ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರೇಬಿಯನ್ ನೈಟ್ಸ್ ಕಥೆಗಳು, ೭೦೭ ನಿದಿ ಸುತ್ತಿರುವ ಮನೆಗೆ ಕರೆದುಕೊಂಡುಹೋಗಿ, ಬಹದರನಿಗೆ ಬದಲಾಗಿ ಆ ನಾಯಿಕಾಮಣಿಯ ಕುತ್ತಿಗೆಯನ್ನು ಕತ್ತರಿಸಿದನು. ' ಇಂತಂದು ಬಿಳಗದಕೂಡಲೇ ಕಥೆಯನ್ನು ನಿಲ್ಲಿಸಿ, ನಹರಜಾದಿಯು ಮರಳಿ ಬೆಳ ಗಿನ ಜಾವದಲ್ಲಿ ಹೇಳಲಾರಂಭಿಸಿದಳು, ೨೩೨ ನೆಯ ರಾತಿ ಕಥೆ. ಅಸ್ದ ನು ತಲೆಯನ್ನು ಕಡಿದ ಶಬ್ದದಿಂದ ಬಸದರನು ಎಚ್ ತು, ಮುಂಡವನ್ನು ತಲೆಯನ್ನು ಕಡಿದುಹಾಕಿ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡುನಿಂತಿರುವ ರಾಜಕುಮಾರನ ನೋಡಿ ಭವಿಸಿದವನಾಗಿ ತಾನು ಆತನನ್ನು ಕುರಿತು, ಈ ಸಿಯನ್ನು ಏತಕ್ಕಾಗಿ ನೀನು ಕಡಿದು ಹಾಕಿದೆ ಎಂದು ಪ್ರಶ್ನೆ ಮಾಡಲು ರಾಜಪುತ್ರನು ವಿನಯಾನಿತನಾಗಿ ಆಕೆಯ ಚರ್ಯವನ್ನೆಲ್ಲ ಹೇಳಿ, ದಯಾಳುವಾದ ಪರಮಸ್ನೇಹಿತನಾದ ನಿನ್ನಲ್ಲಿ ಆಕೆ ತೂರಿದುದರಿಂದ ನಾನು ಅದನ್ನು ಸಹಿಸಲಾರದೆ ಈಕೆಯನ್ನು ಖಂಡಿಸಿಹಾಕಿ ದನೆಂದು, ಅದನ್ನು ನೀನು ಸೈರಿಸಿ ನನ್ನನ್ನು ಕಾಪಾಡಬೇಕೆಂದು ಬೇಡಿ ಕೊಂಡ ರಾಜಕುಮಾರನನ್ನು ನೋಡಿ ಸಂತೋಷದಿ.ದ ಅಯಾ ! ನೀನು ಈ ಊರಿಗೆ ಹೊಸಬನು, ನನ್ನ ಪ್ರಾಣರಕ್ಷಣೆಗಾಗಿ ಈ ನಾಯಕಮಣಿಯ ತಲೆಯನ್ನು ಕಡಿದುಹಾಕಿರುವೆ, ಈ ಶವವನ್ನು ಹೇಗೆ ಸುಸರಿಸಿ ನೀನು ನಿರಪರಾಧಿಯಾಗಿ ಯಾವ ತೊಂದರೆಯೂ ಇಲ್ಲದಂತೆ ಇರಲಾದೆ ನಾನು ಕಾಣೆ. ಆದುದರಿಂದ ನೀನೇ ಇದನ್ನು ಸಂಸ್ಕರಿಸುವೆನೆಂದು ಹೇಳಿದನಾತನ್ನು ನಾನು ಒಪ್ಪಲಾರೆನು. ಈ ಶವವನ್ನು ನಾನು ಸಮುದ ಮಧ್ಯಕ್ಕೆ ತಗೆದುಕೊಂಡು ಹಾಕಿಬರುವೆನು ಅದುವರಿಗೂ ನೀನು ಇಲ್ಲಿಯೇ ಇರು. ಒಂದುವೇಳೆ ನಾನು ಬರದೇಹೋದರೆ ನೀನು ಬಾಗಿಲನ್ನು ಭದವಾಗಿ ಮುಚ್ಚಿಕೊಂಡು ಸುಖ ವಾಗಿ ವಾಸಮಾಡುತ್ತಿರು. ನೀನು ಈ ಮನೆಯಲ್ಲಿ ವಾಸಮಾಡಿಕೊಂಡಿರಲು ಯಾವ ಅಭ್ಯಂತರವೂ ಇಲ್ಲ. ಆದರೆ ಇದನ್ನು ಮತ್ತಾವ ವಿಧವಾದ ಇತರ ವ್ಯಾಪಾರಗಳಿಗೂ ಸಿಕ್ಕಿಸದ ತೆ ಎಚ್ಚರಿಕಯಾಗಿರಬೇಕೆಂದು ಕೇಳಿಬಂದು ಸಮ್ಮತಿಪತ್ಯವನ್ನು ಬರೆದು ಆತನಕೈಗೆ ಕೊಟ್ಟು ಆ ಶವವನ್ನು ಮೂಟೆ ಕಟ್ಟಿ ತಲೆಯಮೇಲೆ ಹೊತ್ತುಕೊಂಡು, ದಾರಿಯಲ್ಲಿ ಬರುತ್ತಿರುವಾಗ ಊರಿನ ಮಧ್ಯದಲ್ಲಿರುವ ಒಂದಾನೊಂದು ಸಂದಿಯಲ್ಲಿ ಬರುತ್ತಿರಲು, ನಗರ