ಪುಟ:ಅರ್ಥಸಾಧನ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಅನೇಕ ರೂಪಾಯಿಗಳವರೆಗೂ ಇಡುವುದಕುಪಕ್ರಮಿಸುವರು. ಈ ಕುರ ಅಭ್ಯಾಸವಾದನಂತರ ಒಂದೊಂದುವೇಳೆ ಅದರಿಂದ ಲಾಭವುಂಟಾ ದರೂ ಮತ್ತೊಂದುವೇಳೆ ವಿಶೇಷ ನಷ್ಟ ಸಂಭವಿಸುವುದು. ಜನರು ದೂತಕ್ಕೆ ಕುಳಿತುಕೊಂಡಮೇಲೆ ಸೋಲುತ್ತಿದ್ದರೂ ಮತ್ತೆ ಗೆಲ್ಲುವೆವೆಂಬ ದುರಾಶೆ ಯಿಂದ ಮತ್ತೆಮತ್ತೆ ಆಡುವುದಕ್ಕೆ ಪ್ರಯತ್ನಿಸುವರು. ಮ್ಯೂತದಲ್ಲಿ ಸೋತು ಕೋಪವು ಉಲ್ಬಸ್ಥಿತಿಗೆ ಬಂದಮೇಲೆ ಕರ್ಣಕಠೋರವಾದ ಮಾತುಗಳು ಹೊರಡುವುದಕ್ಕುಪಕ್ರಮವಾಗಿ ವೃದ್ಧಿಯನ್ನೆದುವವು. ಅದರೊಡನೆ ಮಾತ್ಸಲ್ಯವೂ ತಲೆಹಾಕುವುದು. ಜೂಜಾಟವು ಅಭ್ಯಾಸವಾದನಂತರ ಅದನ್ನು ಬಿಟ್ಟು ಬಿಡಬೇಕಾದರೆ ಬಹಳ ಶ್ರಮವಾಗುವುದು ಜೂಜುಗಾರ ನಿಗೆ ಎಷ್ಟು ದ್ರವ್ಯವಿದ್ದರೂ ಅದೂ ಸಾಲದೆ ಕೊನೆಗೆ ಅದಕ್ಕೋಸ್ಕರ ಸುಳ್ಳು, ಮೋಸ, ವಂಚನೆ, ಕಳ್ಳತನ ಮೊದಲಾದುವುಗಳಿಂದಲಾದರೂ ಅಡರ್ಜನಮಾಡಬೇಕಾಗಿ ಬರುವುದು. ಇವುಗಳ ಮೂಲಕ ಧನಸಿಕ್ಕದೆ ಜೂಜಾಟ ನಿಂತುಹೋಗುವ ಸಂದರ್ಭ ಬಂದರೆ ಜಿರಕಾಲದಿಂದ ಅಭ್ಯಸ್ಥವಾ ಡಿಸುವ ಇದರ ಮಹಿಮಾತಿಶಯದಿಂದ ಈದಿವಸ ಯಾವವಿಧವಾಗಿಯೂ ದೂರು ಸಿಕ್ಕದೆ ಆಟಕ್ಕೆ ವಿಘ್ನು ಸಂಭವಿಸಿತಲ್ಲಾ ಏನುಮಾಡಲಿ ಎಂಬುದಾಗಿ ಹುಚ್ಚನಂತೆ ಆಡುತ್ತಾ ಕೊನೆಗೆ ಹೆಂಡತಿಯ ಕೊರಳಿನಲ್ಲಿರುವ ಮಾಂಗಲ್ಯ ಪಾದರೂ ಕಿತ್ತುಕೊಂಡು ಹೋಗಿ ಮಾರಿ ಜೂಜಾಡುವರು ಇದೇರೀತಿ ಯಲ್ಲಿ ಚಕ್ರವರಿ ಪದವಿಯಲ್ಲಿದ್ದ ನಳ ಯುಧಿಷ್ಠಿರ ಮೊದಲಾದವರು ಕೂಡ ದುಜ್ಯತಾಸಕ್ತಿಯಿಂದ ಕೇವಲ ಹೀನಸ್ಥಿತಿಗೆ ಬಂದದ್ದು ಪ್ರಸಿದ್ಧವಾಗಿಯೇಇದೆ. ಈಗ ಪ್ರತ್ಯಕ್ಷವಾಗಿ ದ್ಯೋತದಿಂದ ಸರಸ್ವವನ್ನೂ ಕಳೆದುಕೊಳ್ಳುತ್ತಾ ಹೀನಸ್ಥಿತಿಗೆ ಬರುತ್ತಿರುವವರ ದೃಷ್ಟಾಂತಗಳು ಎಲ್ಲೆಲ್ಲಿಯೂ ಅಸಂಖ್ಯಾತ ಪಾಚೆ ದೀಪವನ್ನು ನೋಡಿ ಭ್ರಮಿಸಿ ಬಿದ್ದು ಪಾತ್ರವನ್ನು ಕಳೆದುಕೊ ಆದ ಕಳಭಗಳcತೆ ಅನೇಕರು ತಾಸಕ್ತಿಯಿಂದ ಕೆಡುತ್ತಿರುವುದನ್ನು