ಪುಟ:ಅಶೋಕ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೯೫ MM ಕೆಲವು ದಿವಸಗಳಾದ ಬಳಿಕ ಪ್ರಜೆಗಳು ಮತ್ತೆ ಯುವರಾಜನಿಂದ ತಮಗಾದ ಉಪದ್ರವ ವನ್ನು ಅರಸನಿಗೆ ಹೇಳಿದರು. ಅರಸನು ಬಹಳ ಸಿಟ್ಟಾಗಿ ಮತ್ತೆ ಮಗನಿಗೆ ತಿರಸ್ಕಾರ ಮಾಡಿದನು. ಅರಸನು ಹಲವು ನಾರೆ ತಿರಸ್ಕಾರಮಾಡಿದರೂ ವಿಜಯನಿಗೆ ಬುದ್ದಿ ಬರ ಲಿಲ್ಲ. ಮುಂದೆ ಕೆಲವು ದಿವಸಗಳಾದ ಬಳಿಕ ಪ್ರಜೆಗಳು ಮತ್ತೆ ಗೋಳಿಡುತ್ತ ಯುವ ರಾಜನಿಂದಾದ ಪೀಡೆಗಳನ್ನು ಅರಸನೆದುರಿಗೆ ಹೇಳಿದ್ದಲ್ಲದೆ ಯುವರಾಜನು ಜೀವಂತ ನಾಗಿದ್ದರೆ ತಾವು ಬದುಕುವದೇ ಕಷ್ಟವೆಂದು ಹೇಳಿದರು. ಆಗ ಅರಸನು ಯುವರಾಜ ನಿಗೂ ಅವನ ಏಳುನೂರುಜನ ಅನುಚರರಿಗೂ ಅರ್ಧಮುಂಡನ ಮಾಡಿಸಿ ಸಮುದ್ರದಲ್ಲಿ ಬಿಟ್ಟು ಬರುವ ಆಲೋಚನೆಮಾಡಿದನು, ಅದರಂತೆ ಮೊದಲು ಯುವರಾಜನನ್ನೂ ಅವನ ಅನುಚರರನ್ನೂ ಬಳಿಕ ಅವರ ಹೆಂಡಿರುಮಕ್ಕಳನ್ನೂ ಬೇರೆ ಬೇರೆ ಹಡಗುಗಳಲ್ಲಿ ಕುಳ್ಳಿ ರಿಸಿ ಸಮುದ್ರದಲ್ಲಿ ಬಿಟ್ಟು ಬಂದರು, ಸಮುದ್ರದ ತೆರೆಗಳ ಹೊಡೆತದಿಂದ ಅವರ ಹಡಗ ಗಳು ಬೇರೆ ಬೇರೆ ದೇಶಗಳ ದಂಡೆಗೆ ಹೋಗಿ ಮುಟ್ಟಿದವು. ಎಷ್ಟೋ ದಿವಸಗಳಾದ ಬಳಿಕ ಬಹಳ ಕಷ್ಟವನ್ನು ಸಹಿಸಿ ವಿಜಯನು ತನ್ನ ಏಳುನೂರುಜನ ಅನುಚರರೊಡನೆ ಸಿಂಹಲದ ತಾಮ್ರಪರ್ಣಿಯ ಬಂದರಕ್ಕೆ ಹತ್ತಿದನು. ಆತನು ಅಲ್ಲಿ ಇಳಿದು ಆ ಪ್ರದೇಶ ವೆಲ್ಲ ಕಾಡುಜನರಿಂದ ತುಂಬಿ ಹೋಗಿರುವದನ್ನು ನೋಡಿ ಬಾಹುಬಲದಿಂದ ಅವರೆಲ್ಲ ರನ್ನು ಜಯಿಸಿ ಅನುರಾಧಾಪುರದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದನು. ವಿಜಯನ ಅನುಚರರೂ ಸಿಂಹಲದ ಬೇರೆ ಬೇರೆ ಸ್ಥಳಗಳಲ್ಲಿ ತಮ್ಮ ತಮ್ಮ 'ರಾಜ್ಯಗಳನ್ನು ಸ್ಥಾಪಿಸ ತೊಡಗಿದರು. ಕೊನೆಗೆ ಅವರೆಲ್ಲರೂ ಒಂದಾಗಿ ವಿಜಯನನ್ನು ಮುಖ್ಯನನ್ನಾಗಿ ಮಾಡಿ ಅವನಿಗೆ ಪಟ್ಟಾಭಿಷೇಕ ಮಾಡಿದರು. ಬಳಿಕ ಕೆಲವು ದಿವಸಗಳಾದ ಬಳಿಕ ವಿಜಯನು ಮಧುರೆಯ ಪಾಂಡ್ಯ ರಾಜನ ಮಗಳನ್ನು ಮದುವೆಯಾದನು. ಕ್ರಮದಿಂದ ವಿಜಯನ ನಡತೆಯು ಬದಲಾಯಿತು. ಆತನಿಗೆ ಮಕ್ಕಳಿರಲಿಲ್ಲ. ತನ್ನ ತರುವಾಯ ತನ್ನ ವಿಶಾಲವಾದ ರಾಜ್ಯಕ್ಕೆ ಉತ್ತರಾಧಿ ಕಾರಿಗಳಿಲ್ಲದಿರುವದನ್ನು ನೋಡಿ ಆತನು ತಂದೆಯ ರಾಜ್ಯಕ್ಕೆ ದೂತರನ್ನು ಕಳುಹಿದನು. ಸಿಂಹಬಾಹುರಾಜನು ಆಗ ಮಡಿದುಹೋಗಿದ್ದನು, ಆಗ ವಿಜಯನ ತಮ್ಮನಾದ ಸುಮಿ ತ್ರನು ತಂದೆಯ ಸಿಂಹಾಸನದ ಮೇಲೆ ಕುಳಿತು ಚಕ್ರವರ್ತಿಯಾಗಿ ಆಳುತ್ತಿದ್ದನು. ಸುಮಿ ತ್ರನು ದೂತರಿಂದ ಎಲ್ಲ ವರ್ತಮಾನವನ್ನು ತಿಳಿದು ತನ್ನ ಮಕ್ಕಳನ್ನು ಕುರಿತು ಎಲೈ ಮಕ್ಕಳೆ, ನಾನು ಈಗ ಮುದುಕನಾಗಿದ್ದೇನೆ; ಸಮುದ್ರದ ಆಚೆಗೆ ಹೋಗಿ ರಾಜ್ಯವನ್ನು ಆಳುವದು ನನ್ನಿಂದಾಗದುನಿಮ್ಮಲ್ಲಿ ಯಾರಿಗಾದರೂ ಇಚ್ಛೆಯಿದ್ದರೆ ನನ್ನ ಅಣ್ಣನ ಸಮೃದ್ಧ ವಾದ ರಾಜ್ಯದ ಭಾರವನ್ನು ಸ್ವೀಕರಿಸಬಹುದು.” ಎಂದು ಹೇಳಿದನು. ಕಿರಿಯ ಮಗನಾದ ಪಾಂಡವಾಸದೇವನು ತಂದೆಯ ಆಜ್ಞೆಯನ್ನು ಪಾಲಿಸುವದಕ್ಕೆ ಸಮ್ಮತಿಸಿದನು. ಬಳಿಕ ೩೨ ಜನ ನಾಮಂತರೊಡನೆ ಆತನು ಸಿಂಹಲಕ್ಕೆ ಬಂದನು, ಮತ್ತು ವಿಜ ಯನ ಮರಣದ ತರುವಾಯ ಸಿಂಹಲದ ಚಕ್ರವರ್ತಿಯಾದನು. ಈ ಪಾಂಡವಾಸದೇವನ