ಪುಟ:ಅರ್ಥಸಾಧನ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೃತ್ತಿಗಳು ಆಗಿ ಸನ್ನಪಹರಿಸಿ ಅವರಿಗೆ ಸಂತಾಪವನ್ನುಂಟುಮಾಡುವುದಕ್ಕೂ ಯತ್ನಿಸು ವರು. ಆದರೆ ಹೀಗೆ ಅತ್ಯುತ್ಕಟವಾದ ಪಾಪಗಳನ್ನು ಮಾಡತಕ್ಕರಿಗೆ ಪ್ರಾಯಶಃ ಈ ಲೋಕದಲ್ಲಿಯೇ ಶಿಕ್ಷೆಯಾಗುವುದು; ಒದುವೇಳ ಇಂಥ ಜನರು ತಾವು ಮಾಡಿದ ಮೋಸಕ್ಕೆ ಆಗಬೇಕಾದ ರಾಜದಂಡನೆಯನ್ನು ತಪ್ಪಿಸಿ ಕೊಂಡು ಸಂತೋಷಪಟ್ಟರೂ, ಅಂತರಂಗದಲ್ಲಿ ನಮ್ಮ ದುಷ್ಕೃತ್ಯವು ಎಲ್ಲಿ ಬಹಿರಂಗವಾಗುವುದೋ ಎಂಬ ಕಳವಳವು ಅವರಿಗೆ ತಪ್ಪುವುದಿಲ್ಲ. ಆದುದ ರಿಂದ ಅವರಿಗೆ ಈ ಕಳವಳ ವೇ ರಾಜದಂಡನೆಗಿಂತ ಪ್ರಬಲವಾದ ಶಿಕ್ಷೆಯಾ ಗುವುದು, ಇವರು ಮಾಡಿದ ತಪ್ಪಿತಗಳು ಇವರ ತಂತ್ರಗಳಿಂದ ನ್ಯಾಯಾಧಿಪ ತಿಗಳಿಗೆ ಒಂದುವೇಳೆ ಗೋಚರವಾಗದಿದ್ದರೂ ಸರಾಂತರಾಮಿಯಾದ ಈಶ್ವರನಿಗೆ ಗೋಚರವಾಗದಿರುವುದಿಲ್ಲ. ಆದಕಾರಣ ಇವರು ಈಶ್ವರಾನು ಗ್ರಹಕ್ಕೆ ಎಂದಿಗೂ ಪಾತ್ರರಾಗುವುದಿಲ್ಲ. ಉಚಿತವಾದ ವೃತ್ತಿಗಳನ್ನು ಅವ ಲಂಬಿಸಿ ಅವುಗಳಲ್ಲಿ ತಮ್ಮ ಯೋಗ್ಯತೆಯನ್ನ ಚಾತುರವನ್ನೂ ತೋರ್ಪ ಡಿಸಿ ಜೀವಿಸುವಂಥವರಿಗೆ ಈಶ್ವರಾನುಗ್ರಹವುಂಟಾಗು ವುದಲ್ಲದೆ ಇಹಪರ ಸಾಧನೆಗಳೂ ಆಗುವುವು. nemos ಧನಮತಿ ವಾಣಿಜ್ಯಂ ಕಿಂಚಿದಪ್ರೀತಿ ಕರ್ಷಣಂ || ಸೇವಾ ನ ಕಿಂಚಿದಪ್ರೀತಿ ಭಿಕ್ಷಾ ನೈವಚ ನೈವಚ || ಕೆಲವರು ಭಿಕ್ಷೆಯಿಂದ ಜೀವಿಸುವುದೇ ಒಂದು ಗೌರವಕರವಾದ ವೃತ್ತಿಯೆಂದು ಭಾವಿಸಿರುವರು. ಈ ಭಾವನೆಯು ಶ್ಲಾಸ್ಯವಾದುದಲ್ಲ. ಇಂ ಥವರು ತಮ್ಮ ಬುದ್ಧಿಶಕ್ತಿಗೂ ಕಾಯಶಕ್ತಿಗೂ ಅನುಗುಣವಾದ ಕಾರಗ ಳನ್ನು ಮಾಡಿ ಮನುಷ್ಯನಿಗೆ ಸಾಧ್ಯವಾಗಬಹುದಾದ ಸುಖವನ್ನು ಸಂಪಾದಿಸಿ ಕೊಳ್ಳುವುದಕ್ಕೆ ಹಿಂಜರಿದು, ಆಲಸ್ಯದಿಂದ ಕೈಕರೂಪವಾದ ಈ ವೃತ್ತಿಯೇ