ಪುಟ:ಅಶೋಕ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F೪ ಅಶೋಕ ಅಥವಾ ಪ್ರಿಯದರ್ಶಿ. wwwಒMMMw ಜಾನ್ಹಾ, ಕಾಂಬೋದಿಯಾ ಮೊದಲಾದ ದೇಶಗಳಿಗೆ ಹೋಯಿತು. ಮಹಾಯಾನ ಸಾಂಪ್ರದಾಯದ ಗ್ರಂಥಗಳೆಲ್ಲ ಸಂಸ್ಕೃತಭಾಷೆಯಲ್ಲಿ ರಚಿತವಾಗಿವೆ. ಬ್ರಹ್ಮದೇಶ ದಲ್ಲಿ ಒಂದು ಕಾಲದಲ್ಲಿ ಮಹಾಯಾನಸಂಪ್ರದಾಯವು ವಿಶೇಷವಾಗಿ ಪ್ರಚಲಿತ ವಾಗಿದ್ದರೂ ಈಗ ಅದರ ವರ್ಚಸ್ಸು ಅಲ್ಲಿ ಸ್ವಲ್ಪವೂ ಇಲ್ಲವೆಂಬದು ಆಶ್ಚರ್ಯ ಕರವಾಗಿರುವದು. ಆದರೆ ಇದರ ಕಾರಣವೇನು? ಯಾವ ಮಹಾಯಾನದ ಗ್ರಂಥ ಗಳೂ ಸ್ತೋತ್ರಾದಿಗಳೂ ಸಂಸ್ಕೃತಭಾಷೆಯಲ್ಲಿ ರಚಿತವಾಗಿ ದಿದ್ದೇಶಗಳಲ್ಲಿ ವ್ಯಾಪಿಸಿ ದ್ದವೋ, ಯಾವ ಮಹಾಯಾನದ ಆಚಾರವ್ಯವಹಾರಗಳೂ, ಭರತಖಂಡದ ಬೌದ್ದ ಸಂಪ್ರದಾಯದವರ ಪ್ರಭಾವವೂ ಬ್ರಹ್ಮ ದೇಶವನ್ನು ವ್ಯಾಪಿಸಿದ್ದವೋ ಆ ಮಹಾಯಾನ ಸಂಪ್ರದಾಯದ ಸ್ಥಳದಲ್ಲಿ ಅದೇ ಬ್ರಹ್ಮ ದೇಶದಲ್ಲಿ ಪಾಲೀಭಾಷೆಯ ಗ್ರಂಥಗಳೂ, ಸಿಂಹ ಲದ ಆಚಾರವ್ಯವಹಾರಗಳೂ, ಸಿಂಹಲದ ಬೌದ್ದ ದರ್ಶನವೂ ಹೇಗೆ ಪ್ರಚಲಿತವಾದವು? ಉನ್ನತಿಯ ಅತ್ಯುಚ್ಚ ಶಿಖರವನ್ನು ಏರಿದ ಮಹಾಯಾನವು ಸ್ವಾಭಾವಿಕ ನಿಯಮಕ್ಕನು ಸಾರವಾಗಿ ಕ್ರಮದಿಂದ ಅವನತಿಯನ್ನು ಹೊಂದುತ್ತ ನಡೆದಿತ್ತೆಂದೂ, ಈ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಗ್ಲಾನಿಯು ಆರಂಭವಾಗಿತ್ತೆಂದೂ, ಕೊನೆಗೆ ಕ್ರಿ. ೧೫೦೦ ರಲ್ಲಿ ಬ್ರಹ್ಮ ದೇಶದಲ್ಲಿ ಬೌದ್ಧಧರ್ಮವು ಸಂಸ್ಕರಿಸಲ್ಪಟ್ಟಿತೆಂದೂ ಇತಿಹಾಸದಿಂದ ತಿಳಿಯುವದು, ಈ ಕಾಲದಲ್ಲಿಯೇ ಅದು