ಪುಟ:ಅರ್ಥಸಾಧನ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನೆ ಸಂಪತ್ತೂ ಇರತಕ್ಕವರು ವಿವಾಹವನ್ನು ಮಾಡಿಕೊಳ್ಳದಿದ್ದರೆ ಅವರು ಉಚ್ಚಂಗಲಪ್ರವೃತ್ತರಾಗುವುದು ಸಹಜವಾಗಿರುತ್ತದೆ. * ಗಾಳಿ ನೀರು ಎಲೆ ಗಳನ್ನು ತಿಂದುಕೊಂಡು ಕಾಯಕ್ಷೇಶಪಡುತ್ತಲಿದ್ದ ವಿಶ್ವಾಮಿತ್ರ ಪರಾಶರಾದಿ ಋಷಿಗಳು ಕೂಡ ಸ್ತ್ರೀಯರ ಮುಖದರ್ಶನಮಾತ್ರದಿಂದಲೇ ಮೋಹಪರವಶ ರಾದರು. ಹೀಗಿರುವಾಗ ಒಳ್ಳೆಯ ಸಣ್ಣಕ್ಕಿಯನ್ನ ಹಾಲು ಮೊಸರು ತುಪ್ಪ ಮುಂತಾದುವುಗಳನ್ನು ಭುಜಿಸುವ ಪಾಮರರು ಜಿತೇಂದ್ರಿಯರಾದರೆ ವಿಂಧ್ಯ ಪರತವು ಸಮುದ್ರದಲ್ಲಿ ತೇಲುವುದು, ಎಂದು ನಮ್ಮ ಹಿರಿಯರು ಹೇಳಿ ದ್ದಾರೆ. ಇನ್ನೂ ಈ ವ್ಯಭಿಚಾರದಿಂದ ಬರತಕ್ಕ ಅನೇಕವಾದ ಅನರ್ಥಪರಂ ಪರೆಗಳು ಅನುಭವಸಿದ್ಧವಾಗಿಯೇ ಇರುತ್ತವೆಆದುದರಿಂದ ಸ್ತ್ರೀ ಪುರುಷರು ಅನುರೂಪರಾದವರನ್ನು ವಿವಾಹ ಮಾಡಿಕೊಂಡು ವ್ಯಭಿಚರಿಸದಿದ್ದರೆ ಅಂಥ ವರಿಗೆ ಲೋಕದಲ್ಲಿ ಗೌರವವೂ ಮಾನವೂ ಕಿರಿಯ ಸರ ವಿಧವಾದ ಆನುಕೂಲ್ಯವೂ ಉಂಟಾಗುವುವು. ಮೇಲು ವಿಚಾರಣೆ. ಪ್ರತ್ಯಹಂ ಪತ್ಯವೇಕೋತ ಕಾರಜಾತಂ ಪುರ್ಮಾ ಸ್ವಯಂ | ತದಭಾವೇ ತು ತತ್ ಸತ್ವಂ ನಶ್ಯತ್ವ ನ ಸಂಶಯಃ || ಲೋಕದಲ್ಲಿ ಜನರು ಸಾಮಾನ್ಯವಾದ ಕೆಲಸವನ್ನು ಸಕ್ರಮಿಸಿದರೆ ತಾವೇ ನೋಡಿಕೊಂಡು ಸಮರ್ಪಕವಾಗಿ ನೆರವೇರಿಸುವರು. ಕೆಲಸವು ಭಾರಿಯಾಗಿಯೂ ಅನೇಕಶಾಖೆಗಳುಳ್ಳುದಾಗಿಯ ಅಥವಾ ಉಪಕ್ರಮಿ ಸಲ್ಪಟ್ಟ ಕೆಲಸಗಳು ಬಹಳವಾಗಿಯೂ ಇದ್ದಲ್ಲಿ ಅವುಗಳನ್ನೆಲ್ಲಾ ಯಜ ಮಾನನಾದವನೊಬ್ಬನೇ ನೋಡಿಕೊಳ್ಳುವುದಕ್ಕಾಗುವುದಿಲ್ಲವಾದಕಾರಣ ಇದಕ್ಕಾಗಿ ಒಬ್ಬೊಬ್ಬ ಮುಖಂಡನನ್ನು ಇಟ್ಟು ಕೊಂಡು ಅವನ ವಿಚಾರಣೆಗೆ