ಪುಟ:ಅರ್ಥಸಾಧನ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಋಣಪರಿಹಾರ ೭೫ ವನ್ನು ಪ್ರತಿತಿಂಗಳಲ್ಲಿಯೇ ನಿಯತವಾಗಿ ತೀರಿಸುತ್ತ ಬರಬೇಕು. ಹೀಗೆ ಮಾಡಿಕೊಳ್ಳದಿದ್ದರೆ ಗುಣವಿಮುಕ್ತನಾಗುವುದಕ್ಕೆ ಅವಕಾಶವಾಗುವುದಿಲ್ಲ. ಅಸಲಿಗೆ ಸ್ವಲ್ಪವನ್ನೂ ಕೊಡದೆ ಬಡ್ಡಿಯನ್ನು ಮಾತ್ರ ಕೊಡುವವರೂ ಉಂಟು ಇಂಥವರು ಋಣವಿಮುಕ್ತರಾಗುವುದೇ ಅಪೂರ. ಇವರು ಕೊಡತಕ್ಕೆ ಬಡ್ಡಿಯು ಅಸಲಿಗಿಂತಲೂ ಬಹಳ ಹೆಚ್ಚಾಗುವುದು. ಸಾಲ ತೆಗೆದುಕೊಂಡವನು ತನ್ನ ಆರ್ಜನೆಯಲ್ಲೊಂದು ಭಾಗವನ್ನು ಬಡ್ಡಿಗೂ ಸಾಧ್ಯವಾದಮಟ್ಟಿಗೆ ಅಸಲಿಗೂ ಕೊಡುತ್ತ ಬಂದಲ್ಲಿ ಕ್ರಮಕ್ರಮವಾಗಿ ಸಾಂತೀfುವುದಕ್ಕೆ ಅವಕಾಶವಾಗುವುದು. ಹೀಗೆ ಮಾಡದೆ ಬಂದ ಆದಾಯ ವನ್ನು ಪೂರ್ವಾಪರಯೊಚನೆಗಳಿಲ್ಲದೆ ವೆಚ್ಚ ಮಾಡುತ್ತ ಸಾಲ ತೀರಿಸುವು ದಕ್ಕೆ ಯಾವುದೋ ಒಂದು ಆದಾಯವನ್ನು ನಿರಿಕ್ಷಿಸಿಕೊಂಡು ಕಾಲಹರಣ ಮಾಡುತ್ತಿದ್ದರೆ, ಬಡ್ಡಿಯು ಹೆಚ್ಚಿ ಅದನ್ನು ಒಟ್ಟಿಗೆ ಕೊಡುವುದಕ್ಕೆ ಆಗದೆ ಅಸಲು ಬಡ್ಡಿಗಳನ್ನು ಸೇರಿಸಿ ಪತ್ರ ಬರೆದುಕೊಟ್ಟು ಅನೇಕ ತೊಂದರೆಗಳಿಗೆ ಗುರಿಯಾಗಬೇಕಾಗುವುದು. ಖಂಪರಿಹಾರವಾಗುವುದಕ್ಕೋಸ್ಕರ ಚೆನ್ನಾಗಿ ಯೋಚಿಸಿ ತನ್ನ ಅನ್ನ ವಸ್ತ್ರಗಳಿಗೆ ಅತ್ಯಾವಶ್ಯಕವಾಗಿ ಬೇಕಾದಷ್ಟನ್ನು ಗೊತ್ತು ಮಾಡಿಕೊಂಡು ಉಳಿದುದನ್ನು ಸಾಲಕ್ಕಾಗಿ ಕೊಡುತ್ತ ಬರಬೇಕು. ಹೀಗೆ ಮಾಡುವುದರಿಂದ ಸಂತೀರುವುದಕ್ಕೆ ಅವಕಾಶವಾಗುವುದು ತನ್ನ ಆಯತಿಗೆ ಮಾರದೆ ಸಾಲ ಮಾಡಿರತಕ್ಕೆ ಒಬ್ಬನಿಗೆ ತಿಂಗಳಿಗೆ ೨೦ ರೂಪಾಯಿ ವರಮಾನವೂ ೧೦೦ ರೂಪಾಯಿ ಸಾಲವೂ ಇದ್ದರೆ ಅವನು ತಿಂಗಳಿಗೆ ಬಡ್ಡಿಗಾಗಿ ೦ ರೂಪಾಯಿ ಯನ್ನೂ ಸಾಲಕ್ಕಾಗಿ ೨ ರೂಪಾಯಿಯನ್ನೂ ಕೊಡುತ್ತ ಬಂದರೂ ೬ ವರುಷಗಳೊಳಗಾಗಿ ಅಸಲು ಬಡ್ಡಿ ಸಹ ತೀರಿ ಹೋಗುವುವು. ಳ ಕೂಡುವವನು ಕೂಡ ಬಹಳ ಜಾಗರೂಕನಾಗಿರಬೇಕು. ದುಡಿಕಿ ನಡೆದರೆ ನಷ್ಟವನ್ನು ಹೊಂದುವುದುಂಟು. ಮುಳ್ಳಿನ ಬೇಲಿಯಮೇಲೆ