ಪುಟ:ಅಶೋಕ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಅಶೋಕ ಅಥವಾ ಪ್ರಿಯದರ್ಶಿ ソ/VVVVVVVVVマッハ YY S+v 14 /yyyy • 4 vvvvvv/YY VYYY \ \4 VV My ಸಂಘದ ಉಪಯೋಗಕ್ಕಾಗಿ ಕೊಡಲ್ಪಟ್ಟಿತು, ಕ್ರಮಕ್ರಮದಿಂದ ಸಿಂಹಲದ ಊರೂರಿಗೂ ಬೌದ್ಧ ವಿಹಾರಗಳೂ ಮಂದಿರಗಳೂ ಸ್ಥಾಪಿಸಲ್ಪಟ್ಟವು, ಸಿಂಹಲನಿವಾಸಿಗಳು ಗುಂಪು ಗುಂಪಾಗಿ ಆ ಪವಿತ್ರಧರ್ಮವನ್ನು ಸ್ವೀಕರಿಸಿ ಭಿಕ್ಷುವ್ರತವನ್ನು ತೆಗೆದುಕೊಳ್ಳಹತ್ತಿದರು. ಸಿಂಹಲ ರಾಜಕುಮಾರಿಯಾದ ಅನುಲೆಯು ಐನೂರು ಜನ ಸಖಿಯರೊಡನೆ ಭಿಕ್ಷುವ್ರತ ವನ್ನು ಸ್ವೀಕರಿಸಿದಳು. ಈ ಕಾಲದಲ್ಲಿ ಸಂಘಮಿತ್ರೆಯೂ ಸಿಂಹಲಕ್ಕೆ ಬಂದು ಭಿಕ್ಷುಣೀ ಸಾಂಪ್ರದಾಯವನ್ನುಂಟುಮಾಡಿದಳು. ಮಹೇಂದ್ರನ ಪ್ರಯತ್ನದಿಂದಲೂ, ದೇವಪ್ರಿಯ ತಿಷ್ಯನ ಅನುರಾಗದಿಂದಲೂ ಕ್ರಮವಾಗಿ ಭೋಧಿವೃಕ್ಷದ ಶಾಖೆಯು ಸಿಂಹಲದಲ್ಲಿ ಊರಲ್ಪಟ್ಟಿತು. ಸಿಂಹಲದಲ್ಲಿ ಬೌದ್ಧಧರ್ಮವನ್ನು ಪ್ರಸಾರಗೊಳಿಸಿದ್ದು ಅಶೋಕ ಮಹಾರಾಜನ ಅಕ್ಷಯ ಕೀರ್ತಿಯು. ಈ ಮೇರೆಗೆ ಅಶೋಕನು ದೇಶದೇಶಾಂತ ರಗಳಲ್ಲಿ ಧರ್ಮಪ್ರಚಾರಮಾಡಿ ಭರತಖಂಡದ ಕೀರ್ತಿಯನ್ನು ಜಗತ್ತಿನಲ್ಲಿ ನೆಲೆ ಗೊಳಿಸಿರುವನು. ೧೨ನೆಯ ಅಧ್ಯಾಯ. –೪೫೫೫sw ಪ್ರಾಣ (ಕುಗಳೆಂದು ಉಪಗುಪ್ತ. ಚೀನ ಬೌದ್ಧ ಗ್ರಂಥಗಳಲ್ಲಿ ಕೆಳಗೆ ಬರೆದ ಮಹಾಪುರುಷರು ಬೌದ್ಧ-ಧರ್ಮ ಆ ಗುರುಗಳೆಂದು ಪ್ರಸಿದ್ಧರಾಗಿರುವರು. ಅವರು:-*ಮಹಾಕಾಶ್ಯಪ, ಅನಂದ, ¥ ಆ ಸನವಾಸ, ಉಪಗುಪ್ತ, ದ್ರಟಕ, ಮಿಚ್ಚಕ, ವಸುಮಿತ್ರ, ಬುದ್ಧನಂದಿ, ಬುದ್ದ ಮಿತ್ರ, ಪಾರ್ಶ್ವ, ಪುಣ್ಯಯಶ, ಅಶ್ವಘೋಷ, ಕಪಿಮಲ, ನಾಗಾರ್ಜುನ, ಕಣ್ಯದೇವ ಅಥವಾ ಆರ್ಯದೇವ, ಅಸಂಗ, ವಸುಬಂಧು ಮುಂತಾದವರು, ಮಾನವಜಾತಿಯ ಕಲ್ಯಾ ಣಕ್ಕಾಗಿ ಬೌದ್ಧಧರ್ಮವನ್ನು ಪ್ರಚಾರಪಡಿಸುವ ಉದ್ದೇಶದಿಂದ ಇವರು ಕಾಲಕಾಲಕ್ಕೆ ಭೂತಲದಲ್ಲಿ ಅವತರಿಸಿದರು. ಉಪಗುಪ್ತನು ಇವರಲ್ಲಿ ನಾಲ್ಕನೆಯವನು, ಮಹಾಯಾನ ವೆಂಬ ಬೌದ್ಧಗ್ರಂಥದಲ್ಲಿ, ಬುದ್ಧದೇವನೂ ಆನಂದನೂ ಉಪಗುಪ್ತನು ಅವತರಿಸುವನೆಂದು ಭವಿಷ್ಯವನ್ನು ಹೇಳಿದಂತೆ ವರ್ಣನೆಯುಂಟು. ಈತನು ಅಶೋಕಚಕ್ರವರ್ತಿಯ ಗುರುವೂ ಧರ್ಮೋಪದೇಶಕನೂ ಆಗಿದ್ದನು. ಈತನ ಅಸಾಧಾರಣವಾದ ವೈರಾಗ್ಯವೂ, ಕಠೋರ ವಾದ ಸಾಧನವೂ, ವಿಲಕ್ಷಣವಾದ ಪ್ರತಿಭೆಯೂ, ಧರ್ಮಪ್ರಚಾರಕ್ಕಾಗಿ ಮಾಡಿದ ನಿಸ್ಸಿಮ ಪರಿಶ್ರಮವೂ ಮಹಾಯಾನಗ್ರಂಥದಲ್ಲಿ ಚೆನ್ನಾಗಿ ವರ್ಣಿಸಲ್ಪಟ್ಟಿರುವವು. ಅಶೋ

  • Asvaghogua's Awakening of faith.