ಪುಟ:ಅರ್ಥಸಾಧನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡತ ೧೯ ನಗಳನ್ನು ಮಾಡತಕ್ಕವರು-ಇವರ ಜನ್ಮವೆಲ್ಲಾ ಸುಳ್ಳಿನ ಮುದ್ದೆಯಾಗಿ ಪರಿಣಮಿಸುವುದು. ಸುಳ್ಳಿನಿಂದ ಫುನತೆಯು ಹೋಗುವುದು. ಘನತೆತಪ್ಪಿ ದವನು ಬದುಕಿದರೂ ವ್ಯರ್ಥವು. ಆದಕಾರಣ ಯಾವವಿಧವಾಗಿಯೂ ಸುಳಾಡುವುದನ್ನು ಬಿಟ್ಟಲ್ಲಿ ಅಂಥವನಿಗೆ ಸಕಲ ವಿಷಯಗಳಲ್ಲೂ ಒಳ್ಳೆ ಯದಾಗುವುದು. ನಡತೆ . ಆಚಾರಾಲ್ಲಭತೇ ಹಾಯುಃ ಆಚಾ ರಾಲ್ಲಭತೇ ಸುಖಂ | ಆಚಾರಾತ್ ಸ್ವರ್ಗಮಕ್ಷಯ್ಯಂ ತಸ್ಮಾದಾಚಾರರ್ವಾ ಭವೇತ್ || ಲೋಕದಲ್ಲಿ ಜನರು ಮೊದಲಿನಿಂದಲೂ ಯಾವಯಾವ ನಡೆವಳಿಕೆ ಗಳನ್ನು ನೋಡುತ್ತಿರುವರೊ ಅವುಗಳನ್ನು ಕ್ರಮಕ್ರಮವಾಗಿ ಅನುಸರಿ ಸುವರು. ಹೀಗೆ ಅನುಸರಿಸುವುದರಲ್ಲಿ ತಮ್ಮ ಹಿರಿಯರನ್ನೂ ಸ್ನೇಹಿತ ರನ್ನೂ ನೆರೆಹೊರೆಯವರನ್ನೂ ಪರಿಚಿತರನ್ನೂ ನೋಡಿ ನಡತೆ ಉಡಿಗೆ ತೊಡಿಗೆ ಮೊದಲಾದ ಅನೇಕ ಭಾಗಗಳಲ್ಲಿ ಅವರಂತೆ ನಡೆದುಕೊಳ್ಳುವು ದಕ್ಕೆ ಪ್ರಯತ್ನ ಮಾಡುವರು ಆದುದರಿಂದಲೇ * ತಂದೆಯಂತೆ ಮಗ, ತಾಯಿಯಂತೆ ಮಗಳು, ಗುರುವಿನಂತೆ ತಿಷ್ಯ ” ಎಂಬ ಲೋಕೋಕ್ತಿಯು ಟಾಗಿದೆ. ಹಿರಿಯರೇ ಮೊದಲಾದವರು ಒಳ್ಳೆಯ ನಡತೆಯುಳ್ಳವರಾಗಿಯೂ ಒಳ್ಳೆಯ ಶಿಲಪ್ಪ ಭಾವವುಳ್ಳವರಾಗಿಯ ಸತ್ಯಸಂಧರಾಗಿಯೂ ದುರಾಚಾ ರಗಳಿಲ್ಲದವರಾಗಿಯ ಇದ್ದರೆ ಅವರ ಸಹವಾಸದಿಂದ ನಮಗೂ ಅವರ ನಡತೆಗಳು ಕ್ರಮಕ್ರಮವಾಗಿ ಬರುವುವು. ಹಾಗಲ್ಲದೆ ಅವರು ದುಷ್ಟರಾ ಗಿಯ ದುರಾಚಾರವಂತರಾಗಿಯ ಜೂಜುಗಾರರಾಗಿಯೂ ವಿಷಯಲಂ ಪಟರಾಗಿಯೂ ಕುಡುಕರಾಗಿಯ ಇದ್ದರೆ ಅವರ ಸಹವಾಸದಿಂದ ಅವರ