ಪುಟ:ಅಶೋಕ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧an ለለለለለለ/ ለለለሉሉ ቦ የ ኢለለለ/ \\ rsh/s / rish \nh/\nAAAAAAAA ಕನ ಜೀವಮಾನದಲ್ಲಿ ಉಪಗುಪ್ತನ ಸಂಬಂಧವು ಬಹಳ ನಿಕಟವಾಗಿರುವದು, ಈ ಕಾರ ಣದಿಂದ ಉಪಗುಪ್ತನ ಇತಿಹಾಸವನ್ನು ಇಲ್ಲಿ ಸಂಕ್ಷೇಪವಾಗಿ ಆಲೋಚಿಸುವದು ಅಪಾ ಸಂಗಿಕವಾಗಲಾರದು. ಮೂರನೆಯ ಧರ್ಮಗುರುವಾದ ಸನವಾಸನು• ಚಂಪಾನಗರದಲ್ಲಿ ಮಹಾಪರಿ ನಿರ್ವಾಣವನ್ನು ಹೊಂದಲು, ಉಪಗುಪ್ತನು ಆತನ ಪೀಠದಲ್ಲಿ ಕುಳಿತು ಬೌದ್ಧ ಧರ್ಮವನ್ನು ಹಬ್ಬಿಸುವದಕ್ಕಾಗಿ ದೇಶಸಂಚಾರಮಾಡಹತ್ತಿದನು. ಅವನು ಭಾಗೀರಥಿಯನ್ನು ದಾಟಿ ವಿದೇಹ ನಗರದ ವಸುಸಾರನು ಕಟ್ಟಿಸಿದ ವಿಹಾರದಲ್ಲಿ ಕೆಲವು ದಿವಸ ವಾಸಮಾಡಿದನು. ಮುಂದೆ ಗಾಂಧಾರ ಪರ್ವತಕ್ಕೆ ಹೋಗಿ, ಎಷ್ಟೋ ಜನ ಸ್ತ್ರೀಪುರುಷರಿಗೆ ಬೌದ್ಧ ಧರ್ಮದ ದೀಕ್ಷೆಯನ್ನು ಕೊಟ್ಟು ಮಥುರೆಗೆ ನಡೆದನು, ಅಲ್ಲಿ ನಟ, ಭಟ್ಟ ಎಂಬ ಇಬ್ಬರು ವ್ಯಾಪಾರಿ ಗಳು ಕಟ್ಟಿಸಿದ ವಿಹಾರದಲ್ಲಿ ಕೆಲವು ದಿವಸ ವಾಸಮಾಡಿದನು; ಮತ್ತು ಅಲ್ಲಿಯೇ ಮಾರ ನನ್ನು ಸಂಗ್ರಾಮದಲ್ಲಿ ಜಯಿಸಿ, ಸಾವಿರಾರು ಜನರನ್ನು ಬೌದ್ಧ ಧರ್ಮದಲ್ಲಿ ತೆಗೆದುಕೊಂಡ ನು, ಮುಂದೆ ಮಹೇಂದ್ರ ಮತ್ತು ಚಮಸ ಎಂಬ ಇಬ್ಬರು ರಾಜರ ಆಳಿಕೆಯಲ್ಲಿ ಸಿಂಧು ದೇಶಕ್ಕೆ ಹೋಗಿ, ಅಲ್ಲಿರುವ ಹಂಸಾರಾಮವೆಂಬ ಸ್ಥಳದಲ್ಲಿ ವಾಸಮಾಡಿದ್ದನು. ಅಲ್ಲಿಂದ ಕಾಶ್ಮೀರಕ್ಕೆ ಪ್ರಯಾಣಮಾಡಿ, ಅಲ್ಲಿ ಹಲವು ಅಮಾನುಷ ಕೃತಿಗಳನ್ನು ತೋರಿಸಿ, ಅಲ್ಲಿಯ ಜನರನ್ನು ಬೆರಗುಬಡಿಸಿದನು, ತಿಬೇಟದ ಲಾಮಾತಾರಾನಾಥನ ಭಾರತೀಯ ಬೌದ್ಧ ಧರ್ಮವೆಂಬ ಪುಸ್ತಕದಲ್ಲಿ, ಉಪಗುಪ್ತನ ಇತಿಹಾಸವು ವರ್ಣಿಸ ಲ್ಪಟ್ಟಿದೆ. ತಿಬೇಟದ ಗ್ರಂಥಗಳಲ್ಲಿ ಉಪಗುಪ್ತ ಎಂಬ ಹೆಸರಿಗೆ ಬದಲು ಕೆಲವೆಡೆಯಲ್ಲಿ « ರತಿಗುಪ್ತ ” ಎಂಬದಾಗಿ ಉಲ್ಲೇಖವುಂಟು, ಆ ಗ್ರಂಥಗಳಲ್ಲಿ ಆತನು ಕಾಶ್ಮೀರ ವಾಸಿಯೆಂದು ವರ್ಣಿತವಾಗಿದೆ. ಮಂಗೋಲಿಯದ ಕೆಲಕೆಲವು ಪುಸ್ತಕಗಳಲ್ಲಿಯೂ ಆತನ ಉಲ್ಲೇಖವುಂಟು, ನೇಪಾಳದೇಶದ ಗ್ರಂಥಗಳಲ್ಲಿ ಉಪಗುಪ್ತನು ಅಶೋಕನ ಸಮ ಕಾಲೀನನೆಂದೂ, ಪಾಟಲಿಪುತ್ರನಗರದ ಮುಖ್ಯ ಧರ್ಮಗುರುವೆಂದೂ ವರ್ಣನೆಯುಂಟು. ಉಪಗುಪ್ತನು ಮಥುರೆಯಲ್ಲಿ ಹೆಚ್ಚಾಗಿ ವಾಸಮಾಡುತ್ತಿದ್ದನು. ಹೂವೆನ್‌ತ್ಸಾಂಗನು ಮಥುರೆಗೆ ಬಂದಾಗ ಹತ್ತು ಸಂಘಾರಾಮಗಳನ್ನು ನೋಡಿದ್ದನು. ಅವುಗಳಲ್ಲಿ ಸುಮಾರು ಎರಡು ಸಾವಿರ ಭಿಕ್ಷುಗಳು ವಾಸವಾಗಿದ್ದರು. ಮಥುರೆಯ ಸಂಘದಲ್ಲಿ ಹೀನಯಾನಕ್ಕೂ ಮಹಾಯಾನಕ್ಕೂ ಸಮವಾಗಿ ಆದರವಿತ್ತು. ಅಶೋಕನು ಮಥುರೆಯಲ್ಲಿ ಮೂರು ಸ್ತೂಪ ಗಳನ್ನು ಕಟ್ಟಿಸಿದ್ದನು. ಮಹಾತ್ಮನಾದ ತಥಾಗತ, ಸಾರಿಪುತ್ರ, ಮೌದ್ಗಲಿಪುತ್ರ, ಪೂರ್ಣ ಮೈತ್ರಾಣಿಪುತ್ರ, ಉಪಾಲ, ಆನಂದ, ಮಂಜುಶ್ರೀ ಮೊದಲಾಗಿ ಹಲವು ಜನ ಬೋಧಿ • ಕಲಕೆಲವು ಸ್ಥಳಗಳಲ್ಲಿ ಇವನು ಶಂಗನುವ ಸು ಎಂಬ ಹೆಸರಿನಿಂದಲೂ ಪ್ರಸಿದ್ಧನಿರುವನು. t It, Col, Waddel. # Beal's Record of western jyorld, Vo.1.