ಪುಟ:ಅಶೋಕ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಷಿ. ೮೭ YYYYv WV///// Crow•••••••••••••••••••••••• ಕ್ರಿಯೆಯನ್ನು ಮಾಡುವರು ಎಂದು ಕೇಳಿದನು. ಆಗ ಸ್ಥವಿರನು ಆ ಅಸಂಖ್ಯ ಭಿಕ್ಷು ಮಂಡಲಿಯಲ್ಲಿ ಅರ್ಹತ್ಪದವನ್ನು ಹೊಂದಿದ ಒಂದು ಸಾವಿರ ಜನರನ್ನು ಧರ್ಮಸಭೆಯ ಸಲುವಾಗಿ ಆರಿಸಿಕೊಂಡನು. ಈ ನಾವಿರ ಜನ ಭಿಕ್ಷುಗಳೆಲ್ಲರೂ ಜಿತೇಂದ್ರಿಯರೂ ,ಧರ್ಮ ತತ್ವಜ್ಞರೂ, ತ್ರಿಪಿಟಕದಲ್ಲಿ ಪಂಡಿತರೂ, ಸರ್ವ ಗುಣಸಂಪನ್ನ ರೂ ಆಗಿದ್ದರು. ಮಹಾ ಕಾಶ್ಯಪ, ಮತ್ತು ಸ್ಥವಿರಯಶ ಇವರ ಮಾರ್ಗವನ್ನ ನುಸರಿಸಿ ಮೌದ್ಗಲಿಪುತ್ರ ತಿಷ್ಯನು ಅವರ ಸಹಾಯದಿಂದ ಪಾಟಲಿಪುತ್ರದಲ್ಲಿ ೩ನೆಯ ಧರ್ಮ ಮಹಾಸಭೆಯನ್ನು ನೆರವೇರಿಸಿ ದನು. ಈ ಧರ್ಮಸಭಾಗೃಹದಲ್ಲಿ ಸ್ಥವಿರನಾದ ತಿಷ್ಯನು ಧರ್ಮಸಂಶಯಗಳನ್ನು ದೂರಮಾಡುವ ಉಪಾಯಗಳ ಸಂಬಂಧವಾಗಿ ವಿಸ್ತ್ರತವಾದ ಈ ಉಪನ್ಯಾಸವನ್ನು ಮಾಡಿ ದನು. ಅಶೋಕನರಪತಿಯ ಆಳಿಕೆಯ •೧೭ನೆಯ ವರ್ಷ ಈ ಧರ್ಮಸಭೆಯ ಉಪದೇಶ ನವ ೯ ತಿಂಗಳವರೆಗೆ ಇತ್ತು. ೭೩ ವರ್ಷ ವಯಸ್ಸಿನ ವೃದ್ಧನಾದ ಮೌದ್ಗಲಿಪುತ್ರ ತಿಷ್ಯನು ಬೌದ್ಧ ಧರ್ಮದ ತತ್ವಗಳನ್ನು ಮತ್ತೆ ಪ್ರಕಟಿಸಿದದರಿಂದ ನಾಲ್ಕದಿಕ್ಕಿಗೆ ತ್ರಿರತ್ನದ ಮಹಿಮೆಯು ಹರಡಿತು. ಈ ತೃತೀಯ ಧರ್ಮಮಹಾಸಭೆಯು ಬುದ್ಧದೇವನ ಮಹಾಸರಿ ನಿರ್ವಾಣವಾದ ೨೩೬ ವರ್ಷಗಳ ತರುವಾಯ ನೆರವೇರಿತೆಂದು ಮೊದಲೇ ಹೇಳಿದೆ. ಈ ಧರ್ಮಮಹಾಸಭೆಯ ವಿಷಯವಾಗಿ ಪಾಶ್ಚಾತ್ಯ ಪಂಡಿತರು ಹಲವು ವಿಧವಾಗಿ ಅಭಿಪ್ರಾಯ ಪಡುತ್ತಾರೆ, ಕೆಲವರು ಧರ್ಮಾಶೋಕನ ಆಳಿಕೆಯಲ್ಲಿ ಧರ್ಮಸಭೆಯ ಅಧಿ ವೇಶನವು ಆಗಿಯೇ ಇಲ್ಲ. ಒಂದು ವೇಳೆ ಇಂಥ ಮಹಾಕಾರ್ಯವು ಅವನ ಆಳಿಕೆಯಲ್ಲಿ ಜರುಗಿದ್ದರೆ ಅವನ ಗಿರಿಲಿಪಿಗಳಲ್ಲಿ ಇಲ್ಲವೆ ಬೇರೆ ಶಾಸನಗಳಲ್ಲಿ ಸ್ವಲ್ಪವಾದರೂ ಉಲ್ಲೇಖವು ಇರಬಹುದಾಗಿತ್ತು. ಈ ಮೂರನೆಯ ಧರ್ಮಸಭೆಯ ಸಂಬಧವಾಗಿ ಸತ್ಯಾಂಶವಿದ್ದರೆ ಭರತಖಂಡದ ಮತ್ತು ಚೀನದೇಶದ ಉಪಾಖ್ಯಾನಗಳಲ್ಲಿ ಅದರ ಉಲ್ಲೇಖವು ಇಲ್ಲದ ಕಾರಣವೇನು ? ಆದದರಿಂದ ಮಹಾವಂಶದಲ್ಲಿ ಹೇಳಿದ ಈ ವೃತ್ತಾಂತವು ಸತ್ಯವೆಂದು ನಂಬುವ ಬಗೆ ಹೇಗೆ ? ಎಂದು ಹೇಳುತ್ತಾರೆ. ಆದರೆ ಈ ಆಕ್ಷೇಪಣೆಗೆ ಇಷ್ಟು ಉತ್ತರವನ್ನು ಹೇಳಬಹುದು. ಈ ವರೆಗೆ ಅಶೋ ಕನ ಎಲ್ಲ ಗಿರಿಲಿಪಿಗಳೂ ಶಾಸನಗಳೂ ಶೋಧಿಸಲ್ಪಟ್ಟಿಲ್ಲ. ಉಪಲಬ್ದವಿದ್ದ ಗಿರಿಲಿಸಿ-ಶಾಸ

  1. ಈ ಉಪದೇಶವು ಅಭಿಧರ್ಮು ಪಿಟಕಾ೦ತರ್ಗತ ಕಥಾವಸ್ತು ಪ್ರಕರಣ ಎಂಬ ಗ್ರಂಥದಲ್ಲಿರುವದು,

• ಮಹಾವ೦ಶದ ಮತದಂತ ಅಶೋಕನ ಆಳಿಕೆಯ ೧೭ನೆಯ ವರ್ಷ ಧನು*ಮಹಾಸಭೆಯ ನೆರೆದಿತ್ತು, ಆದರೆ Vincent Smith ಮೊದಲಾದ ಐತಿಹಾಸಿಕರು ಅಶೋಕನ ಆಳಿಕೆಯ ೩೦ ವರ್ಷ ಗಳಲ್ಲಿ ಈ ಪ್ರಕಾರದ ಪ್ರಸಂಗವು ಆದದ್ದು ಅಸಂಭವವೆಂದು ಹೇಳುವರು. ಯಾಕಂದರೆ ಆತನ ಆಳಿಕೆಯು ರ್೨ನೆಯ ವರ್ಷ ಕೊನೆಯ ಸ್ತಂಭಲಿಪಿಯು ಕೊರೆಯಿಸಲ್ಪಟ್ಟಿತು, ಅವರು ಊಹಿಸುವದೇನಂದರೆ ಮೇಲೆ ಹೇಳಿದ ಕಾಲದ ಒಳಗೇ ಈ ಪ್ರಕಾರದ ದೊಡ್ಡ ಪ್ರಸಂಗವೊದಗಿದ್ದರೆ ಅನುಶಾಸನದಲ್ಲಿ ಎಲ್ಲಿಯಾದರೂ ಆ ವಿಷಯದ ಉಲ್ಲೇಖವಿರುತ್ತಿತ್ತು, ಆದದರಿಂದ ಆಶೋಕನ ಆಳಿಕೆಯು ೩೦ನೆಯ ವರ್ಷ ಧರ್ವುವಹಾ ಸಭೆಯು ನೆರೆದಿರಬೇಕೆಂದು ಅವರು ಹೇಳುವರು.