ಪುಟ:ಅರ್ಥಸಾಧನ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ೦ಬಿ ಕೆ , ವಿಶ್ವಾಸಃ ಸತ್ವಕಾರಾಣಾಂ ನಿದಾನಂ ಮುಖ್ಯಮುಚ್ಯತೇ || ತಸ್ಮಾತ್ ಪುರ್ಮಾ ಪ್ರಯತ್ನನ ರಕ್ಷೇದ್ವಿಶ್ವಾಸಮುತ್ತಮಂ || ಆಡಿದ ಮಾತಿಗೆ ತಪ್ಪದೆ ನಡೆಯತಕ್ಕವರನ್ನು ನಂಬಿಕೆವಂತರೆಂಬ ದಾಗಿ ಹೇಳುವರು. ಆಧಾರ ಮೊದಲಾದುವುಗಳನ್ನು ಕಾಣಿಸಿ ಪತ್ರ ಬರೆದು ಕೊಟ್ಟರೂ ನಂಬಿಕೆಯಿಲ್ಲದವನಿಗೆ ಒಂದು ಕಾಸು ಸಲಹುಟ್ಟುವುದು ಕೂಡ ಕಷ್ಟ. ಇದು ಯಾವುದೂ ಇಲ್ಲದೆಯೇ ನಂಬಿಕೆಯುಳ್ಳನಿಗೆ ಸಾಲದ ಲಾದುವು ಸುಲಭವಾಗಿ ದೊರೆಯುವುವು. ನಂಬಿಕೆಯುಳ್ಳವನನ್ನು ಸರರೂ ನಂಬುವರು, ನಂಬಿಕೆಯಿಂದಲೇ ವರ್ತಕರು ಹುಂಡಿ ಮೊದಲಾದುವುಗಳಿಗೆ ಹಣಗಳನ್ನು ಸೇರಿಸುವುದಕ್ಕೋಸ್ಕರ ತಮ್ಮ ಗುರ್ತುಕಂಡವರಲ್ಲೆಲ್ಲಾ ಇದ್ದಷ್ಟು ಹಣಗಳನ್ನು ತೆಗೆದುಕೊಂಡುಬಂದು ಹುಂಡಿ ಹಣಕ್ಕೆ ಜತೆ ಮಾಡಿ ಕೊಟ್ಟು ಮತ್ತೆರಡುಮರುದಿನಗಳಲ್ಲಿಯೇ ಅವರಿಗೆ ಆ ಹಣವನ್ನು ಸೇರಿಸಿ ಕೊಟ್ಟುಬಿಡುವರು. ಇದಲ್ಲದೆ ಕೋರ್ಟು ಮೊದಲಾದ ಸ್ಥಳಗ ಳಲ್ಲೂ ಕೂಡ ನಂಬಿಕೆವಂತರ ಹೇಳಿಕೆಯನ್ನು ವಿಶೇಷವಾಗಿ ಗೌರವಿಸು ವರು. ಯಾವವೃತ್ತಿಯವರೇ ಆಗಲಿ ಆಡಿದ ಮಾತಿನಂತೆ ನಡೆದುಕೊ ಳ್ಳುತ್ತಾ ನಂಬಿಕೆಯುಳ್ಳವರಾಗಿದ್ದರೆ ಅಂಥವರನ್ನು ಪ್ರತಿಯೊಬ್ಬರೂ ಆದರಿ ಸುವರು. ಅಂಥವರು ಸಿಕ್ಕಿದರೆ ಸಾಕೆಂದು ಜನರು ಹುಡುಕುತ್ತಿರುವರು. ಹೀಗೆ ನಂಬಿಕೆವಂತರು ಸತ್ಪರ ಗೌರವಕ್ಕೂ ಪಾತ್ರರಾಗುವರಾದ್ದರಿಂದ ಸರರೂ ಈ ಗುಣವನ್ನು ಸಂಪಾದಿಸಿ ವೃದ್ಧಿಗೆ ಬರುವ ಪ್ರಯತ್ನವನ್ನು ಮಾಡಬೇಕು.