ಪುಟ:ಅರ್ಥಸಾಧನ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಬಾಧೆಯನ್ನು ತಪ್ಪಿಸಿಕೊಳ್ಳುವುದಕ್ಕೋಸ್ಕರ ದೇಶಾಂತರಕ್ಕೆ ಹೋಗುವುದೂ ಉಂಟು. ಆಮೇಲೂ ಸಿಕ್ಕಿಕೊಂಡರೆ ಸಾಲಕೊಟ್ಟವನಿಂದ ನಾನಾವಿಧವಾದ ಅಪಮಾನಗಳನ್ನು ಹೊಂದಿ ಬಹಳವಾಗಿ ನೊಂದುಕೊಂಡು ಸಿವಿಲ್ ಸಂಬಂಧ ವಾದ ಬಂದೀಖಾನೆಗೆ ಹೋಗುವನು; ಅಥವಾ ದಿವಾಳಿಯಾದರೂ ಆಗುವನು. ಆದುದರಿಂದ ಮಾನಹೋಗತಕ್ಕ ಕೆಲಸಗಳನ್ನು ಮಾಡುವುದಕ್ಕೆ ಮೊದಲೇ ಚೆನ್ನಾಗಿ ಯೋಚಿಸಿ ಮಾನಹಾನಿಗೆ ಗುರಿಯಾಗದಂತೆ ನಡೆದುಕೊಳ್ಳುವುದು ಕರ್ತವ್ಯವಾದುದು. ನಗದುವ್ಯಾಪಾರೆ. ದದ್ಯಾನ್ಮೂಲ್ಯಂ ಸದ್ಯ ಏವ ಕ್ರಯ ವಿಕ್ರಯಯೋರಿಹ | ಅನ್ಯಥಾ ಲಾಭಹಾನಿಃ ಸ್ಯಾತ್ ಇತಿ ನೀತಿವಿದೋ ವಿದುಃ || ಪದಾರ್ಥಗಳನ್ನು ತೆಗೆದುಕೊಳ್ಳವಗೆ ಕೈಮೇಲೆ ಹಣ ಕೊಟ್ಟು ತಗೆದುಕೊಳ್ಳುವುದಕ್ಕೆ ನಗದುವ್ಯಾಪಾರವೆಂದು ಹೆಸರು. ಹೀಗೆ ಕೊಂಡು ಕೊಳ್ಳುವ ರೂಢಿಯೇ ಒಳ್ಳೆಯದು. ಸಾಲವಾಗಿ ಪದಾರ್ಥಗಳನ್ನು ಕೊಂಡು ಕೊಳ್ಳುವ ಅಭ್ಯಾಸವು ಬಹಳ ನಷ್ಟವನ್ನುಂಟುಮಾಡುತ್ತದೆ. ಕೈಮೇಲೆ ಹಣ ಕೊಟ್ಟು ವ್ಯಾಪಾರಮಾಡುವಾಗ ವರಕರು ಸ್ವಲ್ಪವೇ ಲಾಭವಿಟ್ಟು ಕೊಂಡು ಪದಾರ್ಥಗಳನ್ನು ಕೊಡುವರು. ಹೀಗೆ ತರುವಾಗ ಒಂದು ಅಂಗಡಿ ಯಲ್ಲದಿದ್ದರೆ ಮತ್ತೊಂದು ಅಂಗಡಿಯಲ್ಲಿ ನೋಡಿ ಒಳ್ಳೇಪದಾರ್ಥಗಳನ್ನು ತರಬಹುದು. ಸಾಲವಾಗಿ ತರುವುದಕ್ಕುಪಕ್ರಮಿಸಿದರೆ ವ್ಯಾಪಾರಗಾರನು ಹೆಚ್ಚಾದ ತಾಭವನ್ನಿಡುವುದಲ್ಲದೆ ಕೆಟ್ಟ ಪದಾರ್ಥಗಳನ್ನೂ ಕೊಡುವು ದುಂಟು. ಹೀಗೆ ಸಾಲಕೊಡುವವನು ಒಳ್ಳೇಪದಾರ್ಥಗಳನ್ನು ಕೊಡುವು ದಿಲ್ಲ ಎಂದ ಹೆಚ್ಚು ಧಾರಣೆಯಿಂದ ಕೊಡುತ್ತಾನೆಂದೂ ತಿಳಿದಿದ್ದರೂ ತಾನು ಅವನಿಗೆ ಕೊಡತಕ್ಕ ಹಣವನ್ನು ಕೊಟ್ಟು ಬೇರೆ ಅಂಗಡಿಯಲ್ಲಿ ನಗ