ಪುಟ:ಅರ್ಥಸಾಧನ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಅತ್ಯಾಕೆ. ಆಶಯಾ ಬಧ್ಯತೇ ಜನ್ನು ಆಶಾ ಪ್ರಾಣಾ೯ ವ್ಯಪೋಹತಿ | ಆಶಾ ದುಃಖಕರೀ ನಿತ್ಯಂ ತಸ್ಮಾದಾಶಾಂ ಪರಿತ್ಯಜೇತ್ || ಲೋಕದಲ್ಲಿ ಜನರಿಗೆ ಅನೇಕ ವಿಷಯಗಳಲ್ಲಿ ಆಶೆಯಿರುವುದು. ಆಕೆಯಿಲ್ಲ ಬಿದ್ದವರು ಯಾವ ಕೆಲಸವನ್ನೂ ಮಾಡಲಾರರು. ಅತ್ಯಾಶೆಯು ಒಳ್ಳೆಯದಲ್ಲ, ವಿದ್ಯೆಯನ್ನೂ ಕೈಗಾರಿಕ ಕೆಲಸಗಳನ್ನೂ ಕಲಿತುಕೊಳ್ಳುವುದರಲ್ಲಿಯ ಧನ ನನ್ನಾರ್ಜಿಸುವುದರಲ್ಲಿಯ ಆಶೆಯು ಅತ್ಯಾವಶ್ಯಕವಾಗಿರಬೇಕು. ದ್ರವ್ಯ ವನ್ನು ಸಂಪಾದಿಸುವುದರಲ್ಲಿ ಅತ್ಯಾಶೆಪಡದೆ ಅವಿಚ್ಛಿನ್ನವಾಗಿ ಕೆಲಸಮಾಡುತ್ತ ಸ್ಪಲ್ಪಸ್ವಲ್ಪ ಲಾಭವನ್ನು ಹೊಂದತಕ್ಕವರುಕೂಡ ಕ್ರಮೇಣ ಭಾಗ್ಯವಂತ ರಾಗುತ್ತಾರೆ. ಅತ್ಯಾಶೆಯಿಂದ ಬಂದೇಸಲ ಹಣಗಾರರಾಗಬೇಕೆಂದು ಪ್ರಯತ್ನ ಪಡುವವರಿಗೆ ಇದ್ದ ಸಂಪತ್ತಿಗೂ ನೈಶ್ಚಿಂತ್ಯಕ್ಕೂ ನ್ಯೂನತೆಯುಂಟಾಗುವು ದುಂಟು. ಇದಕ್ಕೆ ಅನೇಕದೃಷ್ಟಾಂತಗಳಿವೆ. ಬಾಹ್ಮಣಾರ್ಥಭೋಜನಮಾಡಿ ಮನೆಗೆ ಬಂದು ತಲೆಯಲ್ಲಿ ಸಿಕ್ಕಿದ ಒಂದು ಎಳ್ಳುಕಾಳನ್ನು ಹಿಡಿದುಕೊಂಡು ಅದನ್ನು ಬಿತ್ತಿ ಅದರಿಂದ ಬಂದ ಎಳ್ಳನ್ನು ತೆಗೆದುಕೊಂಡು ಮತ್ತೆ ಬಿತ್ತಿ ಅದರಲ್ಲಿ ಬಂದುದನ್ನು ಪುನಃ ಬಿತ್ತಿ ಬೆಳೆಯುತ್ತಾ ಲಕ್ಷಾಂತರಖಂಡುಗಗಳನ್ನು ಬೆಳೆದು ಅವುಗಳನ್ನೆಲ್ಲಾ ವಿಕ ಯಿಸಿ ಐಕ್ಷಠ್ಯವಂತನಾಗುತ್ತೇನೆಂದು ಯೋಚಿಸಿ ಭಗ್ನಮನೋರಥನಾದ ಬ್ರಾಹ್ಮಣನ ಕಥೆಯ, ಒಂದು ಗಡಿಗೆ ರಾಗಿಹಿಟ್ಟನ್ನು ತಿರಿದು ಸಂಪಾದಿಸಿ ಕೊಂಡು ಮನೆಗೆ ಬರುತ್ತಿರುವಾಗ ಆಯಾಸದಿಂದ ಮಾರ್ಗದಲ್ಲಿ ಒಂದು ಮನೆಯಬೀದಿಯ ಜಗುಲಿಯಮೇಲೆ ಕುಳಿತುಕೊಂಡು * ಈ ರಾಗಿಹಿಟ್ಟನ್ನು ಮಾರಿದರೆ ಒಂದು ಹಲವು ಬರುತ್ತದೆ. ಇದಕ್ಕೆ ಒಂದು ಕುರಿಮರಿಯನ್ನು ಆಗದುಕೊಂಡು ಸಾಕಿದರೆ ಅದರಿಂದ ಏಳಂಟು ಮರಿಗಳಾಗುತ್ತವೆ. ಅವು S