ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, AvF ಇರ್ಬತಿಹರನು ಬಾಲಸೂರಿಗೆ ಹೊರಟುಹೋದನೆಂದು ಹೇಳಿದಬಳಿಕ ನಾನು ಹಿಂದಿರುಗಿಬರುತ್ತಿರುವಾಗ ಉತ್ತಮನಸಾಲಂಕೃತಳಾದ ಒಬ್ಬ ದಾದಿಯು ನನ್ನನ್ನು ನೋಡಿ ಅಯಾ! ನೀನು ಪರ್ಷಿಯಾ ರಾಜಕುಮಾರನ ಸೇವ ಕನೇ ಎನಲು, ನಾನು ಹೌದೆಂದು ಹೇಳಿದೆನು. ನಂತರ ಆಕೆ ತನ್ನ ಸಂಗಡ ಮಾತನಾಡಬೇಕೆಂದು, ನನ್ನ ಜೊತೆಯಲೆ ಬಂದು ಅಂಗಳದಲ್ಲಿ ನಿಂತಿರು ವಳು. ಯಾರೋ ದೊಡ್ಡ ಮನುಷ್ಕರಕಡೆಯಿಂದ ಕಾಗದವನ್ನು ತಂದಿರು ವಂತೆ ತೋರುವುದೆಂದು ಹೇಳಲು, ರಾಜಕುಮಾರನು ಆಕೆ ಹೇಮುಸೆಲ್ ನೆಹರಳ ದಾದಿಯಹೊರತು ಮತ್ತಾರೂ ಅಲ್ಲವೆಂದು ತಿಳಿದು, ಅವಳನ್ನು ತನ್ನ ಬಳಿಗೆ ಕರೆದುಕೊಂಡುಬರುವಂತೆ ಹೇಳಿದನು, ಆ ದಾದಿಯು ಇರ್ಬ ತಹರನ ಮನೆಗೆ ಪದೇ ಪದೇ ಬರುತ್ತಿದ್ದುದರಿಂದ, ರತ್ನವಾದಾರಿಯು ಅವಳ ಗುರುತನ್ನು ಕಂಡಿದ್ದನು. ಇಂತಹಸಮಯದಲ್ಲಿ ದಾದಿಯುಬಂದುದು ರಾಜಪುತ್ರನಿಗೆ ಸಂತೋಷವೇ ಆದುದರಿಂದ, ಆಕೆ ಒಳಹೊಕ್ಕು ಬಂದ ಕೂಡಲೆ ರಾಜಪುತ್ರ ನಿಗೆ ನಮಸ್ಕಾರ ಮಾಡಿದಳು. ಇಂತಂದು ನುಡಿದು, ಸಹರಜಾದಿಯು ಬೆಳಗಾದಕೂಡಲೆ ಕಧೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೯ ನೆಯ ರಾತ್ರಿ ಕಥೆ. ನಂತರ ರಾಜಕುಮಾರನು ಬಾದಿಗೆ ಪ್ರತಿ ವಂದನೆಗಳನ್ನು ಮಾಡಿ ದನು, ರತ್ನನಪಾರಿಯು ದಾದಿಯನ್ನು ನೋಡಿದಕೂಡಲೆ, ಸ್ವಲ್ಪ ಹೊತ್ತು ಮರೆಯಾಗಿದ್ದನು, ದಾದಿಯು ತಾನು ಸ್ವಲ್ಪ ಹೊತ್ತು ಮಾತ ನಾಡುತ್ತಿದ್ದು, ನಂತರ ರಾಜಕುಮಾರನಿಂದಪ್ಪಣೆಯನ್ನ ತೆಗೆದುಕೊಂಡು, ಹೊರಟುಹೋದಳು. ನಂತರ ವ್ಯಾಪಾರಿಯು ಒಳಹೊಕ್ಕು ತನ್ನ ಸ್ಥಲ ದಲ್ಲಿ ಕುಳಿತುಕೊಂಡು, ಹಸನ್ಮುಖಿಯಾಗಿ ಸಂತೋಷದಿಂದಿರುವ ರdದ ಪುತ್ರನನ್ನು ನೋಡಿ, ಪಿಯಳೇ ! ನಿನಗೆ ಕಲೀಫರಮನೆಯಲ್ಲಿ ಏನೋ ಮಹತಾದ ಕಾರ್ಯ ಸಂಘಪಿಸಿದಂತೆ ತೋರುವುದು. ಹೌದು ! ಎನಲು ರಾಜಕುಮಾರನು ಅಯಾ ! ನೀನು ಹೀಗೆ ಹೇಳುವುದಕ್ಕೆ ಕಾರಣವೇ ನೆಂದು ಕೇಳಿದನು, ವ್ಯಾಪಾರಿಯು ಅಯಾ ! ಈಗತಾನೇ ನಿನ್ನ ಬಳಿಗೆ