ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೫) ಅರೇಬಿರ್ಯ ನೈಟ್ಸ್ ಕಥೆಗಳು, 8೬K ಈತನಿಗುಂಟಾಗಿರುವ ದುರವಸ್ಥೆಗಾಗಿ, ನಾನು ತುಂಬ ವ್ಯಸನಪಡುತ್ತಿರುವೆ ನೆಂದು ಹೇಳಲು, ನಾನು ರಾಜನನ್ನು ಕುರಿತು ಆಯಾ ! ನಾನು ನಿರವ ರಾಧಿಯಾದವನು ಈ ದುಮ್ಮಾರ್ಗಿಗಳು ಆ ಕಾಲದಲ್ಲಿ ನನಗೆಮಾಡಿದ ಕಂದರೆ ಯನ್ನು ಸಹಿಸಲಾರದೆ, ನ್ಯಾಯಾಧಿಪತಿಯ ಬಳಿಯರಿ ನಾನು ಕಳ್ಳನೆ ಹೌದೆಂದು ಒಪ್ಪಿಕೊಂಡೆನು, ಆದರೆ ಈ ಆಪರಾಧವು ನನ್ನ ಮೇಲೆ ಹೊರು ವುದಕ್ಕೆ ಮತ್ತೊಂದು ಕಾರಣವಿರುವುದು. ತಾವು ದಯಮಾಡಿ ಕೇಳುವು ದಾದರೆ, ಬಿಸ್ಮಿಸುವೆನೆನಲು, ಆತನು ತನಗಿಂತಲೂ ಮೊದಲು ನಾನು ಹೇಳತಕ್ಕೆ ಕಾರಣವನ್ನು ಚೆನ್ನಾಗಿ ತಿಳಿದುಕೊಂಡಿರುವುದರಿಂದ, ಆ ಜನ ರನ್ನು ಕುರಿತು, ಅಯಾ ! ನಿಷಾರಣವಾಗಿ ಈತನಮೇಲೆ ದೋಷವನ್ನು ನೀವುಗಳು ಆಪಾದಿಸಿರುವಿರೆಂಬುದು ನನಗೆ ಚೆನ್ನಾಗಿ ತಿಳಿದಿರುವುದರಿಂದ ನಿರಪರಾಧಿಯಾದ ಈ ಬಾಲಕನಿಗೆ, ನಡೆಸಿದ ದಂಡನೆಯನ್ನು ಇವರುಗಳಿಗೆ ಶೀಘ್ರದಲ್ಲಿ ನಡೆಸಬೇಕಾಗಿರುವುದೆಂದು, ತನ್ನ ಮಂತ್ರಿ ಗೆ ಆಜ್ಞಾಪಿಸಲು, ಆ ತಕ್ಷಣವೆ ದಂಡನೆಯ ಜರುಗಿತು. - ಬಳಕ ಎಲ್ಲರೂ ಹೊರಟುಹೋದಮೇಲೆ ರಾಜನು ನನ್ನನ್ನು ನೋಡಿ, ಕುಮಾರಕ, ಈ ಹಾರವು ನಿನಗೆ ಹೇಗೆ ದೊರಕಿತು. ಹೆದರಿಕ Mಂದ ಮರೆಮಾಚದೆ ಧೈರದಿಂದ ನಿಜವನ್ನು ಹೇಳು ಎಂದು ಕೇಳಲು, ನಾನು ಸರ್ವವನ್ನು ಸ್ವಲ್ಪವೂ ಮರೆಮಾಚದೆ, ಆತನಸಂಗಡ ಹೇಳಿ, ಅಯಾ ! ಈ ರಹಸ್ಯವನ್ನು ಹೊರಡಿಸುವುದಕ್ಕಿಂತಲೂ, ಕಳ್ಳತನ ವನ್ನು ಒಪ್ಪಿಕೊಳ್ಳುವುದೇ ಉತ್ತಮವೆಂದು, ಒಪ್ಪಿಕೊಂಡೆನೆನಲು, ಹಾ ! ದೈವವೇ ! ಆವಾಜನಸಗೊಚರವಾದ, ನಿನ್ನ ಮಹಿಮೆಯನ್ನು ನಾನು ಸಮ್ಮತಿಯಿಂದ, ಒಪ್ಪಿ ಸ್ವೀಕರಿಸುವೆನು. ಆದರೂ ನನಗೆ ಮತ ಪ್ರವಾದ ದುಃಖವನ್ನು ಸವಿನಯದಿಂದ, ತಿಗಣಿಸಿದುದಕ್ಕಾಗಿ, ನಾನು ನಿನ್ನನ್ನು ವಂದಿಸುವೆನು, ಎಂದುಹೇಳಿ, ನನ್ನ ಕಡೆಗೆ ತಿರುಗಿ, ಕುಮಾರನೇ ! ನಿನಗೆ ಪ್ರಾಪ್ತವಾದ ವ್ಯಸನವನ್ನು ನೋಡಿ, ನಾನು ಬಹಳವಾಗಿ ವ್ಯಸನವಡು ತಿರುವೆನಲ್ಲದೆ, ನನಗುಂಟಾದ ಅವಮಾನವನ್ನು ನಿನಗೆ ಹೇಳುವೆನುಕೇಳು,