ಸಿಂಹಲದ ಬೌದ್ಧ ಧರ್ಮವನ್ನನುಸರಿಸಿ ಹೊಸ ರೂಪವನ್ನು ಧರಿ ಸಿತು. ಹಳೆಯ ಆಚಾರವ್ಯವಹಾರಗಳೂ ಶಾಸ್ತ್ರಗ್ರಂಥಗಳೂ ನಷ್ಟವಾಗಿ ಅವುಗಳ ಸ್ಥಳ ದಲ್ಲಿ ಹೊಸವು ಬಂದವು. ಆದದರಿಂದಲೇ ಈಗ ಬ್ರಹ್ಮ ದೇಶದಲ್ಲಿ ಪಾಲೀ ಬೌದ್ಧಧರ್ಮದ ಪ್ರಭಾವವು ಹೆಚ್ಚಾಗಿರುವದು. ಇದಲ್ಲದೆ ಬ್ರಹ್ಮ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ದೊರೆತ ವಿಹಾರಗಳು, ಸ್ತಂಭಗಳು ಮೊದಲಾದವುಗಳಲ್ಲಿ ಯಾವದೂ ಅಶೋಕನಿರ್ಮಿತವೆಂದು ಸಿದ್ದವಾಗುವದಿಲ್ಲ. ಈ ಎಲ್ಲ ಕಾರಣಗಳಿಂದ ಅಶೋಕನು ಸುವರ್ಣಭೂಮಿಗೆ ಪ್ರಚಾರ ಕರನ್ನು ಕಳಿಸಿದ ವಿಷಯದಲ್ಲಿ ಹಲವರು ಸಂದೇಹಬಡುವರು. ರಾಜಪುತ್ರನಾದ ಮಹೇಂದ್ರನು ನಾಲ್ಕು ಜನ ಅನುಚರರೊಡನೆ ಸಿಂಹಲಕ್ಕೆ ಧರ್ಮಪ್ರಚಾರಕ್ಕೆ ಹೋಗಿದ್ದನು. ಈ ಸಿಂಹಲದೊಡನೆ ಭಾರತಕ್ಕೆ ವಿಶೇಷ ಸಂಬಂಧ ವಿರುವದು, ಈ ಕಾರಣದಿಂದ ಸಿಂಹಲದ ಇತಿಹಾಸವನ್ನು ಇಲ್ಲಿ ಸಂಕ್ಷೇಪವಾಗಿ ಆಲೋ ಚಿಸುವದು ಅಪ್ರಾಸಂಗಿಕವಾಗಲಾರದು. ಮಗಧಾಧಿಪತಿಯ ದೌಹಿತ್ರನಾದ ಸಿಂಹಬಾಹು ವು ರಾಢಪ್ರದೇಶದ ಅಧಿಪತಿಯಾಗಿದ್ದನು. ಆತನ ಹಿರಿಯಮಗನಾದ ವಿಜಯನು ಕಾಲ ಕ್ರಮದಲ್ಲಿ ಯುವರಾಜಪಟ್ಟಕ್ಕೆ ಬಂದಿದ್ದನು. ವಿಜಯನು ದ್ವೇಚ್ಛಾಚಾರಿಯೂ, ಉಚ್ಚಂಖ ಲನೂ, ಪ್ರಜಾಪೀಡಕನೂ ಆಗಿದ್ದನು. ಅವನ ಅನುಚರರೂ ಇಂಥವರೇ ಇದ್ದರು.” ಪ್ರಜೆ ಗಳು ಅವನ ಅತ್ಯಾಚಾರಗಳಿಂದ ಪೀಡಿತರಾಗಿ ಕೊನೆಗೆ ಅರಸನ ಬಳಿಯಲ್ಲಿ ತಮ್ಮ ಕಷ್ಟ ವನ್ನು ಹೇಳಿಕೊಂಡರು. ಸಿಂಹಬಾಹುರಾಜನು ಮಗನನ್ನು ಬಹಳವಾಗಿ ತಿರಸ್ಕರಿಸಿದನು.