ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vo ಯವನ ಯಾಮಿನೀ ಏನೋದ ಎಂಬ, ಕದರು ನಿನ್ನ ಮೇಲಣ ಮೋಹದಿಂದ ಶೀತಲವಾಗಿರುತ್ತಿದ್ದವು. ಈಮಾತು ಗಳು ನಿನ್ನ ಹಸ್ತಾಕ್ಷರ ಲಿಖಿತವಾದ ಪೆ ಮಲೇಖನದಲ್ಲಿರುವುವು. ಅವು ನನ್ನ ಹೃದಯಾಂಧಕಾರವನ್ನು ಹೋಗಲಾಡಿಸಿ, ಸಂತೋಷವನ್ನುಂಟು ಮೂಡುವ ಸೂರ್ಯಕಿರಣಗಳಂತಿರುವುವು. ಇವು ನೀನು ಅನುಭವಿಸಿದ ದುಃಖಗಳನ್ನು ಸಂಪೂರ್ಣವಾಗಿ ನನಗೆ ತಿಳಿಯಪಡಿಸಿ ನನ್ನ ವ್ಯಥೆಯನ್ನು ತಕ್ಕಮಟ್ಟಿಗೆ ಶಮನ ಮಾಡುತ್ತಿರುವುವು. ಇದರಿಂದ ನಿನ್ನ ವಿರಹವೂ, ಅಧಿಕವಾಗಿ ಅದರಿಂದ ಹುಟ್ಟಿದ ಕಣ್ಮರುಸಹ ನನ್ನ ಹೃದತವಾದ ಕಾಮಾಗ್ನಿಯನ್ನು ವರಿಸುವಂತೆ ಮಾಡುತ್ತಿರುವುದು. ಆದುದರಿಂದ ನಾನು ಈ ವಿರಹವ್ಯಥೆಗೆ ಪಾತ್ರನಾದಾಗಿನಿಂದಲೂ, ಸೃಷ್ಟಹೀನನಾಗಿ ಮಾತನಾಡುವುದಕ್ಕೂ ಸಹ ಶಕ್ತಿ ಸಾಲದ ಹೊರಳಾಡುತ್ತಿದ್ದನು. ಈ ನಿನ್ನ ಕಾಗದವು ನನ್ನ ಹಸ್ತಮುದಿ ಕಯಾದಬಳಿಕ ಕಿಂಚಿ ತಸ್ಯ ಚಿತನಾದೆನು, ಈ ಕಾಗದವನ್ನು ನಾನು ನೋಡಿದಕೂಡಲೇ, ನನಗೆ ಆನಂದಪೂ, ಶರೀರಸೌಖ್ಯವೂ, ಉಂಟಾಗಿರುವುದರಿಂದ ಅದಕ್ಕೆ ತಕ್ಕ ಪ್ರತ್ಯುಪಕಾರವನ್ನು ನಾನೆಂತು ಮಾಡಬೇಕಾಗಿರುವುದೊ ನನಗೆ ತಿಳ ಯದು. ಬಹುಮಾತುಗಳಿಂದ ಪ ಯೋಜನವೇನು ? ನೀನು ನನ್ನ ಮೋಹವನ್ನು ಹೊಂದಿರುವೆಯೋ ಇಲ್ಲವೋ ಬರೆಯಬೇಕೆಂದು ಕಾಗದದಲ್ಲಿ ನಿರೂಪಿಸಿರುವನು. ನಾನು ನಿನ್ನನ್ನು ವಹಿಸದಿದ್ದರೂ ನೀನಾಗಿಯೇ ನನ್ನಲ್ಲಿ ಮೋಹದಿಂದ ಕರುಣಾದ್ಧಾಂಗವನ್ನು ಬೇರಿದುದಕ್ಕಾಗಿ, ನಾನು ನಿನ್ನನ್ನು ಪೂಜೆ ಮಾಡುವೆನು. ನಿನ್ನನ್ನು ಪ್ರತ್ಯಕ್ಷವಾಗಿ ನೋಡಿದಂತೆ ಈ ನಿನ್ನ ಕಾಗದವನ್ನು ಹಲವುಬಾರಿ ಓದಿನೋಡಿಕೊಂಡು, ಪ್ರೀತಿಯಿಂದ ಮುತ್ತಿಟ್ಟುಕೊಂಡೆನು. ನನ್ನ ನಾ ಣಕಾಂತಯೇ ! ನಿಜವಾಗಿಯೂ, ನಾನು ನಿನ್ನ ಮೇಲೆ ಮೋಹವುಳ್ಳವನಾಗಿರುವೆನು, ಇದಕ್ಕೆ ನನ್ನ ಹೃದ ಯಾಂಬುಜದಲ್ಲಿ ಪ್ರಜಲಿಸುತ್ತಿರುವ ವಿರಹಾಗ್ನಿಯೇ ಸಾಕ್ಷಿಯಾಗಿರು ವುದು, ಬಹು ಕೂರವಾದ ನನ್ನ ಸಂಬಂಧವಾದ ವಿರಹಾಗ್ನಿಯು ಪ್ರತಿ ದಿನವೂ ನನ್ನನ್ನು ಕೊಲ್ಲುತಿದರೂ, ನಾನು ನಿನ್ನ ಸಂದರ್ಶನವಾಗು ವುದೆಂಬ ಸಂತೋಷದಿಂದ ಅವುಗಳೆಲ್ಲ ಕಮ್ಮಗಳೇ ಅಲ್ಲವೆಂದು ತಿಳಿದು ಸಹಿಸಿ ಕಂಡಿರುವನು. ಈದಿನವಾದರೂಸರಿಯೇ, ಅಥವ ಮತ್ತಾವದಿನವಾದರೂ