ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೨ , ಯವನ ಯಾಮಿನೀ ವಿನೋದ ಎಂಬ, ನಂಬಿಕೆ ಇಲ್ಲವೊ ? ಓಹೋ ? ಮುದುಕಿಯಾದ ನಾನುಹೇಳಿದಂತ ನಡೆಸ ಲಾರನುಬ ಸಂದೇಹವೊ ಹೇಳು. ನಿನ್ನ ಗುರುತು ಕಂಡಿರುವ, ನನ್ನ ವಯಸ್ಸಿ ನಲ್ಲಿ, ಬಾಲಕರನೇಕರಿಗೆ ಸುಖವನ್ನು ಉಂಟುಮಾಡಿರುವನು. ಅದನ್ನು ಹೇಳುತ್ತೇನೆ ಕೇಳು ಎಂದು ನಾನಾವಿಧವಾದ ಕಥೆಗಳನ್ನು ಹೇಳಿದುದರಿಂದ ನಾನು ಬೆರಗಾಗಿ, ಬಾಯನ್ನು ಹಿಡಿಯಲಾರದೆ, ನಾನು ನೋಡಿದ ಕನಾ ಮಣಿಯನೂ, ಅವಳಮನೆಯ ಗುರುತನ್ನೂ, ಆಕೆಯ ರೂಪಲಾವಣ್ಯ ವಿಶೇಷಗಳನ್ನು ಹೇಳಿ, ಅಂತಹ ಕನಾಮಣಿಯನ್ನು ನನ್ನ ಸಹವಾಸ ದಲ್ಲಿ ನೀನು ನಿಯೋಗಿಸುವುದಾದರೆ, ಅದನ್ನು ವರನುಸಂಪದವೆಂದಂಗೀಕರಿಸಿ, ಅದಕ್ಕೆ ತಕ್ಕ ಪ್ರತ್ಯುಪಕಾರವನ್ನು ನಿನಗೆ ಮಾಡುವೆನೆಂದು ನಂಬು. ಅಲ್ಲದೆ ನೀನುಮಾಡಿದ ಉಪಕಾರವನ್ನು ನಾನೆಂದಿಗೂ ಮರೆಯಲಾರನೆಂಬು ದನ ನೆನಪಿನಲ್ಲಿಡು, ಎಂದು ನುಡಿದನು. ಬಳಿಕ ಆ ಮುದುಕಿಯು, ವತ್ಸಾ ! ನೀನು ಮೋಹಿಸಿರುವ ಸುಂದರಿಯನ್ನು ನಾನು ಬಲ್ಫ್ನು. ಅವಳು ಈ ಊರಿನ ದೊಡ್ಡ ಖಾಜಿಯಮಗಳೇ ಹೌದು, ಅವಳಿಗಿಂತ, ಸುಂದರ ರಾದವರು ಈ ಊರಿನಲೆ ಇಲ್ಲ. ಆದರೆ ಆ ಹುಡುಗಿಯು ಬಹು ಗರಿಷ್ಟ ಯಾದುದರಿಂದ, ಸ್ವಾಧೀನವಾಗುವುದು ತುಂಬ ಕಮ್ಮನೆಂದು ಯೋಚಿಸು ತಿರುವನು. ಹೆಂಗಸರನ್ನು ಬಲಾತ್ಸಾರದಿಂದ ಸ್ವೀಕರಿಸಿದವರಿಗೆ ಈ ಬಾಗ ದಾದುನಗರದ ನಾಯಾಧೀಶನು ತಿಳಿಸಿರುವನಿಬಂಧನೆಯು ನಿನಗೆ ಗೊತ್ತೇ ಇರುವುದು. ಹೀಗಿರುವ ಅಖಾಜಿಯ ಸಂಸಾರದಲ್ಲಿ ನಾವು ಬಲಾ ತರಿಸುವುದು ಹೇಗೆ ? ಆ ಖಾಜಿಯು ನ್ಯಾಯಾಧಿಪತಿಗಳಿಗಿಂತಲೂ, ಈರನಾಗಿ ತನ್ನ ಮಕ್ಕಳಿಗೆ ಪುರುಷರನ್ನೇ ನೋಡಕೂಡದೆಂದು, ಬುದ್ಧಿಯನ್ನು ಹೇಳು ತಿರುವನು. ಆದುದರಿಂದ ಅವರು ಹೊರಗೆ ಸಂಚಾರಮಾಡದೆ, ಲೋಕ ವ್ಯವಹಾರವನ್ನು ಕಾಣದೆ, ಒಳಗೆ ಇದ್ದುಕೊಂಡಿರುವರು. ಆ ಹುಡುಗಿ ಯಲ್ಲಿಯೂ ಕೂಡ ಅಂತಹಗುಣವನ್ನು ನಾನು ನೋಡಲಿಲ್ಲವಾದುದರಿಂದಲೂ, ಅವಳತಂದೆಯ ನಿರ್ಬಂಧದಿಂದಲೂ, ಆಕಯನ್ನು ನೋಡುವುದೇ ಅಸಾಧ್ಯ ಎಂದು ನಾನು ತಿಳಿದುಕೊಂಡಿರುವೆನು. ಅಯ್ಯೋ ! ಅವಳನ್ನು ಹೊರತು ಮತ್ತಾರನ್ನಾದರೂ, ಬಯಸಿದರೆ ಸುಲಭವಾಗಿ ದೊರಕಿಸುವನು. ಆದರೂ