ಪುಟ:ಅರ್ಥಸಾಧನ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ ರತಕ್ಕೆ ಎಲ್ಲಾ ಕೆಲಸಗಾರರೂ ತಮ್ಮ ಶರೀರಕ್ರಮದಿಂದ ಸಂಪಾದಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಗೃಹಕೃತ್ಯಕ್ಕುಪಯೋಗಿಸಿ ಬೆಳಗಾಗುವಹೊತ್ತಿಗೆ ಮತ್ತೆ ನಿರ್ಗತಿಕರಾಗಿ ಶ್ರಮಪಡುತ್ತಲೇ ಇರುವರು ಇವರು ಪಾನಕಾಲಕ್ಕೆ ಕೈಯಲ್ಲಿ ದುಡ್ಡಿಲ್ಲದಿದ್ದರೆ ತಮ್ಮಲ್ಲಿದ್ದ ಪದಾರ್ಥಗಳನ್ನು ಕೇಳಿದಪ್ಪಕ್ಕೆ ಕೊಟ್ಟು ಬಂದದ್ದನ್ನು ಪಾನಕ್ಕಾಗಿ ವಿನಿಯೋಗಿಸುವರು. ಶರೀರಕ್ರಮದಿಂದ ಸಂಪಾದಿಸತಕ್ಕವರು ತಮಗೆ ಸಂಪಾದಿಸುವುದಕ್ಕೆ ಶಕ್ತಿಸಾಲದಿದ್ದ ಕಾಲ ದಲ್ಲಿ ಹೆಂಡತಿಮಕ್ಕಳು ಸಂಪಾದಿಸಿಕೊಂಡು ಬಂದದ್ದರಲ್ಲಿ ಮದ್ಯಪಾನಕ್ಕಾಗಿ ಒಂದುಭಾಗವನ್ನುಪಯೋಗಿಸಿ ಸಂತುಷ್ಟರಾಗುವರು. ಮದ್ಯಪಾಯಿಗಳು ಒಂದುವೇಳೆ ಯಾವವಿಧವಾಗಿಯೂ ದುಡ್ಡು ಸಿಕ್ಕದಿದ್ದರೆ ಭಿಕ್ಷವನ್ನಾದರೂ ಬೇಡಿ, ಕಳ್ಳತನವನ್ನಾದರೂ ಮಾಡಿ ಬಂದ ದುಡ್ಡಿನಿಂದ ಮದ್ಯಪಾನಮಾಡು ವರು. ಪಾನಾಸಕ್ತರಾದವರು ಯಾವಪ್ರಕಾರದಿಂದಲಾದರೂ ಮದ್ಯಪಾನ ಮಾಡಿ ಅದರಿಂದ ಮೈಮೇಲೆ ಸ್ಮರಣೆತಪ್ಪಿದಾಗ ಚರಂಡಿಗಳಲ್ಲಿಯ ಬೀದಿಗ ಳಲ್ಲಿಯೂ ಬಿದ್ದು ಮಾನವನ್ನು ಕಳೆದುಕೊಳ್ಳುವರು ಇದಲ್ಲದೆ ಇವರಲ್ಲ ನೇಕರು ಉನ್ಮತ್ತಾವಸ್ಥೆಯಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿ ಅದಕ್ಕೆ ಶಿಕ್ಷೆಯನ್ನನುಭವಿಸುವುದಲ್ಲದೆ ನಾನಾವಿಧವಾದ ಬುದ್ಧಿಭ್ರಮಣಗಳಿಗೂ ಗುರಿ ಯಾಗುವರು.

  • ಈ ಜನರು ಅಪೇಯಪಾನಗಳಿಂದ ತಮ್ಮ ಶರೀರವನ್ನು ಕಡಿಸಿ ಕೊಳ್ಳುವುದಲ್ಲದೆ ತಮ್ಮ ಪುತ್ರ ಕಳತ್ರಾದಿಗಳನ್ನು ಕೂಡ ನಿಶ್ಯಂಕವಾಗಿ ಅಂಥ ದುರಾಚಾರ ಪ್ರವೃತ್ತಿಗೂ ಈ ದುರಭ್ಯಾಸದಿಂದ ಸಂಕ್ರಮಿಸುವ ಜನ್ಮ ಸಿದ್ದವಾದ ರೋಗಗಳಿಗೂ ಗುರಿಮಾಡುವರು. ಆದುದರಿಂದಲೇ ಮದ್ಯ ಪನವು ಶ್ರುತಿಸ್ಮತ್ಯಾದಿಗಳಲ್ಲಿ ವಿಶೇಷವಾಗಿ ನಿಸೀಧಿಸಲ್ಪಟ್ಟಿರುವುದು. ನಮ್ಮ ಹಿರಿಯರು ಕೂಡ ಮದ್ಯಪಾನದಿಂದುಂಟಾಗತಕ್ಕ ಅನರ್ಥ ಪರಂಪರೆ ಗಳನ್ನು ನೋಡಿ “ ಖಂಡಿತವಾಗಿ ಇದನ್ನು ಮಾಡಬಾರದು, ಇದರಿಂದ ಬಹು