಸುಲ್ತಾನರು ನಿನ್ನ ಇಷ್ಟಾನುಸಾರವಾಗಿ ನಡೆಸಬಹುದೆಂದುಹೇಳಿದರು. ನಂತರ ಜೋಬದಿಯು, ವಿವಾಹ ನಿಬಂಧನೆಯನ್ನು ಬರೆಸಿ, ತೆರುವಂತ ಹೇಳಿದಳು. ಅದೂ ಆದಬಳಿಕ ಪಟ್ಟಣದಲ್ಲ, ಅರಮನೆಯಲ್ಲಿಯೂ, ಒಂಭತ್ತು ದಿನಗಳವರಿಗೆ ಔತನಗಳು ನಡೆದವು. ಹತ್ತನೆದಿನ ಶುಭಮುಹೂರ್ತದಲಿ, ವಧುವರರಿಬ್ಬರಿಗೂ ಮಂಗಳಸ್ನಾನವನ್ನು ಮಾಡಿಸಿ, ಸಾಯಂಕಾಲವಾಗುತ್ತಲೆ, ಪಿನಾಕಾರ ವನ್ನು ನೆರವೇರಿಸುವುದಕ್ಕಾಗಿ, ಭೋಜನಕ್ಕಾಗಿ ನನ್ನನ್ನು ಒಂದು, ಮೇಜಾದಮುಂದೆ ಊಟಕ್ಕೆ ಕೂಡಿಸಿದರು. ಆಗ ಇಗೋ ಈ ಬೆಳ್ಳುಳ್ಳಿಯ ವಚ್ಡಿಯು, ತಟ್ಟೆಯಲ್ಲಿದ್ದುದ ರಿಂದ, ರುಚಿಕರವಾದ ಅದನ್ನು ನಾನು ಬಹು ಆತುರದಿಂದ ಹೆಚ್ಚಾಗಿಯೇ ತಿಂದನು. ಊಟವಾದಬಳಿಕ, ಕೈಯನ್ನು ಚೆನ್ನಾಗಿ ತೊಳೆದುಕೊಳ್ಳು ವುದನ್ನು ಮರೆತು, ಸುಮ್ಮನೆ ಒರಸಿಕೊಂಡೆನು. ನನ್ನ ಪುರುಷಾಯುಸ್ಸಿ ನಲ್ಲಿ ನಾನು ಅಜಾಗರೂಕನಾಗಿದ್ದುದು, ಅಕಾಲದಲ್ಲಿಯೆಕೊರತು ಮತ್ತಾವ ಕಾಲದಲ್ಲಿಯೂ ಇಲ್ಲ. ಆ ರಾತ್ರಿಯಲ್ಲಿ ನಾನಾವಿಧವಾದ, ದೀಪಗಳು ಹೊಳೆ ಯುತ್ತಿದ್ದುದರಿಂದ, ಹಗಲಿನಂತೆಯೇ ಇದ್ದಿತು. ಆಗವನೆಯಲ್ಪವೂ, ವಾದ್ಯಘೋಷದಿಂದ ತುಂಬಿಹೋಯಿತು. ನಂತರ ವಧೂವರರನ್ನು ಶಾಸ್ಮಿ ವಿಧಿಯಂತ ಏಳುಸಾರಿ ವಿಚಿತ್ರತರವಾಗಿ ಅಲಂಕರಿಸಿ, ದಾದಿಯರು ಪ್ರತ್ಯೇಕ