ಪುಟ:ಅಶೋಕ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟ ಅಶೋಕ ಅಥವಾ ಪ್ರಿಯದರ್ಶಿ. • 'revortive ನಗಳಿಂದ ಅಶೋಕನ ಆಳಿಕೆಯ ಎಲ್ಲ ಘಟನೆಗಳ ವಿಚಾರವನ್ನು ಮಾಡುವದಕ್ಕಾಗುವ ದಿಲ್ಲ, ಶಾಸನ, ಗಿರಿಲಿಪಿಗಳಲ್ಲಿ ಉಲ್ಲಿಖಿತವಾಗಿರುವ ಘಟನೆಗಳು ಮಾತ್ರ ನಿಸ್ಸಂಶಯ ವಾಗಿ ಪ್ರಾಮಾಣಿಕವೆಂದು ಹೇಳಬಹುದು, ಆದರೆ ಯಾವ ಸಂಗತಿಗಳು ಅವುಗಳಲ್ಲಿ ಉಲ್ಲೇಖಿಸಲ್ಪಟ್ಟಿಲ್ಲವೋ ಅವು ಸಂಭವಿಸಲೇ ಇಲ್ಲವೆಂದು ತಿರಸ್ಕರಿಸಲಾಗುವದಿಲ್ಲ. ವಿಶೇಷ ವಾಗಿ ಭರತಖಂಡದಲ್ಲಿ ಬೌದ್ಧಧರ್ಮದ ಇತಿಹಾಸವು ಯತ್ನ ಪೂರ್ವಕವಾಗಿ ರಕ್ಷಿಸಲ್ಪಟ್ಟ ಲ್ಲ. ಮಹಾವಂಶವು ಬಹು ಪ್ರಾಚೀನ ಗ್ರಂಥವು, ಈ ಗ್ರಂಥದಿಂದ ಭರತಖಂಡದ ಹಲವು ಪ್ರಾಚೀನ ಐತಿಹಾಸಿಕ ವೃತ್ತಾಂತಗಳು ಸ್ವೀಕರಿಸಲ್ಪಟ್ಟಿವೆ. ಅಶೋಕನ ಕಾಲದಿಂದ ಈ ವರೆಗೆ ಸಿಂಹಳದೀಪವು ಬೌದ್ಧ ಧರ್ಮದ ಕೇಂದ್ರಸ್ಥಾನವು, ಭರತಖಂಡದ ಭಿಕ್ಷುಗಳು ಸಿಂಹಳದಲ್ಲಿ ಬುದ್ಧದೇವನ ಮಹಿಮೆಯನ್ನು ಪ್ರಚಾರಗೊಳಿಸುತ್ತಿರುವ ಕಾಲದಲ್ಲಿಯೇ ಭರತಖಂಡದ ಇತಿಹಾಸವನ್ನೂ ಪ್ರಚಾರಪಡಿಸುತ್ತಿದ್ದರು. ಇಲ್ಲದಿದ್ದರೆ ಈಗ ನಮಗೆ ಮಹಾವಂಶದಲ್ಲಿ ಅಶೋಕನ ಇಲ್ಲವೆ ಬಿಂದುಸಾರನ ಹೆಸರು ಸಹ ದೊರೆಯುತ್ತಿರಲಿಲ್ಲ. ಗಿರಿಲಿಪಿಗಳಲ್ಲಿಯೂ, ಶಾಸನಗಳಲ್ಲಿಯೂ ಉಲ್ಲಿಖಿತವಾಗಿಲ್ಲವೆಂಬ ಮಾತ್ರದಿಂದ ಮಹಾ ವಂಶದಲ್ಲಿ ವರ್ಣಿತವಾದ ಇಷ್ಟೊಂದು ದೊಡ್ಡ ಪ್ರಸಂಗವು ಅಸತ್ಯವೆಂದು, ಇಲ್ಲವೆ ಕವಿ ಕಲ್ಪಿತವೆಂದು ಬಿಟ್ಟು ಬಿಡುವದು ಸರಿಯಲ್ಲ. ಈ ವಿಷಯದಲ್ಲಿ ಭರತಖಂಡದಲ್ಲಿ ಅಶೋಕಾ ವದಾನವನ್ನು ನೋಡಬಹುದಾದರೂ ಅದರಲ್ಲಿ ಧರ್ಮಸಭೆಯ ಉಲ್ಲೇಖವೇ ಇಲ್ಲ; ಆದರೆ ಅದು ನಿಜವಾದ ಇತಿಹಾಸಗ್ರಂಥವಲ್ಲ; ಅದೊಂದು ಅವದಾನಗ್ರಂಥವು. ಒಂದೆರಡು ಪುರಾಣಗಳ ಹೊರತು ಭರತಖಂಡದ ಯಾವ ಗ್ರಂಥದಲ್ಲಿಯೂ ಅಶೋಕನ ಇಲ್ಲವೆ ಬೌದ್ಧಯುಗದ ಇತಿಹಾಸವು ವಿವರಿಸಲ್ಪಟ್ಟಿಲ್ಲ. ಈವರೆಗೆ ಪ್ರಕಟಿತವಾದ ಚೀನೀಯ ಗ್ರಂಥಗಳೆಲ್ಲ ಅಶೋಕನ ಸಮಕಾಲದವಲ್ಲ. ವಿದೇಶೀಯ ಪ್ರವಾಸಿಕರು ತಾವು ನೋಡಿ ದುದನ್ನೂ, ಜನಮುಖದಿಂದ ಕೇಳಿದುದನ್ನೂ ಬರೆದಿಟ್ಟಿರುವರಲ್ಲದೆ ಭರತಖಂಡದ ಎಲ್ಲ ವೃತ್ತಾಂತಗಳನ್ನು ಬರೆದಿಡುವದು ಅವರಿಗೆ ಸಾಧ್ಯವಲ್ಲ. ಅವರ ಗ್ರಂಥಗಳಲ್ಲಿ ಉಲ್ಲೇಖ ವಿಲ್ಲವೆಂದ ಮಾತ್ರದಿಂದ ಧರ್ಮಮಹಾಸಭೆಯ ಕಥೆಯು ಸಟಿಯೆಂದಾಗಲಿ, ಕಲ್ಪಿತವೆಂದಾ ಗಲಿ ಹೇಳುವದು ಅಸಂಗತವಾಗುವದು.