ಪುಟ:ಅರ್ಥಸಾಧನ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ರತಕ್ಕೆ ಸ್ತ್ರೀಪುರುಷರಿಗೆ ತಮ್ಮ ಕೆಲಸದಲ್ಲಿ ಆಸಕ್ತಿ ತಪ್ಪಿ ಅವರು ತಮ್ಮ ಕೆಲಸಗಳನ್ನು ಫಲದಾಯಕವಾಗದಂತೆ ಮಾಡಿಕೊಳ್ಳುವರು. ಇಂಥವರಿಗೆ ಕಾಠ್ಯರೂಪವಾದ ವ್ಯಾಯಾಮದಿಂದುಂಟಾಗತಕ್ಕೆ ರೂಢಿಯ ತಿಳಿವಳ ಕೆಯ ನಿರ್ವಾಹಶಕ್ತಿಯ ತಪ್ಪಿ ಸೋಮಾರಿತನವು ವಿಶೇಷವಾಗಿ ನೆಲೆ ಗೊಳ್ಳುವುದು. ಯಾರು ಶ್ರದ್ದೆಯಿಂದ ಕೆಲಸಗಳನ್ನು ಮಾಡುವರೋ ಅವ ರಿಗೆ ಪ್ರಯೋಜನವು ಹಸ್ತಗತವಾಗುವುದು. ಕೆಲಸಮಾಡುವವರಿಗೆ ಕಾಲ ಹರಣಕ್ಕೂ ಸೋಮಾರಿತನಕ್ಕೂ ಅವಕಾಶವಿರುವುದಿಲ್ಲ. ಇವರಿಗೆ ಆಟ ಪಟಗಳೂ ಕೂಡ ಬೇಕಾಗುವುದಿಲ್ಲ. ಹಿಡಿದ ಕೆಲಸವು ಪೂರೈಸುವವ ರೆಗೂ ಆಲಸ್ಯಪಡದೆ ಕೆಲಸಮಾಡತಕ್ಕವರು ಒಳ್ಳೆ ಶೀಲಪ್ಪಭಾವವುಳ್ಳವ ರಾಗಿಯೂ ಸನ್ಮಾರ್ಗಪ್ರವರ್ತಕರಾಗಿಯ ಆಗುವರು. ಅಶ್ರದ್ದೆಯಿಂದ ಕಲಸಮಾಡತಕ್ಕವರಿಗೆ ಹಿಡಿದ ಕೆಲಸವು ಸರಿಯಾಗಿ ಕೈಗೂಡುವುದಿಲ್ಲ. ಅವರಿಗೆ ಸೋಮಾರಿತನವೂ ಸಿಡುಕೂ ದುರಾಲಾಪಗಳೂ ದುರಾಲೋಚನೆ ಗಳ ಉಂಟಾಗಿ ದುರಾರ್ಗಕ್ಕೆ ಅವಕಾಶವುಂಟಾಗುವುದು. ಇಂಥವರು ಅಸಕ್ತಿಯನ್ನೂ ಆರೋಗ್ಯ ಸಂಪತ್ತುಗಳನ್ನೂ ಕ್ರಮಕ್ರಮವಾಗಿ ಕಳೆದು ಕೊಳ್ಳುವರು. ಇವರು ಕುಟುಂಬಗಳಲ್ಲಿ ಬಹು ದ್ರವ್ಯವನ್ನು ವ್ಯಯಮಾ ಡಿದರೂ ಅದಕ್ಕೆ ತಕ್ಕ ಸುಖವು ಇವರಿಗಿರುವುದಿಲ್ಲ. ಇವರ ಮನೆಯ ಈತ ಜನರಿಗಿಂತಲೂ ಅಲ್ಲಿನ ಬಾಣಸಿಗರು ಆ ಮನೆಯ ಸೌಖ್ಯವನ್ನನುಭ ವಿಸುವರು. ಅವರು ಭುಜೆಸಿದ ಅನ್ನವು ಜೀರ್ಣಕ್ಕೆ ಬರುವುದು, ಮನೆ ಯಲ್ಲಿ ಮಾಡತಕ್ಕ ಬಗೆಬಗೆಯ ತಿಂಡಿಗಳೆಲ್ಲಾ ಅವರಿಗೆ ವಿಶೇಷವಾಗಿ ರುಚಿ ಸುವುವು. ಕರೀರದರ್ಥ್ಯದಲ್ಲಿ ಯ ಚಿತ್ತಸ್ವಸ್ಥ ದಲ್ಲಿಯೂ ಅವರು ಆ ಮನೆಯವರಿಗಿಂತಲೂ ಉತ್ತಮವಾದ ಸ್ಥಿತಿಯಲ್ಲಿರುವರು. ಅಂಥ ಮನೆಯ ಸ್ತ್ರೀಪುರುಷರೆಲ್ಲರೂ ತಮ್ಮ ಮನೆಯ ಬಾಣಸಿಗರಿಗಿಂತಲೂ ಹೆಚ್ಚಾಗಿ ಸೌಮ್ಯಾನುಭವವುಳ್ಳವರೆಂದು ಹೇಳುವುದಕ್ಕಾಗುವುದಿಲ್ಲ. ವಿವೇಕವಿಲ್ಲದ