ಪುಟ:ಅಶೋಕ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. -ಟಿಜ್ಯ ಬಹು ಭಾಷಾಪಂಡಿತನಾದ ಸರ ವಿಲ್ಯಮ್ ಜೋನ್ಸ್ ಎಂಬ ವಿದ್ವಾಂಸನು ಎಲ್ಲ ಕ್ಕೂ ಮೊದಲು ಚಂದ್ರಗುಪ್ತನೂ, ಬದ್ರುಕೋಟಾಸನೂ ಒಂದೇ ವ್ಯಕ್ತಿಯೆಂದು ಜಗತ್ತಿನೆದುರಿಗೆ ಪ್ರಕಟಿಸಿದನು. ಮುಂದೆ ೪೦ ವರ್ಷಗಳ ತರುವಾಯ ಸಿಂಹಲದ ಸುಪ್ರಸಿದ್ದ ಆನರಬಲ್ ಜಾರ್ಜ್ ಟರ್ನರ್ (Houble George Turnour ) ಎಂಬವರು ದ್ವೀಪವಂಶ, ಮಹಾವಂಶ ಮೊದಲಾದ ಪ್ರಾಚೀನ ಐತಿಹಾಸಿಕ ಗ್ರಂಥ ಗಳು ಮೊದಲಾದ ಸಂಗತಿಗಳ ಸಮಾಲೋಚನೆ ಮಾಡಹತ್ತಿದರು, ಈ ಸಮಾಲೋಚ ನೆಯಿಂದ ಫಲಿತವಾಗಿ ಹೊರಟ ಐತಿಹಾಸಿಕ ಸಂಗತಿಗಳನ್ನು ಅವರು ೧೮೩೬ರಲ್ಲಿ ಏಸಿಯಾಟಕ ಸೊಸಾಯಟಿಯ ಪತ್ರಿಕೆಯಲ್ಲಿ ಎಲ್ಲಕ್ಕೂ ಮೊದಲು ಪ್ರಕಟಿಸಿದರು. ಈ ಕಾಲದಲ್ಲಿಯೇ ಜೇಮ್ ಪ್ರಿನ್ಸೆಸ್ ಎಂಬವರು ಭರತಖಂಡದ ಐತಿಹಾಸಿಕ ವಿಷಯ ಗಳ ಶೋಧಕ್ಕಾಗಿ ನಿಯಮಿಸಲ್ಪಟ್ಟು ಈ ದೇಶಕ್ಕೆ ಬಂದರು, ಅವರು ಎಲ್ಲಕ್ಕೂ ಮೊದಲು ದಿಲ್ಲಿ, ಅಲಹಾಬಾದಗಳ ಸ್ತಂಭ-ಲಿಪಿಗಳನ್ನು ಓದಿ ಅವುಗಳನ್ನು ೧೮೩೭ರಲ್ಲಿ ಏಸಿ ಯಾಟಿಕ್ ಸೋಸಾಯಟಿಯ ಮಾಸಪತ್ರಿಕೆಯಲ್ಲಿ ಪ್ರಕಟಿಸಿದರು. ಮೊದಲು ಅವರು ಈ ಎರಡೂ ಸ್ತಂಭ-ಲಿಪಿಗಳಲ್ಲಿ ಉಲ್ಲೇಖಿಸಲ್ಪಟ್ಟ - ಪ್ರಿಯದರ್ಶಿ ' ಯೂ ಸಿಂಹಲದ ರಾಜನಾದ “ ದೇವಾನಾಂ ಪ್ರಿಯಃ ”ಎಂಬ ಅಭಿಧಾನವುಳ್ಳ ತಿಷ್ಯನೂ ಒಂದೇ ವ್ಯಕ್ತಿ ಯೆಂದು ಊಹೆ ಮಾಡಿದ್ದರು. ಕ್ರಮದಿಂದ ಬೇರೆ ಅನುಶಾಸನಗಳನ್ನು ಓದಲು ಈ ಊಹೆಯು ಸುಳ್ಳೆನಿಸಿತು. ಜಾರ್ಜ್‌ಟರ್ನರ್, ಜೇಮ್ಪ ಪ್ರಿನ್ಸೆಸ್ ಇವರಿಬ್ಬರ ಪ್ರಯತ್ನ ದಿಂದಲೂ, ಪರಿಶ್ರಮದಿಂದಲೂ ಅಶೋಕನ, ಪ್ರಿಯದರ್ಶಿ 'ಯೂ ಒಂದೇ ವ್ಯಕ್ತಿ ಯೆಂಬದು ಎಲ್ಲಕ್ಕೂ ಮೊದಲು ಪ್ರಕಟಿಸಲ್ಪಟ್ಟಿತು. ಈ ಕಾಲದಿಂದಲೇ ಈ ದೇಶದಲ್ಲಿ ಯ ಪರದೇಶಗಳಲ್ಲಿಯೂ ಅಶೋಕನ ವಿಷಯವಾಗಿ ವಿಚಾರವು ಆರಂಭವಾಯಿತು. ಕಳೆದ ೭೪ವರ್ಷಗಳಿಂದ ಈ ವಿಷಯದ ಆಲೋಚನೆಯು ಪಂಡಿತರಲ್ಲಿ ನಡೆದಿರುವದು. ಜರ್ಮನ್, ಫ್ರೆಂಚ, ರಶಿಯನ್ ಮೊದಲಾದ ಭಾಷೆಗಳಲ್ಲಿ ಅಶೋಕನ ವಿಷಯವಾಗಿ ಶೋಧಗಳೂ ವಿಚಾರಗಳೂ ಉಳ್ಳ ಹಲವು ಲೇಖಗಳು ಪ್ರಕಟಿಸಲ್ಪಟ್ಟಿರುವವು. ಬುಲ್ಲರ್, ಸೇನರ್, ಉಲ್ಬನ್ಬರ್ಗ, ಬೂರ್‌ನಫ್, ಬಸಿಪ್ಲಿಫ್, ಕೊಪ್ಪೇನ್, ಸ್ಯಾನಿಸ್ಲಾಸ್, ಜೂಲಿಎನ್, ಲ್ಯಾನ್, ಶೇಫೆಲ್, ಲಾಮಾ ತಾರಾನಾಥ ಮೊದಲಾದ ಪಂಡಿತರು ಅಶೋ ಕನ ವಿಷಯವಾಗಿ ಸಮಾಲೋಚನೆಮಾಡಿರುವರು. ಇಂಗ್ಲಿಷರಲ್ಲಿ ಕನಿಂಗ್‌ಹಾಮ್, ಡಾಉಸನ್, ಎಲ್ಫಿನ್ಸಟನ್, ವಿಲ್ಸನ್, ಆರಖ್ಯಾಯಿನ್, ಪೇರಿ, ರಿಸ್‌ಡೇವಿಡ್, ಫರ್ಗು ಸನ, ವಾಡೆಲ್, ಥಾಮಸ್, ವೈಟ್, ಪ್ರಿನ್ಸೆಸ್ ಮೊದಲಾದ ಪಂಡಿತರೂ, ವಂಗ ದೇಶದ ಡಾ, ರಾಜೇಂದ್ರಲಾಲಮಿತ್ರ, ಆರ್. ಸಿ. ದತ್ಯ ಎಂಬವರೂ ಮುಂಬಯಿಯು