ಪುಟ:ಅರ್ಥಸಾಧನ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನೆ wwwwwwwwwwwwwwwwwwwwwwwwwwwvvvvvvvvvvvvvvvvvkth ರಲ್ಲಿ ಜಾಗರೂಕರಾಗಿರಬೇಕಲ್ಲದೆ, ಕೊನೆಗೆ ಅದು ಫಲಪ್ರದವಾಗಬಹು ದೆಂದು ತೋರಿದ ಹೊರತು ಯಾವ ಕೆಲಸವನ್ನೇ ಆಗಲಿ ಉಪಕ್ರಮಿಸಬಾ ರದು. ಪೂರ್ವದಲ್ಲಿ ಒಬ್ಬ ಮಹಾತ್ಮನು ದೇಶಗಳನ್ನೆಲ್ಲಾ ಸಂಚರಿಸುತ್ತಾ ಒಂದು ಕೋಟಿ ದ್ರವ್ಯವನ್ನು ಕೊಟ್ಟರೆ ಒಂದು ಬುದ್ಧಿವಾದವನ್ನು ಹೇಳು ವೆನೆಂದು ಧನಿಕರನ್ನು ಕುರಿತು ಹೇಳುತ್ತಾ ಇದ್ದನು. ಅನೇಕರು ಈ ಬುದ್ದಿವಾದವು ಎಂಥಾದ್ದಾಗಿರಬಹುದೋ ಎಂಬುದಾಗಿ ಆಶ್ಚಯ್ಯಪಡುತ್ತಾ ಇದ್ದರು. ಕಡೆಗೆ ಒಬ್ಬ ದೊರೆಯು ಇದನ್ನು ಪರೀಕ್ಷಿಸಬೇಕೆಂದು ಆತನಿಗೆ ಬಂದು ಕೋಟಿ ದ್ರವ್ಯವನ್ನು ಕೊಟ್ಟು ಬುದ್ಧಿವಾದವನ್ನು ಕೇಳಿದನು. ಆ ಮಹಾತ್ಮನು ದೊರೆಯನ್ನು ಏಕಾಂತಸ್ಥಳಕ್ಕೆ ಕರೆದುಕೊಂಡುಹೋಗಿ “ಎಲೈ ದೊರೆಯೇ ನಾನು ಹೇಳುವ ಬುದ್ಧಿವಾದವು ಸಾಮಾನ್ಯವಾದುದೆಂದು ಉಪೇಕ್ಷಿಸಬೇಡ. ಅದನ್ನು ಚೆನ್ನಾಗಿ ಪರೀಕ್ಷಿಸು ; ಎಂದು ಹೇಳಿ, ನೀನು ಮಾಡತಕ್ಕ ಕೆಲಸಗಳ ಪರಿಣಾಮದ ಫಲವನ್ನು ಚೆನ್ನಾಗಿ ತಿಳಿದುಕೊಳ್ಳದೆ ಯಾವ ಕೆಲಸವನ್ನೂ ಮಾಡಬೇಡ ” ಎಂದು ಹೇಳಿದನು. ವೊರೆಯು ಈ ಮಾತನ್ನು ಕೇಳಿದ ಕೂಡಲೇ ಇದು ಎಲ್ಲರಿಗೂ ತಿಳಿದಮಾತೇ ಎಂಬುದಾಗಿ ಭಾವಿಸಿ ಈ ಸಂಗತಿಯು ಎಲ್ಲರಿಗೂ ತಿಳಿದರೆ “ ದೊರೆಯು ಮೋಸಹೋದ ನೆಂದು ಪರಿಹಾಸಮಾಡುವರು ” ಎಂಬುದಾಗಿ ಯೋಚಿಸಿಕೊಂಡು ಅನ್ಯಾದ ಶವಾದ ಬುದ್ದಿವಾದದ ಉಪದೇಶವನ್ನು ಹೊಂದಿದವನಂತೆ ಅಭಿನಯಿಸಿ, ಆ ಮಹಾತ್ಮನಿಗೆ ಮಕ್ಕಾದೆಮಾಡಿ ಕಳುಹಿಸಿಕೊಟ್ಟನು. ಆ ಮೇಲೆ ದೊರೆ ಯು ತನಗೆ ಹೇಳಿದ ಬುದ್ದಿವಾದದ ವಚನವನ್ನು ಅರಮನೆಯ ಸಮಸ್ಯಭಾಗ ಗಳಲ್ಲಿಯೂ ನೋಡಿದಕಡೆ ಕಾಣುವಂತೆ ಬರೆಸಿದನು. ಕೆಲವು ದಿವಸ ಗಳಲ್ಲಿ ಈತನಿಗೆ ಶತ್ರುವಾದ ಸಾಮಂತರಾಜನೊಬ್ಬನು ಪ್ರತಿಕಾರಬುದ್ದಿ ಯಿಂದ ಈತನ ಪ್ರಾಣವನ್ನೂ ರಾಜ್ಯವನ್ನೂ ಅಪಹರಿಸಬೇಕೆಂದು ಈ ದೊರೆಗೆ ಕ್ಷೌರಮಾಡುವವನನ್ನು ಕರೆಸಿ “ ನೀನು ಕ್ಷೌರಮಾಡುವಾಗ G